ನಾಡಿನೆಲ್ಲೆಡೆ 69ನೇ ಕರ್ನಾಟಕ ರಾಜ್ಯೋತ್ಸವ.. ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವ ಜನತೆ

author-image
AS Harshith
Updated On
ನಾಡಿನೆಲ್ಲೆಡೆ 69ನೇ ಕರ್ನಾಟಕ ರಾಜ್ಯೋತ್ಸವ.. ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವ ಜನತೆ
Advertisment
  • ಕರ್ನಾಟಕ ರಾಜ್ಯ ರಚನೆಯ ಐತಿಹಾಸಿಕ ದಿನ
  • ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ರಾಜ್ಯೋತ್ಸವ ಆಚರಣೆ
  • ಚೆನ್ನಮ್ಮ ‌ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು

ನವೆಂಬರ್ 1 ಕನ್ನಡಿಗರ ಪಾಲಿಗೆ ಅತ್ಯಂತ ಸಂಭ್ರಮದ ದಿನ. ಸಡಗರದ ಕ್ಷಣ. ಇದು ಕರ್ನಾಟಕ ರಾಜ್ಯ ರಚನೆಯ ಐತಿಹಾಸಿಕ ದಿನ. ಇದೇ ಕಾರಣದಿಂದ ನವೆಂಬರ್‌ ಒಂದರಂದು ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಗ್ತಿದೆ. ರಾಜ್ಯಾದ್ಯಂತ 69ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂಭ್ರಮ ಮನೆ ಮಾಡಿದೆ.

ಗಡಿ ನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಅದ್ಧೂರಿ ರಾಜ್ಯೋತ್ಸವಕ್ಕೆ ಚಾಲನೆ ನೀಡಲಾಯ್ತು. ಚೆನ್ನಮ್ಮ ‌ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕ- ಯುವತಿಯರ ಜಮಾಯಿಸಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ವೈಭವದ ರಾಜ್ಯೋತ್ಸವವನ್ನು ಆಚರಿಸಿದ್ರು. ಕೆಂಪು-ಹಳದಿ ಬಣ್ಣದ ಬಲೂನ್‌‌ಗಳ ಗುಚ್ಚ ಆಕಾಶಕ್ಕೆ ತೇಲಿ ಬಿಟ್ಟು ಸಂಭ್ರಮಿಸಿದ್ರು.

ಇದನ್ನೂ ಓದಿ: ಮನೆಯಲ್ಲಿ ನೆಮ್ಮದಿಯ ವಾತಾವರಣ, ಪ್ರೇಮಿಗಳಿಗೆ ತುಂಬಾ ಶುಭ ದಿನ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

publive-image

ಇದೇ ವೇಳೆ ನಾಡಧ್ವಜ, ಪುನೀತ್​ ರಾಜಕುಮಾರ್ ಫೋಟೋಗಳನ್ನು ಹಿಡಿದು ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಯುವ ಜನತೆ ಕುಣಿದು ಕುಪ್ಪಳಿಸಿದ್ರು..

ಕೆಂಪು-ಹಳದಿ ಬೆಳಕಿನಲ್ಲಿ ಕಂಗೊಳಿಸಿದ ವಿಧಾನಸೌಧ

ಇನ್ನು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಐತಿಹಾಸಿ ಕಟ್ಟಡಗಳಿಗೆ ಕೆಂಪು ಹಳದಿ ದೀಪಲಂಕಾರ ಮಾಡಲಾಗಿತ್ತು. ವಿಧಾನಸೌಧ ಕಟ್ಟಡ ಕೆಂಪು ಹಾಗೂ ಹಳದಿ ಬಣ್ಣದಲ್ಲಿ ವಿದ್ಯುತ್​ ದೀಪಾಲಂಕಾರದಲ್ಲಿ ಮಿಂದೇಳ್ತು. ಕಟ್ಟಡದ ಸುತ್ತಲೂ ಕನ್ನಡದ ಬಾವುಟಗಳು ರಾರಾಜಿಸಿದ್ವು.. ವಿಧಾನಸೌಧ ಅಷ್ಟೇ ಅಲ್ಲ, ಬಿಬಿಎಂಪಿ ಕಚೇರಿ ಸಹ ಕೆಂಪು ಹಾಗೂ ಹಳದಿ ಬಣ್ಣ ಬೆಳಕಿನಲ್ಲಿ ಜಗಮಗಿಸ್ತಿದೆ.

publive-image

ಇದನ್ನೂ ಓದಿ: ದರ್ಶನ್ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸರು.. ಎಚ್ಚರಿಕೆಯ ಹೆಜ್ಜೆ! ಆಸ್ಪತ್ರೆಗೆ ದಾಖಲು ಯಾವಾಗ?

ಒಟ್ಟಾರೆ ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಇಡೀ ತಿಂಗಳು ಕನ್ನಡದ ಕಂಪು ಎಲ್ಲೆಡೆ ಪಸರಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment