/newsfirstlive-kannada/media/post_attachments/wp-content/uploads/2024/07/Ankola-2.jpg)
ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರಕರಣದ ಭೀಕರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿನ್ನೆಯ ತನಕ ನಾಲ್ಕು ಮೃತದೇಹ ಸಿಕ್ಕಿತ್ತು. ಆದರಿಂದು ಮತ್ತೆ ಮೂರು ಮೃತದೇಹ ಪತ್ತೆಯಾಗಿದೆ.
ಗ್ಯಾಸ್ ಟ್ಯಾಂಕರ್ ಚಾಲಕನ ಶವ ಪತ್ತೆ
ಗಂಗಾವಳಿ ನದಿಯಲ್ಲಿ ಇಬ್ಬರು ಲಾರಿ ಚಾಲಕರ ಮೃತದೇಹ ಸಿಕ್ಕಿದೆ. ಅದರಲ್ಲೊಬ್ಬರನ್ನು ಗ್ಯಾಸ್ ಟ್ಯಾಂಕರ್ ಚಾಲಕ ಮುರುಗನ್ ಮೃತದೇಹ ಎಂದು ಗುರುತಿಸಲಾಗಿದೆ. ಶಿರೂರು ಗುಡ್ಡ ಕುಸಿತದ ವೇಳೆ ಲಾರಿ ಸಮೇತ 45 ವರ್ಷದ ಮುರುಗನ್ ನೀರಿಗೆ ಬಿದ್ದಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಬೇಲಿ ಮೇಲೆ ಬೆಳೆದಿದ್ದ ವಿಷದ ಕಾಯಿ ತಿಂದು 6 ಮಕ್ಕಳು ಅಸ್ವಸ್ಥ.. ಸದ್ಯದ ಪರಿಸ್ಥಿತಿ ಹೇಗಿದೆ?
ಮತ್ತೋರ್ವ ಚಾಲಕನ ಶವ ಪತ್ತೆ
ಮತ್ತೋರ್ವ ವ್ಯಕ್ತಿಯ ಮೃತದೇಹ ಕೂಡ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಅಂಕೋಲಾ ತಾಲೂಕಿನ ಮಂಜಗುಣಿ ಬಳಿಯಲ್ಲಿ ಸಿಕ್ಕಿದೆ. ಇಲ್ಲಿಯವರೆಗೆ 7 ಮೃತದೇಹ ಸಿಕ್ಕಿದೆ. ಸದ್ಯ ನದಿಯಲ್ಲಿ ಹುಡುಕಾಟದ ಕಾರ್ಯಾಚರಣೆ ಮುಂದುವರೆದಿದೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ಪುಟಾಣಿ ಅವಂತಿಕಾಳ ಮೃತದೇಹ ಪತ್ತೆ..
ಆವಂತಿಕಾ ಮೃತದೇಹ ಪತ್ತೆ
ಕುಮಟಾ ತಾಲೂಕಿನ ಗಂಗೆಕೊಳ್ಳದ ಸಮುದ್ರ ತೀರದಲ್ಲಿ ಬಾಲಕಿಯ ಶವ ಕೂಡ ಪತ್ತೆಯಾಗಿದೆ. ಮೃತದೇಹವನ್ನು ಗೋಕರ್ಣದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ