/newsfirstlive-kannada/media/post_attachments/wp-content/uploads/2024/03/KEJRIWAL-6-1.jpg)
ದೆಹಲಿಯ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಗಣನೆಗಳು ಶುರುವಾಗಿವೆ. ಒಂದೇ ಒಂದು ವಾರ ಬಾಕಿಯಿದೆ. ಇದರ ನಡುವೆಯೇ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ಗೆ ಶಾಕ್ ಉಂಟಾಗಿದೆ. ಚುನಾವಣೆಯ ಹೊಸ್ತಿಲಲ್ಲಿಯೇ ಸುಮಾರು 7 ಆಮ್ ಆದ್ಮಿ ಪಕ್ಷದ ಶಾಸಕರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರಗೆ ನಡೆದಿದ್ದಾರೆ.
ಇಲ್ಲಿ ಮತ್ತೊಂದು ಗಮನಿಸಬೇಕಾದ ಸಂಗತಿ ಅಂದ್ರೆ, ರಾಜೀನಾಮೆ ನೀಡಿದ ಯಾವುದೇ ಶಾಸಕನಿಗೆ ಫೆಬ್ರುವರಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಲಾಗಿಲ್ಲ.
ಪಾಲ್ಮಾ ಶಾಸಕಿ ಭಾವನಾ ಗೌರ್ ತಮ್ಮ ರಾಜೀನಾಮೆ ಪತ್ರದಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರನ್ನು ಉದ್ದೇಶಿಸಿ ನಾನು ಸದ್ಯ ಅವರ ಮೇಲೆ ಹಾಗೂ ಅವರ ಪಕ್ಷದ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದೇನೆ ಹೀಗಾಗಿ ನನ್ನ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.ನಾನು ಆಮ್ ಆದ್ಮಿ ಪಕ್ಷದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ, ನಮಗೆ ನಿಮ್ಮ ಮೇಲೆ ಹಾಗೂ ಪಕ್ಷದ ಮೇಲೆ ನಂಬಿಕೆ ಕಳೆದುಹೋಗಿದೆ. ದಯವಿಟ್ಟು ನಮ್ಮ ರಾಜೀನಾಮೆಯನ್ನು ಸ್ವೀಕರಿಸಿ ಎಂದು ಪತ್ರದಲ್ಲಿ ಭಾವನಾ ಗೌರ್ ಮತ್ತು ಮದನ್ಲಾಲ್ ಬರೆದಿದ್ದಾರೆ.
ಇದನ್ನೂ ಓದಿ:ಸೋನಿಯಾ ವಿರುದ್ಧ ರಾಷ್ಟ್ರಪತಿಗೆ ಅವಮಾನ ಮಾಡಿದ ಆರೋಪ.. ಟೀಕಿಸುವ ಭರದಲ್ಲಿ ಹೇಳಿದ್ದೇನು?
ಇನ್ನು ತ್ರಿಲೋಕಪುರಿ ಎಂಎಲ್ಎ ರೋಹಿತ್ ಮೆಹ್ರುಲಿಯಾ, ಜಾನಕಪುರಿ ಶಾಸಕ ರಾಜೇಶಸ್ ರಿಶಿ, ಕಸ್ತೂರಬಾ ನಗರದ ಶಾಸಕ ಮದನ್ ಲಾಲ್ ಮತ್ತು ಮೆಹರುಲಿಯಾ ಕ್ಷೇತ್ರದ ಶಾಸಕ ನರೇಶ್ ಯಾದವ ಪಕ್ಷದಿಂದ ಹೊರಗೆ ಬಂದಿದ್ದಾರೆ. ಇವರ ಜೊತೆಗೆ ಆದರ್ಶ ನಗರದ ಶಾಸಕ ಪವನ್ ಶರ್ಮಾ ಹಾಗೂ ಬಿಜ್ವಾಸಾನ್ ಕ್ಷೇತ್ರದ ಶಾಸಕ ಬಿ ಎಸ್ ಜೂನ್ ಕೂಡ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಆಚೆ ಬಂದಿದ್ದಾರೆ. ಈ ಬಾರಿಯ ಎಲೆಕ್ಷನ್ನಲ್ಲಿ ಟಿಕೆಟ್ ವಂಚಿಗೊಂಡಿರುವ ಕಾರಣ ಇವರು ಪಕ್ಷವನ್ನು ತೊರೆದು ಆಚೆ ಬಂದಿದ್ದಾರೆ. ಮುಂದೆ ಯಾವ ಪಕ್ಷ ಸೇರಲಿದ್ದಾರೆ ಎಂಬುದು ಇನ್ನೂ ಕೂಡ ನಿಗೂಢವಾಗಿಯೇ ಉಳಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ