ಮನುಷ್ಯನಂತೆಯೇ ಅಳುತ್ತವೆ ಪ್ರಮುಖ ಈ ಏಳು ಪ್ರಾಣಿಗಳು; ಯಾವುವು ಗೊತ್ತಾ?

author-image
Gopal Kulkarni
Updated On
ಮನುಷ್ಯನಂತೆಯೇ ಅಳುತ್ತವೆ ಪ್ರಮುಖ ಈ ಏಳು ಪ್ರಾಣಿಗಳು; ಯಾವುವು ಗೊತ್ತಾ?
Advertisment
  • ಪ್ರಾಣಿಗಳು ಮನುಷ್ಯರಂತೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತವೆ
  • ಮನುಷ್ಯನ ಹಾಗೆ ದುಃಖಿಸುವ ಆ ಪ್ರಮುಖ ಪ್ರಾಣಿಗಳು ಯಾವುವು?
  • ನೋವು ಸಂಕಟವಾದಾಗ ಕಣ್ಣೀರು ಇಡುತ್ತವೆ ಈ ಏಳು ಪ್ರಾಣಿಗಳು

ಭಾವನೆಗಳ ಪ್ರಪಂಚದಲ್ಲಿ ಜಗತ್ತಿನ ಸರ್ವ ಜೀವಿಗಳು ಬದುಕುತ್ತವೆ. ಒಂದು ಇರುವೆಯೂ ಕೂಡ ತನ್ನದೇ ಆದ ಭಾವ ಪ್ರಪಂಚದಲ್ಲಿ ಬದುಕುತ್ತದೆ. ಭಾವವನ್ನು ಅಭಿವ್ಯಕ್ತಪಡಿಸಲು ಆಯಾ ಜೀವಿಗೆ ಆಯಾ ಭಾಷೆ ಇದೆ. ಹಲವು ಆಯಾಮಗಳಿವೆ. ಮನುಷ್ಯ ತನ್ನ ಭಾವನೆಯನ್ನು ಅಳು ಹಾಗೂ ನಗುವಿನ ಮೂಲಕ ಆಚೆ ಹಾಕುತ್ತಾನೆ. ಆದ್ರೆ ಪ್ರಾಣಿಗಳು ತಮ್ಮ ಹಾವ ಭಾವದೊಂದಿಗೆ ತಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸುತ್ತವೆ. ಆದ್ರೆ ನೆನಪಿರಲಿ ಪ್ರಪಂಚದ ಈ ಏಳು ಪ್ರಾಣಿಗಳು ಕೂಡ ಮನುಷ್ಯರಂತೆ ಅಳುತ್ತವೆ. ನೋವಾದಾಗ ಕಣ್ಣೀರು ಇಡುತ್ತವೆ. ಮಮ್ಮಲ ಮರುಗುತ್ತವೆ. ಆ ಏಳು ವಿಶೇಷ ಪ್ರಾಣಿಗಳು ಯಾವುವು ಎಂಬುದರ ವಿವರಣೆ ಈ ಲೇಖನದಲ್ಲಿದೆ.

publive-image

ಶ್ವಾನಗಳು; ಶ್ವಾನ ಹಾಗೂ ಮನುಷ್ಯನ ನಡುವಿನ ಸಂಬಂಧ ಸಹಸ್ರಾರು ವರ್ಷಗಳಿಂದ ಸಾಗುತ್ತಾ ಬಂದಿದೆ. ಜಗತ್ತಿನಲ್ಲಿ ಮನುಷ್ಯನಿಗೆ ಅತ್ಯಂತ ಪ್ರಾಮಾಣಿಕವಾದ ಜೊತೆಗಾರ ಅಂದ್ರೆ ಅದು ನಾಯಿ ಮಾತ್ರ. ಶ್ವಾನಗಳು ತಮ್ಮ ನೋವನ್ನು ವ್ಯಕ್ತಪಡಿಸುತ್ತವೆ. ಬೇಸರ ವ್ಯಕ್ತಪಡಿಸುತ್ತವೆ. ಅವು ಕೂಡ ತುಂಬಾ ನೋವು ಆದಾಗ ಕಣ್ಣೀರನ್ನು ಹಾಕುತ್ತವೆ. ತನ್ನ ಮಾಲೀಕನಿಂದ ದೂರವಾದಾಗ ಶ್ವಾನಗಳು ಕಣ್ಣೀರಿಡುತ್ತವೆ, ಅಕ್ಷರಶಃ ಮನುಷ್ಯನಂತೆಯೇ ಅಳುತ್ತವೆ ಎಂದು ತಜ್ಞರು ಹೇಳುತ್ತಾರೆ.

publive-image

ಆನೆಗಳು: ಆನೆಗಳು ಕೂಡ ಮನುಷ್ಯರಂತೆ ಅಳುತ್ತವೆ. ಅವುಗಳು ಬೇಜಾರು ಆದಾಗ ಶೋಕಭರಿತ ಧ್ವನಿಯನ್ನು ಆಚೆ ಹಾಕುತ್ತವೆ. ಕಣ್ಣೀರು ಕೂಡ ಹಾಕುತ್ತವೆ. ಇವು ಸಾಮಾಜಿಕವಾಗಿ ತುಂಬಾ ಬೆರೆತುಕೊಂಡು ಬಿಡುವ ಜೀವಿಗಳು ಹೀಗಾಗಿ ಯಾರನ್ನಾದರೂ ಕಳೆದುಕೊಂಡಾಗ, ತುಂಬಾ ನೋವಾದಾಗ ಆನೆಗಲು ಕಣ್ಣೀರು ಇಡುತ್ತವೆ. ಶೋಕಿಸುತ್ತವೆ.

publive-image

ಬೆಕ್ಕುಗಳು: ಬೆಕ್ಕುಗಳು ಕೂಡ ತುಂಬಾ ನೋವಾದಾಗ ಸಹಜವಾಗಿ ಅಳುತ್ತವೆ. ಅವು ತಮ್ಮ ಧ್ವನಿಯ ಮೂಲಕ ತಮ್ಮ ದುಃಖವನ್ನು ಹೊರಹಾಕುತ್ತವೆ. ಮಿಯಾಂವ್, ಪಿಸ್ ಎಂದು ಅವುಗಳ ಬಾಯಿಯಿಂದ ಹೊರಬರುವ ಶಬ್ದ ಅವುಗಳ ಭಾವನೆಗಳನ್ನು ತಿಳಿಸುತ್ತವೆ. ಬೇಜಾರು ಹಾಗೂ ಭಯವನ್ನು ಅವು ತಮ್ಮ ಧ್ವನಿಯ ಮೂಲಕ ವ್ಯಕ್ತಪಡಿಸುತ್ತವೆ. ಮಾಲೀಕರಿಂದ ತನ್ನ ಜೊತೆಗಾರರಿಂದ ದೂರವಾದ ಬೆಕ್ಕುಗಳು ಕೂಡ ದುಃಖಿಸುತ್ತವೆ. ಮನುಷ್ಯರಂತೆ ಅಳುತ್ತವೆ.

publive-image

ಕೊಲಾ ಕರಡಿಗಳು: ಸಾಮಾನ್ಯವಾಗಿ ಆಸ್ಟ್ರೇಲಿಯಾದಲ್ಲಿ ಕಾಣ ಸಿಗುವ ಕೊಲಾ ಕರಡಿಗಳು ಮನುಷ್ಯರಂತೆಯೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಇವುಗಳು ತುಂಬಾ ಬೇಜಾರುಗೊಂಡಾಗ. ತನ್ನ ಗುಂಪಿನಿಂದ ಬೇರ್ಪಟ್ಟಾ ಶೋಕಿಸುತ್ತವೆ. ಮನುಷ್ಯರಂತೆಯೇ ದುಃಖಿಸುತ್ತವೆ ಹಾಗೂ ಕಣ್ಣೀರು ಇಡುತ್ತವೆ.

ಇದನ್ನೂ ಓದಿ:ಹಸಿ ಹಾಲು ಕುಡಿಯೋದು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ? ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!

publive-image

ಬಾವಲಿಗಳು: ಬಾವಲಿಗಳ ಅಳು ಮನುಷ್ಯರಂತೆಯೇ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ. ಅವುಗಳಿಗೆ ತುಂಬಾ ನೋವಾದಾಗ ಸಂಕಟದ ಸಮಯದಲ್ಲಿದ್ದಾಗ ಮನುಷ್ಯರಂತೆಯೇ ದುಃಖಿಸುತ್ತವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ವಿಟಮಿನ್ D ಕೊರತೆ.. ಸೂರ್ಯನ ಬಿಸಿಲು ಹೇರಳವಾಗಿದ್ದರೂ ಭಾರತೀಯರಿಗಿದೆ ಆರೋಗ್ಯದ ಸಮಸ್ಯೆ; ಏನು ಗೊತ್ತಾ?

publive-image

ಬೆಳ್ಳಕ್ಕಿಗಳು: ಬೆಳ್ಳಕ್ಕಿಗಳನ್ನು ಕಡಲು ಕಾಗೆ ಎಂದೇ ಗುರುತಿಸುತ್ತಾರೆ. ಅವುಗಳಿಗೆ ಆಹಾರ ಬೇಕಾದಾಗ ಹಾಗೂ ಸಂಕಟದ ಸಮಯದಲ್ಲಿದ್ದಾಗ ಅವು ಮನುಷ್ಯರಂತೆಯೇ ದುಃಖಿಸುತ್ತವೆಯಂತೆ. ಅವು ದುಃಖಿಸುವಾಗ ಅವುಗಳ ಧ್ವನಿಯಲ್ಲಿ ಬದಲಾವಣೆಯಾಗುತ್ತದೆ ಎಂದು ಪಕ್ಷಿ ತಜ್ಞರು ಹೇಳುತ್ತಾರೆ.

publive-image

ಮೇಕೆಯ ಮರಿಗಳು: ಪ್ರಮುಖವಾಗಿ ಮೇಕೆಯ ಮರಿಗಳು ಅಳು ಮನುಷ್ಯರ ಅಳುವಿಗೆ ಹೋಲಿಕೆ ಇರುತ್ತದೆ, ಅವುಗಳು ಕೂಡ ಮನುಷ್ಯರಂತೆಯೇ ಶೋಕಿಸುತ್ತವೆ. ಅದರಲ್ಲೂ ಅವು ತನ್ನ ತಾಯಿಯಿಂದ ದೂರವಾದಾಗ ಹಾಗೂ ಅತ್ಯಂತ ಭಯಗೊಂಡಾಗ ಮನುಷ್ಯರಂತೆ ದುಃಖಿಸುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment