/newsfirstlive-kannada/media/post_attachments/wp-content/uploads/2025/06/Shubhanshu-Shukla-2.jpg)
ಬಾಹ್ಯಾಕಾಶ ಇತಿಹಾಸದಲ್ಲಿ ಭಾರತದ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾನಿಗಳನ್ನ ಌಕ್ಸಿಯೋಂ-4 ನೌಕೆ ಮೂಲಕ ಫಾಲ್ಕನ್ ರಾಕೆಟ್ ಯಶಸ್ವಿಯಾಗಿ ಅಂತರಿಕ್ಷಕ್ಕೆ ಹೊತ್ತೊಯ್ದಿದೆ.
ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಲಾಗಿದೆ. ಪುತ್ರ ಶುಭಾಂಶು ಶುಕ್ಲಾರ ಗಗನಯಾನ ಕ್ಷಣವನ್ನು ಪೋಷಕರು ಕಣ್ತುಂಬಿಕೊಂಡು ಆನಂದಭಾಷ್ಪ ಸುರಿಸಿದ್ದಾರೆ. ಇನ್ನು, ನೌಕೆಯು ನಾಳೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಲಿದೆ. ಭಾರತೀಯ ಕಾಲಮಾನ ಸಂಜೆ 4.30ರ ಸುಮಾರಿಗೆ ರೀಚ್ ಆಗಲಿದೆ.
ಇದನ್ನೂ ಓದಿ: ಶುಭಾಂಶು ಶುಕ್ಲಾರ ಗಗನಯಾನಕ್ಕಾಗಿ ಭಾರತ ಎಷ್ಟು ಕೋಟಿ ಖರ್ಚು ಮಾಡಿದೆ ಗೊತ್ತಾ..?
ಭಾರತದ ಶುಭಾಂಶು ಶುಕ್ಲಾ, ಅಮೆರಿಕಾದ ಪೆಗ್ಗಿ ವಿಟ್ಲನ್, ಪೋಲೆಂಡ್ನ ನವೋಖ್ ಉಝ್ ನಾಸ್ತಿ, ಹಂಗೇರಿಯ ಟಿಬರ್ ಕಪ್ಪು ಫ್ಲೋರಿ ಈ ಪ್ರಾಜೆಕ್ಟ್ನ ಭಾಗವಾಗಿದ್ದಾರೆ. 14 ದಿನಗಳ ಕಾಲ ಐಎಸ್ಎಸ್ನಲ್ಲೇ ಇರುವ ನಾಲ್ವರು ಗಗನಯಾತ್ರಿಗಳು, 60 ರೀತಿಯ ವಿವಿಧ ಪ್ರಯೋಗಗಳನ್ನ ನಡೆಸಲಿದ್ದಾರೆ. ಮುಖ್ಯವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಸೇರಿದಂತೆ 60 ರೀತಿಯ ವಿವಿಧ ಪ್ರಯೋಗ ಮಾಡಲಿದ್ದಾರೆ.
ಶುಭಾಂಶು ಏನು ಮಾಡ್ತಾರೆ..?
ಭಾರತದ ಪರವಾಗಿ ಶುಭಾಂಶು ಶುಕ್ಲಾ ಒಟ್ಟು 7 ವಿವಿಧ ಪ್ರಯೋಗ ಮಾಡಲಿದ್ದಾರೆ. ವಿಶೇಷ ಅಂದರೆ ಶುಕ್ಲಾ ನಡೆಸುವ 7 ಪ್ರಯೋಗಗಳ ಪೈಕಿ ಕರ್ನಾಟಕದ್ದೇ 4 ಪ್ರಯೋಗ ಇದೆ. ಕರ್ನಾಟಕದ ಅಧ್ಯಯನ ಸಂಸ್ಥೆಗಳು ರೂಪಿಸಿರುವ 4 ಪ್ರಯೋಗಗಳು ಅಲ್ಲಿ ನಡೆಯಲಿವೆ. ಜೊತೆಗೆ ದೆಹಲಿಯ 2 ಪ್ರಯೋಗ, ಕೇರಳದ 1 ಪ್ರಯೋಗ ಸಂಬಂಧ ಅಧ್ಯಯನ ನಡೆಯಲಿದೆ.
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಭಾರತ.. ಶುಭಾಂಶು ಶುಕ್ಲಾರಿದ್ದ ನೌಕೆ ಹೊತ್ತು ಯಶಸ್ವಿಯಾಗಿ ಆಕಾಶಕ್ಕೆ ಜಿಗಿದ ಫಾಲ್ಕನ್ ರಾಕೆಟ್
7 ಪ್ರಯೋಗ ನಡೆಸಲಿರುವ ಶುಭಾಂಶು
- ಕಾಳುಗಳ ಮೊಳಕೆ: ಧಾರವಾಡದ ಕೃಷಿ ವಿವಿ, ಐಐಟಿ ಧಾರವಾಡದಿಂದ ಕಾಳುಗಳು ಮೊಳಕೆ ಹೊಡೆಯುವ ಬಗ್ಗೆ ಅಧ್ಯಯನ
- ಗಗನಯಾತ್ರಿಗಳ ಮಸಲ್ ಲಾಸ್: ಬಾಹ್ಯಾಕಾಶದಲ್ಲಿ ಯಾತ್ರಿಗಳ ಮಸಲ್ ಲಾಸ್ ಬಗ್ಗೆ ಬೆಂಗಳೂರಿನ ಬ್ರಿಕ್ ಇನ್ ಸ್ಟೆಮ್ ಸಂಸ್ಥೆ ಅಧ್ಯಯನ
- ಟಾರ್ಡಿಗ್ರೇಡ್: IISC ಯಿಂದ ಕಠಿಣ ಪರಿಸ್ಥಿತಿಯಲ್ಲಿ ಟಾರ್ಡಿಗ್ರೇಡ್ ಸೂಕ್ಷ್ಮಜೀವಿಗಳು ಬದುಕುಳಿಯುವ ಬಗ್ಗೆ ಅಧ್ಯಯನ
ಎಲೆಕ್ಟ್ರಾನಿಕ್ ಡಿಸ್ಪ್ಲೇ: IISC ಬೆಂಗಳೂರಿನಿಂದ ಎಲೆಕ್ಟ್ರಾನಿಕ್ ಡಿಸಪ್ಲೇ ಬಗ್ಗೆ ಅಧ್ಯಯನ - ಖಾದ್ಯ ಸೂಕ್ಷ್ಮ ಪಾಚಿಗಳು: ನವದೆಹಲಿ ICGEBಯ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ 3 ಆಯ್ದ ಖಾದ್ಯ ಸೂಕ್ಷ್ಮ ಪಾಚಿಗಳ ಬೆಳವಣಿಗೆ ಅಧ್ಯಯನ
- ಸೈನೋಬ್ಯಾಕ್ಟೀರಿಯಾ : ನವದೆಹಲಿ ICGEBಯ ಬಾಹ್ಯಾಕಾಶದಲ್ಲಿ ಎರಡು ವಿಧದ ಸೈನೋಬ್ಯಾಕ್ಟೀರಿಯಾಗಳ ಬೆಳವಣಿಗೆಯ ಅಧ್ಯಯನ
- ಆಹಾರ ಬೆಳೆ ಬೀಜಗಳು: ಕೇರಳದ IISTಯ ಸೂಕ್ಷ್ಮ ಗುರುತ್ವಾಕರ್ಷಣೆಗೆ ಒಗ್ಗಿದ ಅಕ್ಕಿ, ಜೋಳ, ಎಳ್ಳು, ಬದನೆಕಾಯಿ, ಟೊಮೆಟೊ ಬೀಜಗಳ ಅಧ್ಯಯನ
ಇದನ್ನೂ ಓದಿ: ‘ನೀವು ಇಲ್ಲದಿದ್ದರೆ..’ ಬಾಹ್ಯಾಕಾಶಕ್ಕೆ ಹೋಗುವ ಮುನ್ನ ಪತ್ನಿ ಬಗ್ಗೆ ಶುಭಾಂಶು ಭಾವನಾತ್ಮಕ ಮಾತು.. ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ