ಆತನಿಗೆ 65 ವರ್ಷ; ಇಳಿವಯಸ್ಸಿನಲ್ಲೂ ಯುವತಿಯನ್ನು ಮದುವೆ ಆದ ಅಂಕಲ್​​

author-image
Gopal Kulkarni
Updated On
ಆತನಿಗೆ 65 ವರ್ಷ; ಇಳಿವಯಸ್ಸಿನಲ್ಲೂ ಯುವತಿಯನ್ನು ಮದುವೆ ಆದ ಅಂಕಲ್​​
Advertisment
  • 65ನೇ ವಯಸ್ಸಿನಲ್ಲಿ ಸೌಂದರ್ಯದ ಗಣಿಯೊಂದಿಗೆ ಸಪ್ತಪದಿ ತುಳಿದ ವೃದ್ಧ
  • ಇನ್​ಸ್ಟಾಗ್ರಾಮ್​ನಲ್ಲಿ ಸಿಂಗಲ್​ಗಳ ಹೃದಯಕ್ಕೆ ಕಿಚ್ಚು ಹಚ್ಚಿದ ವೈರಲ್ ವಿಡಿಯೋ
  • ವೈರಲ್ ಆಗಿರುವ ವಿಡಿಯೋ ಹಿಂದೆ ಇದೆ ಒಂದು ಟ್ವಿಸ್ಟ್​! ಅಸಲಿ ಕಹಾನಿ ಏನು?

ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಎಂಬ ಹಾಡು ಒಂದು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ದೇಶದಲ್ಲಿ ಅವಿವಾಹಿತರ ಹಾಗೂ ಸಿಂಗಲ್​ ಹುಡುಗರ ಸಂಖ್ಯೆ ಹೆಚ್ಚುತ್ತಿದೆ. ಒಂದು ಆತ್ಮಸಂಗಾತಿಗಾಗಿ ಹುಡುಗರು ಅಲೆದಾಡುವಂತಾಗಿದೆ. ಎಷ್ಟೇ ಹುಡುಕಿದರು, ಅಂತರ್ಜಾತಿಯ ವಿವಾಹವಾಗಲೂ ಕೂಡ ಸಿದ್ಧವೆಂದರೂ ಹುಡುಗಿಯರು ಸಿಗುತ್ತಿಲ್ಲ ಇಂತಹ ಕಾಲಘಟ್ಟದಲ್ಲಿ ಈಗ ಕೆಲವೊಂದು ವಿಡಿಯೋಗಳು ವೈರಲ್ ಆಗಿದೆ ಸಿಂಗಲ್ ಹುಡುಗರ ಹೃದಯಕ್ಕೆ ಮತ್ತಷ್ಟು ಆಘಾತ ನೀಡುತ್ತಿವೆ.

ಮದುವೆಯಾಗುವ ಸರಿಯಾದ ವಯಸ್ಸು ಅಂದ್ರೆ ಅದು 21 ರಿಂದ 35 ವರ್ಷ ಎಂದು ಹೇಳಲಾಗುತ್ತದೆ. ಇದಾಚೆಯೂ ಕೂಡ ಮದುವೆಗಳು ನಡೆದ ಪ್ರಸಂಗಗಳು ಇವೆ. ಆದ್ರೆ ಈ ಕಾಲದಲ್ಲಿ ಒಂದಿಷ್ಟು ಜನರ ಮದುವೆ 35-36 ಹರೆಯದ ಯುವಕರ ಹೃದಯವನ್ನೇ ಹಿಂಡುವಂತೆ ಮಾಡುತ್ತವೆ. ತಮ್ಮ ವೃದ್ಧಾಪ್ಯದಲ್ಲೂ ನಳನಳಿಸುವಂತಹ ಹುಡುಗಿಯನ್ನು ತನ್ನ ಹೆಂಡತಿಯನ್ನಾಗಿಸಿಕೊಂಡು ಹಸೆಮಣೆ ಏರುತ್ತಾರೆ. ಇದನ್ನು ಕಂಡ ಸಿಂಗಲ್ಸ್​ಗಳು ಇನ್ನಷ್ಟು ಎದೆಗೆ ಬೆಂಕಿ ಬಿದ್ದಂತಾಗಿ ಅಂತಹ ವಿಡಿಯೋಗಳನ್ನು ಶೇರ್​ ಮಾಡಿಕೊಂಡು ತಮ್ಮ ಗೋಳುಗಳನ್ನು ತೋಡಿಕೊಳ್ಳುತ್ತಿದ್ದಾರೆ.

ಈಗ ಅಂತಹ ಸಿಂಗಲ್​ಗಳಿಗೆ ಮತ್ತೆ ಹೊಟ್ಟೆಯಲ್ಲಿ ಕೆಂಡಸರಿದಂತೆ ಮಾಡುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ವೃದ್ಧಾಪ್ಯಕ್ಕೆ ಹೊಸ ರಂಗು ತುಂಬಲು 65-70 ಸುಮಾರು ವರ್ಷದ ಅಂಕಲ್ ಒಬ್ಬ ಬ್ಯೂಟಿಫುಲ್ ಹುಡುಗಿಯ ಜೊತೆ ಸಪ್ತಪದಿ ತುಳಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ:ಮಗುವಿನ ಕಾಯಿಲೆ ಗುಣಪಡಿಸಲು ಬ್ಲ್ಯಾಕ್​ ಮ್ಯಾಜಿಕ್ ಮೊರೆ ಹೋದ ಪೋಷಕರು! ನಂತರ ನಡೆದಿದ್ದೇ ಘೋರ ದುರಂತ

ವಿಡಿಯೋದಲ್ಲಿ 65ರ ಆಸುಪಾಸಿನ ವೃದ್ಧ ಒಂದು ಸುಂದರ ಯುವತಿಯ ಕೈ ಹಿಡಿದುಕೊಂಡು ಅಗ್ನಿಕುಂಡವನ್ನು ಸುತ್ತು ಹಾಕುತ್ತಿರುವ ದೃಶ್ಯವಿದೆ. 65 ರಿಂದ 70ರ ಆಸುಪಾಸಿನ ಮುದುಕ ಭರ್ಜರಿಯಾಗಿ ಮಧುಮಗನ ಕಾಸ್ಟ್ಯೂಮ್​ನಲ್ಲಿ ಮಿಂಚುತ್ತಿದ್ದು. ವಿಡಿಯೋ ಮಾಡುತ್ತಿರುವ ಕ್ಯಾಮರಾದ ಕಡೆಗೆ ನೋಡಿದ ವೃದ್ಧ, ಭಾಯಿ, ವಿವಾಹದ ಬಂಧನದಲ್ಲಿ ಬಂಧಿಯಾಗಿ ಮುಂದಿನ ಏಳು ಜನ್ಮದವರೆಗೂ ಇನ್ಯಾರದೋ ಪಾಲಿನವನಾಗಲಿದ್ದೇನೆ. ಇದು ನನ್ನ ಬದುಕಿನ ಅತ್ಯಂತ ಸುಂದರವಾದ ದಿನ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇದು ಭಾರತದ ಏಕೈಕ ರೈಲ್ವೆ ನಿಲ್ದಾಣ.. ಇಲ್ಲಿಂದ ನೀವು ದೇಶದ ಪ್ರತಿ ನಗರಗಳಿಗೂ ಪ್ರಯಾಣ ಬೆಳೆಸಬಹುದು

ಈ ಅಂಕಲ್​ನ ಮದುವೆಯ ವಿಡಿಯೋ ಈಗ ಇನ್​ಸ್ಟಾಗ್ರಾಮ್​ನಲ್ಲಿ ದೊಡ್ಡದಾಗಿ ಸದ್ದು ಮಾಡಿದೆ. ಆದರೆ ಈ ಮದುವೆಯ ವಿಡಿಯೋ ಹಿಂದೆ ಒಂದು ಟ್ವಿಸ್ಟ್ ಇದೆ. ಈ ಒಂದು ವಿಡಿಯೋ ನಿಜವಲ್ಲ ಸ್ಕ್ರಿಪ್ಟೆಡ್​ ಎಂದು ಹೇಳಲಾಗಿದೆ. ಕೇವಲ ಮನರಂಜನೆಯ ದೃಷ್ಟಿಯನ್ನಿಟ್ಟುಕೊಂಡು ಮಾಡಲಾಗಿರುವ ವಿಡಿಯೋ ಎಂದು ಹೇಳಲಾಗಿದೆ. ಈ ಒಂದು ವಿಡಿಯೋ @dharambirharyana ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೆಯಾಗಿದೆ. ಇದರ ಬಗ್ಗೆ ಒಳಹೊಕ್ಕು ನೋಡಿದಾಗ ಈ ಒಂದು ಖಾತೆಯನ್ನ ಪಂಕಜ್​ ರಾಠಿ ಎಂಬ ಹೆಸರಿನವರು ನಿರ್ವಹಿಸುತ್ತಾರೆ ಎಂದು ತಿಳಿದು ಬಂದಿದೆ ಮತ್ತು ಈ ವಿಡಿಯೋವನ್ನು ಅವರೇ ಶೇರ್ ಮಾಡಿರುವುದು ಗೊತ್ತಾಗಿದೆ. ಅವರದೇ ವಿಡಿಯೋವನ್ನು ತನ್ನನ್ನು ತಾನು ವೃದ್ಧನಂತೆ ಕಾಣುವ ಹಾಗೆ ಫಿಲ್ಟರ್ ಮಾಡಿಕೊಂಡು, ತಾನೇ ಒಬ್ಬ ವೃದ್ಧನಂತೆ ನಟನೆ ಮಾಡಿ ವಿಡಿಯೋ ಅಪ್​ಲೋಡ್​ ಮಾಡಿದ್ದಾನೆ ಎಂದು ಹೇಳಲಾಗಿದೆ. ಇಷ್ಟಾದರೂ ಕೂಡ ಜನರು ಇದಕ್ಕೆ ಲಕ್ಷಾಂತರ ಲೆಕ್ಕದಲ್ಲಿ ಲೈಕ್ ಕೊಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment