newsfirstkannada.com

ಟೈಲರಿಂಗ್​ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ.. ಒಂದೇ ಕುಟುಂಬದ 7 ಜನರು ಸಾವು

Share :

Published April 3, 2024 at 9:57am

Update April 3, 2024 at 10:46am

    ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ

    ಬೆಂಕಿ ವೇಗವಾಗಿ ಹರಡಿದ ಕಾರಣ ಏಳು ಜನರು ಸಾವು

    ಅಗ್ನಿಶಾಮಕದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿ

ಮಹಾರಾಷ್ಟ್ರ: ಟೈಲರಿಂಗ್​ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಔರಂಗಾಬಾದ್​ನ ಛತ್ರಪತಿ ಸಂಭಾಜಿ ನಗರದಲ್ಲಿ ಬೆಳಕಿಗೆ ಬಂದಿದೆ. ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಏಳು ಜನರು ಸಾವನ್ನಪ್ಪಿದ್ದಾರೆ.

ಅಲ್ಲಿನ ಡಾನಾ ಬಜಾರ್​ನ ಕಂಟೋನ್ಮೆಂಟ್​​ ಪ್ರದೇಶದಲ್ಲಿ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬಟ್ಟೆಗೆ ತಗುಲಿದ ಬೆಂಕಿ ವೇಗವಾಗಿ ಹರಡಿದ ಕಾರಣ ಹೊಗೆ ತುಂಬಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸ್​​ ಆಯುಕ್ತ ಮನೋಜ್​ ಲೋಹಿಯಾ ಮಾತನಾಡಿ, ‘ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಬೆಂಕಿ 2ನೇ ಕಟ್ಟಡಕ್ಕೆ ಪಸರಿಸುವ ಮೂಲಕ ನಿಯಂತ್ರಿಸಲಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದ್ವೇಷದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಇಟ್ಟ ಕಿರಾತಕರು.. ನಾಲ್ಕು ಬೈಕ್​, ಪಕ್ಷಿಗಳು ಸಾವು

‘ಬಟ್ಟೆಯ ಅಂಗಡಿಯ ಮೇಲೆ ಕುಟುಂಬವೊಂದು ವಾಸವಿತ್ತು. ಬೆಂಕಿ ಹಬ್ಬುತ್ತಿದ್ದಂತೆಯೇ ಹೊಗೆ ಜಾಸ್ತಿಯಾಯಿತು. ಇದರಿಂದ ಉಸಿರುಗಟ್ಟಿ ಏಳು ಜನರು ಸಾವನ್ನಪ್ಪಿದ್ದಾರೆ’ ಎಂದು ಪೊಲೀಸ್​ ಆಯ್ತುಕ್ತರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೈಲರಿಂಗ್​ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ.. ಒಂದೇ ಕುಟುಂಬದ 7 ಜನರು ಸಾವು

https://newsfirstlive.com/wp-content/uploads/2024/04/Fire.jpg

Load More