ಮಕ್ಕಳ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ.. ಪ್ರಪಂಚ ನೋಡೋ ಮುನ್ನವೇ 7 ನವಜಾತ ಶಿಶುಗಳು ಸಾವು

author-image
Bheemappa
Updated On
ಮಕ್ಕಳ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ.. ಪ್ರಪಂಚ ನೋಡೋ ಮುನ್ನವೇ 7 ನವಜಾತ ಶಿಶುಗಳು ಸಾವು
Advertisment
  • ಆಸ್ಪತ್ರೆಯಲ್ಲಿ ಬೆಂಕಿ ಕಾಣಿಕೊಳ್ಳಲು ನಿಖರವಾದ ಕಾರಣವೇನು.?
  • ಚಿಕಿತ್ಸೆಗೆಂದು ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದ ಪೋಷಕರು
  • ಕೆಲ ಮಕ್ಕಳನ್ನು ರಕ್ಷಣೆ ಮಾಡಿದ್ರೂ 7 ಶಿಶುಗಳನ್ನ ಕಾಪಾಡಲಾಗಲಿಲ್ಲ

ನವದೆಹಲಿ: ಮಕ್ಕಳ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ 7 ನವಜಾತ ಶಿಶುಗಳು ಮೃತಪಟ್ಟಿರುವ ಘಟನೆ ಪೂರ್ವ ದೆಹಲಿಯ ವಿವೇಕ್ ವಿಹಾರ್ ನಗರದಲ್ಲಿ ನಡೆದಿದೆ.

ವಿವೇಕ್ ವಿಹಾರ್ ನಗರದಲ್ಲಿ ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶುಗಳನ್ನು ಚಿಕಿತ್ಸೆಗೆಂದು ದಾಖಲು ಮಾಡಲಾಗಿತ್ತು. ಆದರೆ ರಾತ್ರಿ 11:32ರ ಸುಮಾರಿಗೆ ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 7 ನವಜಾತ ಶಿಶುಗಳು ಮೃತಪಟ್ಟಿವೆ. ಅಲ್ಲದೇ ಮೊದಲ ಮಹಡಿಯಲ್ಲಿದ್ದ 12 ಶಿಶುಗಳನ್ನು ರಕ್ಷಣೆ ಮಾಡಲಾಗಿದೆ. 5 ಮಕ್ಕಳಿಗೆ ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಅಲ್ಲಿನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 9 ಮಕ್ಕಳು ಸೇರಿ 27 ಜನ ಬೆಂಕಿಯಲ್ಲಿ ಸಜೀವ ದಹನ.. ಮೃತದೇಹಗಳನ್ನು ಮೂಟೆಯಲ್ಲಿ ಕಟ್ಟಿ ತಂದ ಸಿಬ್ಬಂದಿ

publive-image

ಇನ್ನು ಮಾಹಿತಿ ತಿಳಿದು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿರುವ 12 ಅಗ್ನಿ ಶಾಮಕ ವಾಹನಗಳು ರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆಯಲ್ಲಿ ಕೆಲವರನ್ನು ರಕ್ಷಣೆ ಮಾಡಿ ಹೊರಕ್ಕೆ ತಂದಿದ್ದಾರೆ. ಆದ್ರೆ ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಂತರ ಈ ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬರಲಿದೆ.

ಇದನ್ನೂ ಓದಿ: T20 ವಿಶ್ವಕಪ್; ರೋಹಿತ್ ಜೊತೆ ಪ್ಲೈಟ್​​ನಲ್ಲಿ ವಿರಾಟ್​ ಕೊಹ್ಲಿ ಹೋಗಲಿಲ್ಲ, ಯಾಕೆ?


">May 26, 2024

ಗುಜರಾತ್​​ನ ರಾಜ್​ಕೋಟ್​ನಲ್ಲಿ ಗೇಮಿಂಗ್‌ ಜೋನ್‌ನಲ್ಲಿ ಎಸಿ ಸ್ಫೋಟಗೊಂಡು ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆಯಲ್ಲಿ ಸುಮಾರು 9 ಮಕ್ಕಳು ಸೇರಿ 27 ಮಂದಿ ಸಜೀವ ದಹನಗೊಂಡಿದ್ದರು. ಇದರ ಬೆನ್ನಲ್ಲೇ ದೆಹಲಿಯಲ್ಲಿ 7 ಮಕ್ಕಳು ಬೆಂಕಿಯಿಂದ ಸಾವನ್ನಪ್ಪಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment