ರಷ್ಯಾದಿಂದ ಮಹಾಕುಂಭಮೇಳಕ್ಕೆ ಬಂದ 7 ಅಡಿ ಎತ್ತರದ ಮಸ್ಕ್ಯುಲರ್ ಬಾಬಾ; ಇವರ ಲೈಫ್ ಜರ್ನಿಯೇ ರೋಚಕ!

author-image
Gopal Kulkarni
Updated On
ರಷ್ಯಾದಿಂದ ಮಹಾಕುಂಭಮೇಳಕ್ಕೆ ಬಂದ 7 ಅಡಿ ಎತ್ತರದ ಮಸ್ಕ್ಯುಲರ್ ಬಾಬಾ; ಇವರ ಲೈಫ್ ಜರ್ನಿಯೇ ರೋಚಕ!
Advertisment
  • ಮಹಾಕುಂಭಮೇಳದಲ್ಲಿ ಕಂಡ ಆಧುನಿಕ ಪರುಶರಾಮ ಬಾಬಾ
  • ರಷ್ಯಾ ತೊರೆದು ಬಂದ ಈ ಬಾಬಾ 30 ವರ್ಷ ಇಲ್ಲಿ ಮಾಡಿದ್ದೇನು?
  • 7 ಅಡಿ ಎತ್ತರದ ಈ ಬಾಬಾರನ್ನ ಮಸ್ಕ್ಯುಲರ್ ಬಾಬಾ ಅನ್ನೋದೇಕೆ?

ಭಾರತ.. ಸಹಸ್ರ ಸಹಸ್ರ ವರ್ಷಗಳಿಂದ ಈ ದೇಶವನ್ನು ಕಾಯ್ದುಕೊಂಡು ಬಂದಿದ್ದು ಇಲ್ಲಿನ ತಪೋಬಲ. ಇದೊಂದು ಅಪ್ಪಟ ಆಧ್ಯಾತ್ಮವನ್ನೇ ಉಸಿರಾಡಿದ ಭೂಮಿ. ನಂಬಿಕೆ ಪರಂಪರೆ, ಜ್ಞಾನ, ಯೋಗ, ತಪಸ್ಸು ಇದರ ಬುನಾದಿ. ಎಂದಿಗೂ ಯಾರ ಮೇಲೂ ದಂಡೆತ್ತಿ ಹೋಗದ ಒಂದೇ ಒಂದು ಸಮುದಾಯ ಅಂದ್ರೆ ಅದು ಈ ದೇಶದ ಸಮುದಾಯ. ಇದು ಎಂದಿಗೂ ಧರ್ಮ ಪ್ರಸಾರಕ್ಕೆ ನಿಂತಿಲ್ಲ. ಕುತ್ತಿಗೆಯ ಮೇಲೆ ಕತ್ತಿಯಿಟ್ಟೊ, ಇಲ್ಲವೇ ಇನ್ಯಾವುದೋ ಆಮಿಷವನ್ನೊಡ್ಡಿಯೋ ನನ್ನ ಧರ್ಮ ಒಪ್ಪು ನನ್ನ ಧರ್ಮವೇ ಶ್ರೇಷ್ಠ ಎಂಬ ಹುಚ್ಚಾಟಗಳಿಗೆ ಹೋಗಿಲ್ಲ. ಆದರೂ ಕೂಡ ಈ ನೆಲದ ಪರಂಪರೆ ಸಂಸ್ಕೃತಿಗೆ ಮನಸೋತು ಸಾವಿರಾರು ಜನರು ಬರುತ್ತಾರೆ. ಹಿಮಾಲಯವನ್ನು ಸೇರುತ್ತಾರೆ. ಮುಕ್ತಿ, ಜ್ಞಾನ, ಅಲೌಕಿಕ ಜಗತ್ತನ್ನು ಕಂಡುಕೊಳ್ಳಲು ಬರುತ್ತಾರೆ. ಅದರಲ್ಲೂ ಕುಂಭಮೇಳ ಅಂತ ಬಂದಾಗಂತೂ ಜಗತ್ತಿನ ನಾನಾ ಭಾಗದಿಂದ ಪುಣ್ಯಸ್ನಾನಕ್ಕೆ ಆಗಮಿಸುತ್ತಾರೆ. ಭಾರತವನ್ನು ನೀವೇಕೆ ಪ್ರೀತಿಸುತ್ತೀರಿ ಎಂದು ಕೇಳಿದಾಗ ಬಗೆ ಬಗೆಯ ಕಾರಣಗಳು ಬರುತ್ತವೆ. ಈಗ ಅಂತಹುದೇ ಒಬ್ಬ ವ್ಯಕ್ತಿ ಕುಂಭಮೇಳಕ್ಕೆ ಆಗಮಿಸಿದ್ದಾರೆ ಅವರು ಮೂಲತಃ ರಷ್ಯಾದವರು.

ಇದನ್ನೂ ಓದಿ:VIDEO: ಕುಂಭ ಮೇಳದಲ್ಲಿ ಓರ್ವ ಮುಳ್ಳಿನ ಸಂತ.. 40 ವರ್ಷಗಳಿಂದ ಮುಳ್ಳೇ ಇವರ ಹಾಸಿಗೆ, ತಲೆದಿಂಬು..!

ಸರಳವಾದ ಕೇಸರಿ ಬಣ್ಣದಲ್ಲಿ ಕಂಗೊಳಿಸುವ ಉದ್ದನೇಯ ಗಡ್ಡ, ಹಿಂದೆ ಜೋತು ಬಿಟ್ಟ ಕೂದಲು.. ರಟ್ಟೆ ಮತ್ತು ಮುಂಗೈ ಬಳಿ ರುದ್ರಾಕ್ಷಿ ಸರ. ನೋಡಿದವರು ಯಾವುದೋ ಮಹಾತಪಸ್ವಿ ಹಿಮಾಲಯದಿಂದ ಇಳಿದು ಮಹಾತೇಜಸ್ಸನ್ನು ಮುಖದಲ್ಲಿ ಹೊತ್ತು ಬಂದಿದ್ದಾರೆ ಎನಿಸಬೇಕು ಅಂತಹ ನಿಲುವು. ಸದ್ಯ ಈ ವ್ಯಕ್ತಿಯ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಇವರನ್ನು ಆಧುನಿಕ ಜಗದ ಪರುಶರಾಮ ಎಂತಲೇ ಕರೆಯಲಾಗುತ್ತದೆ. ಕಾರಣ ಅವರು ಇರುವ ಎತ್ತರ.

publive-image

ಇದನ್ನೂ ಓದಿ:ಮಹಾ ಕುಂಭದ ಅದ್ಭುತ ಫೋಟೋಗಳು.. ಭೋಲೇನಾಥನ ಆರಾಧನೆಯಲ್ಲಿ ತ್ರಿವೇಣಿ ಸಂಗಮ ಹೇಗೆ ಕಾಣ್ತಿದೆ..?

ಮಹಾಕುಂಭಮೇಳದಲ್ಲಿ ಕಾಣಿಸಿಕೊಂಡಿರುವ ಪ್ರೇಮ ಗಿರಿ ಮಹಾರಾಜ ಎಂಬು ಸಾಧು ಬರೋಬ್ಬರಿ 7 ಅಡಿ ಎತ್ತರವಿದ್ದಾರೆ . ಹೀಗಾಗಿಯೇ ಇವರನ್ನು ಆಧುನಿಕ ಯುಗದ ಪರುಶರಾಮ ಎಂದು ಕರೆಯುತ್ತಾರೆ. ಇವರನ್ನು ಪ್ರೀತಿಯಿಂದ ಮಸ್ಕ್ಯುಲರ್ ಬಾಬಾ ಎಂದು ಕೂಡ ಕರೆಯುತ್ತಾರೆ. ಕಾರಣ ಇವರ ಎತ್ತರ ಹಾಗೂ ಕುಸ್ತಿಪಟುವಿನಂತ ಮೈಕಟ್ಟು. ಮೂಲತಃ ರಷ್ಯಾದವರಾದ ಈ ಪ್ರೇಮಗಿರಿ ಮಹಾರಾಜ ಅವರು ಸುಮಾರು 30 ವರ್ಷಗಳಿಂದ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ರಷ್ಯಾದಲ್ಲಿ ಉಪನ್ಯಾಸಕ ವೃತ್ತಿ ಮಾಡಿಕೊಂಡಿದ್ದ ಈ ಬಾಬಾ ಹಿಂದೂ ಧರ್ಮದಿಂದ ಪ್ರಭಾವಿತರಾಗಿ ಕಳೆದ ಮೂವತ್ತು ವರ್ಷಗಳಿಂದ ಆಧಾತ್ಮ ಲೋಕದಲ್ಲಿ ಸಾಧನೆ ಮಾಡುತ್ತಿದ್ದಾರೆ. ಸದ್ಯ ನೇಪಾಳದಲ್ಲಿ ನೆಲೆಸಿರುವ ಬಾಬಾ ಈಗ ಮಹಾಕುಂಭಮೇಳಕ್ಕೆ ಆಗಮಿಸಿದ್ದು. ಕುಂಭಮೇಳದಲ್ಲಿ ಪ್ರಮುಖ ಆಕರ್ಷಣಿಯವಾಗಿ ಗುರುತಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment