newsfirstkannada.com

80 ಫೀಟ್ ರಸ್ತೆಯಲ್ಲಿ 65 ಅಡಿಯ ರಾಮನ ಕಟೌಟ್! ಸಖತ್ತಾಗಿದೆ ಎಂದ ರಾಮಭಕ್ತರು

Share :

Published January 21, 2024 at 7:54am

  ಬಾಲ ರಾಮನ ಪ್ರತಿಷ್ಠಾಪನೆಗೆ ಕಾಯುತ್ತಿರುವ ರಾಮಭಕ್ತರು

  ರಾರಾಜಿಸುತ್ತಿದೆ ಬಿಲ್ಲುಧಾರಿ, ತೇಜಸ್ಸುಮಯ ರಾಮನ ಕಟೌಟ್

  2 ತಿಂಗಳು‌ ನಿರಂತರ ಪರಿಶ್ರಮದಿಂದ ರೆಡಿಯಾಯ್ತು ಕಟೌಟ್​​

ಅಯೋಧ್ಯೆಯಲ್ಲಿ‌ ನಡೆಯುತ್ತಿರುವ ಬಾಲ ರಾಮನ ಪ್ರತಿಷ್ಠಾಪನೆಗೆ ರಾಮಭಕ್ತರು ಕಾಯುತ್ತಿದ್ದಾರೆ. ಅದರ ಜೊತೆಗೆ ರಾಮನ ಸೇವೆಗೆ ಹಾತೊರೆಯುತ್ತಿದ್ದಾರೆ.. ಅಯೋಧ್ಯೆಗೆ ಹೋಗಿ ರಾಮನ ಸೇವೆ ಮಾಡುವ ಬದಲು ತಾವು ಇರುವ ಜಾಗದಿಂದಲೇ ರಾಮನಿಗೆ ಭಕ್ತಿಯನ್ನ ಸಮರ್ಪಣೆ ಮಾಡುತ್ತಿದ್ದಾರೆ. ಇದಕ್ಕೆ ದೊಡ್ಡ ಉದಾಹರಣೆ ಇಂದಿರನಗರದ 80 ಫೀಟ್ ರಸ್ತೆಯಲ್ಲಿ 65 ಅಡಿಯ ರಾಮನ ಕಟೌಟ್ ನಿರ್ಮಿಸಿದ್ದಾರೆ. ಈ ಬಿಲ್ಲುಧಾರಿ, ತೇಜಸ್ಸುಮಯ ರಾಮನ ಕಟೌಟ್​​ಗೆ ಎಲ್ಲ ರಾಮನ ಭಕ್ತರು ಮನಸೋಲುತ್ತಿದ್ದಾರೆ.

ಇಂದಿರನಗರದ ಎಂಎಲ್ಎ ರಘು.ಎಸ್ ನೇತೃತ್ವದಲ್ಲಿ ಈ ಕಟೌಟ್ ರೆಡಿಯಾಗಿದೆ. ಸುಮಾರು 2 ತಿಂಗಳು‌ ನಿರಂತರ ಪರಿಶ್ರಮದಿಂದ ಕಟೌಟ್ ಮಾಡಿಸಲಾಗಿದೆ ಅಂತ ಶಾಸಕರು ಹೇಳಿದ್ದಾರೆ.

ಇನ್ನೂ 6 ಕಡೆ ರಾಮನ ಕಟೌಟ್ ಹಾಕುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ರಾಮಭಕ್ತರಿಗೆ ಈ ವರ್ಷ ಹರ್ಷವನ್ನು ಹೆಚ್ಚು ಮಾಡಿದೆ ಅಂದ್ರೆ ತಪ್ಪಗಲ್ಲ,‌ ಹಲವು ವರ್ಷಗಳ ಕನಸು‌ ನನಸಾಗುವ ಕಾಲ ಸಮೀಪಿಸುತ್ತಿರುವಂತೆ ರಾಮಭಕ್ತರಲ್ಲಿ ರೋಮಾಂಚಕವೇ ಸೃಷ್ಟಿಯಾಗುತ್ತಿದೆ ಅಂತ ಶಾಸಕರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

80 ಫೀಟ್ ರಸ್ತೆಯಲ್ಲಿ 65 ಅಡಿಯ ರಾಮನ ಕಟೌಟ್! ಸಖತ್ತಾಗಿದೆ ಎಂದ ರಾಮಭಕ್ತರು

https://newsfirstlive.com/wp-content/uploads/2024/01/ram-Mandir-4-1.jpg

Load More