Advertisment

ವೈರಲ್ ಜ್ವರ ಬಂದ್ರೆ ಹೆದರಬೇಡಿ.. ಈ 7 ಆಹಾರಗಳನ್ನು ಸೇವಿಸಿದ್ರೆ ಸಾಕು; ಆರೋಗ್ಯಕ್ಕೆ ಇಲ್ಲಿದೆ ಮದ್ದು!

author-image
Gopal Kulkarni
Updated On
ವೈರಲ್ ಜ್ವರ ಬಂದ್ರೆ ಹೆದರಬೇಡಿ.. ಈ 7 ಆಹಾರಗಳನ್ನು ಸೇವಿಸಿದ್ರೆ ಸಾಕು; ಆರೋಗ್ಯಕ್ಕೆ ಇಲ್ಲಿದೆ ಮದ್ದು!
Advertisment
  • ವೈರಲ್ ಫೀವರ್ ಇದ್ದವರು ಈ ಸ್ಟೋರಿ ಓದಲೇಬೇಕು
  • ಈ 7 ಆಹಾರಗಳ ಸೇವನೆಯಿಂದ ನೀವು ಹುಷಾರಾಗ್ತೀರಾ
  • ಈ ಆಹಾರಗಳಲ್ಲಿ ಇವೆ ಫೀವರ್ ಹೋಗಲಾಡಿಸುವ ಶಕ್ತಿ

ಸದ್ಯ ದೇಶದಲ್ಲಿ ಚಳಿಗಾಲದ ಸಮಯ ವೈರಲ್ ಇನ್​ಫೆಕ್ಷನ್​ಗಳು ದಾಳಿಯಿಡುವ ಸಮಯವೂ ಕೂಡ ಹೌದು. ಇಂತಹ ಸಮಯದಲ್ಲಿ ವೈರಲ್ ಫೀವರ್​ ಸರಳವಾಗಿ ಕಾಡಲು ಆರಂಭಿಸುತ್ತವೆ. ಈ ಸಮಯದಲ್ಲಿ ವೈದ್ಯರು ಕೆಲವು ಪಥ್ಯವನ್ನು ಕೂಡ ಹೇಳುತ್ತಾರೆ. ಇಂತಹ ಆಹಾರದಿಂದ ದೂರವಿರಿ. ಇಂತಹ ಆಹಾರವನ್ನು ಮಾತ್ರ ಸೇವಿಸಿ ಎಂದು. ವೈರಲ್ ಫೀವರ್ ಬಂದ ಸಮಯದಲ್ಲಿ ಯಾವೆಲ್ಲಾ ಆಹಾರಗಳನ್ನು ಹೆಚ್ಚು ಸೇವಿಸಬೇಕು ಎಂಬ ಬಗ್ಗೆ ನಿಮಗೆ ಗೊಂದಲಗಳಿದ್ದರೆ. ಆ ಗೊಂದಲಗಳಿಗೆ ಇಲ್ಲಿದೆ ಸ್ಪಷ್ಟನೆ ಈ ಎಂಟು ಆಹಾರಗಳನ್ನು ನಿಮ್ಮದಾಗಿಸಿಕೊಂಡರೆ ವೈರಲ್ ಫೀವರ್​ ಹೇಳದೇ ಕೇಳದೇ ಓಡಿ ಹೋಗುತ್ತದೆ.

Advertisment

ಈ ಎಂಟು ಆಹಾರಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.ಅದರ ಜೊತೆಗೆ ಕರುಳಿನ ಆರೋಗ್ಯವನ್ನು ಹೆಚ್ಚಿಸುವುದರೊಂದಿಗೆ ವೈರಲ್ ಫೀವರ್ ಆದಷ್ಟು ಬೇಗ ಗುಣವಾಗುವಂತೆ ನೋಡಿಕೊಳ್ಳುತ್ತವೆ

publive-image

ಪಾಲಕ್, ನೆಲ್ಲಿಕಾಯಿ, ಶುಂಠಿ ಮತ್ತು ಬೆಳ್ಳಳ್ಳಿ
ಇವು ಮನೆಯ ಅಡುಗೆ ಮನೆಯಲ್ಲಿಯೇ ಸಿಗುವ ಪದಾರ್ಥಗಳು ಹಾಗೂ ನಮ್ಮ ಇಮ್ಯುನಿಟಿಯನ್ನು ಬೂಸ್ಟ್ ಮಡುವ ಮತ್ತು ವೈರಲ್ ಇನ್ಫೆಕ್ಷನ್​ಗಳನ್ನು ತಡೆಯುವ ಮಹಾ ರಾಮಬಾಣದಂತಹ ಆಹಾರ ಪದಾರ್ಥಗಳು. ವಿಟಮಿನ್ ಎ,ಸಿ ಮತ್ತು ಇ ಜೊತೆಗೆ ಆ್ಯಂಟಿ ಆಕ್ಸಿಡೆಂಟ್ಸ್​ಗಳನ್ನು ಹೊಂದಿರುವ ಈ ಪದಾರ್ಥಗಳು, ರಕ್ತದ ಕಣಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತವೆ. ಅದರಲ್ಲೂ ನೆಲ್ಲಿಕಾಯಿಯಲ್ಲಿ ಹೇರಳವಾಗಿ ವಿಟಮಿನ್ ಸಿ ಇರುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅದರ ಜೊತೆಗೆ ಉರಿಯೂತವನ್ನು ಕೂಡ ಕಡಿಮೆ ಮಾಡುತ್ತದೆ. ಇನ್ನು ಶುಂಠಿಯಲ್ಲಿ ಆ್ಯಂಟಿ ವೈರಲ್ ಹಾಗೂ ಉರಿಯೂತ ನಿರೋಧಕ ಶಕ್ತಿ ಇರುವುದರಿಂದ ಇದು ವೈರಲ್ ಜ್ವರವನ್ನು ಬೇಗ ಗುಣ ಮಾಡುತ್ತದೆ.

publive-image

ಅರಿಶಿಣ ಮತ್ತು ತುಳಸಿ
ಅರಿಶಿನ ಮತ್ತು ತುಳಸಿ ಇವುಗಳನ್ನು ವೈರಲ್ ಫೀವರ್ ಆದಾಗ ಸೇವಿಸುವುದರಿಂದ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಅರಿಶಿನದಲ್ಲಿ ಕರ್ಕ್ಯೂಮಿನ್ ಎಂಬ ಪೋಷಕಾಂಶವಿದೆ. ಇದು ಉರಿಯೂತ ನಿರೋಧಕವಾಗಿ ಕೆಲಸ ಮಾಡುತ್ತದೆ. ಇದರಂತೆಯೇ ತುಳಸಿಯಲ್ಲಿ ಆ್ಯಂಟಿ ಮೈಕ್ರೊಬೀಯಾ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್​ಗಳು ಹೇರಳವಾಗಿರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ.

Advertisment

ಇದನ್ನೂ ಓದಿ:ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣಕ್ಕಾಗಿ ಪರದಾಡುತ್ತಿದ್ದೀರಾ? ಈ ಐದು ತರಕಾರಿ ತಪ್ಪದೇ ಸೇವಿಸಿ

publive-image

ಈ ಹಣ್ಣುಗಳನ್ನು ಸೇವಿಸಿ
ಕಿತ್ತಳೆ ಹಣ್ಣು, ನಿಂಬೆ ಹಣ್ಣು, ದ್ರಾಕ್ಷಿ ಹಣ್ಣು ಹೀಗೆ ಸಿಟ್ರಸ್ ಅಂಶಗಳು ಇರುವ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ಬಿಳಿ ರಕ್ತದ ಕಣಗಳು ಹೆಚ್ಚುತ್ತವೆ. ಆಗ ಇಡೀ ದೇಹವೇ ಸೋಂಕುಗಳ ವಿರುದ್ಧ ಯೋಧನಂತೆ ಹೋರಾಡಿ ಗೆಲ್ಲುತ್ತದೆ. ಅದು ಮಾತ್ರವಲ್ಲ ವೈರಲ್ ಫೀವರ್ ಇದ್ದಾಗ ಈ ಹಣ್ಣುಗಳನ್ನು ತಿನ್ನುವುದರಿಂದ ಬಳಲಿಕೆ ಆಯಾಸದಂತಹ ಸಮಸ್ಯೆಗಳು ಕೂಡ ದೂರವಾಗುತ್ತವೆ.

publive-image

ಮೆಡಿಟೇರಿಯನ್ ಡಯಟ್ ನಿಮ್ಮದಾಗಲಿ
ಮೆಡಿಟೇರಿಯನ್ ಡಯಟ್ ಅಂದ್ರೆ ಕೆಲವು ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಕಾಳುಗಳು ಸೇರಿದಂತೆ ಸಾಗರ ಆಹಾರಗಳಾದ ಮೀನು ಕೂಡ ಸೇರಿಕೊಳ್ಳುತ್ತದೆ. ಜೊತೆಗೆ ಈರುಳ್ಳಿ ಬೆಳ್ಳಳ್ಳಿ ಹಾಗೂ ಹಲವು ಆಯುರ್ವೇದಿಕ ಗುಣಗಳಿರುವ ಆಹಾರಗಳು ಮೆಡಿಟೇರಿಯನ್ ಫುಡ್ ಎಂದು ಕರೆಸಿಕೊಳ್ಳುತ್ತವೆ. ಈ ರೀತಿಯ ಆಹಾರಗಳನ್ನು ತಿನ್ನುವುದರಿಂದ ದೇಹದಲ್ಲಿ ಪೋಷಕಾಂಶ ಹೆಚ್ಚಚಾಗಿ ಪೂರೈಕೆಯಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ಉರಿಯೂತದಂತಹ ಸಮಸ್ಯೆಗಳು ಬರದಂತೆ ಕಾಪಾಡುತ್ತವೆ.

Advertisment

ಒರೆಗಾನೊ ಸೊಪ್ಪು
ಈ ಒಂದು ಸೊಪ್ಪು ಹೆಚ್ಚಾಗಿ ಕಾಣಸಿಗುವುದು ಕಾಶ್ಮೀರ ಹಾಗೂ ಹಿಮಾಲಯದಲ್ಲಿ. ದಕ್ಷಿಣ ಭಾರತದಲ್ಲಿ ಈ ಸೊಪ್ಪು ಅಷ್ಟಾಗಿ ಉಪಯೋಗಿಸುವುದಿಲ್ಲ. ಆದರೂ ಕೂಡ ಈ ಒಂದು ಸೊಪ್ಪು ವೈರಲ್ ಫೀವರ್ ಬಂದಾಗ ಸೇವಿಸುವುದರಿಂದ ಬಹಳ ಉಪಯೋಗಗಳು ಇವೆ. ಇದರಲ್ಲಿ ಕರ್ವಾಕ್ರೊಲ್ ಹಾಗೂ ತೈಮೊಲ್ ಎಂಬ ಅಂಶಗಳು ಆ್ಯಂಟಿ ವೈರಲ್ ಹಾಗೂ ಆ್ಯಂಟಿ ಬ್ಯಾಕ್ಟಿರಿಯಾ ಆಗಿ ಕಾರ್ಯನಿರ್ವಹಿಸುವುದರಿಂದ ವೈರಲ್ ಫೀವರ್ ಬಂದಾಗ ಇದನ್ನು ಸೇವಿಸುವುದರಿಂದ ಇನ್​ಫೆಕ್ಷನ್​ಗಳನ್ನು ಸರಳವಾಗಿ ದೂರವಾಗಿಸಬಹುದು

ಇದನ್ನೂ ಓದಿ:ಮಾರುಕಟ್ಟೆಗೆ ಹೋದಾಗ ಮೆಂತೆ ಸೊಪ್ಪು ಖರೀದಿ ಮಾಡೋದು ಮರಿಯಲೇಬೇಡಿ; ಚಳಿಗಾಲಕ್ಕೆ ಎಷ್ಟು ಉಪಯೋಗ ಗೊತ್ತಾ?

publive-image

ಜೇನುತುಪ್ಪ
ಜೇನು ತುಪ್ಪದ ಬಗ್ಗೆ ಸಾಧಾರಣವಾಗಿ ಎಲ್ಲರಿಗೂ ಗೊತ್ತೆ ಇದೆ. ಇದು ಆ್ಯಂಟಿ ಬ್ಯಾಕ್ಟಿರಿಯಾ ಹಾಗೂ ಆ್ಯಂಟಿವೈರಲ್ ಅಂಶವನ್ನು ಹೊಂದಿದೆ ಎಂದು. ಅದರ ಜೊತೆಗೆ ಆ್ಯಂಟಿ ಆಕ್ಸಿಡೆಂಟ್ಸ್​​ಗಲು ಇದರಲ್ಲಿ ಹೇರಳವಾಗಿ ಸಿಗುತ್ತವೆ. ಜೇನುತುಪ್ಪವನ್ನು ಸೇವಿಸುವುದರಿಂದ ಗಂಟಲು ಕಟ್ಟುವಿಕೆ ಹಾಗೂ ಕೆಮ್ಮಿನಿಂದ ರಿಲೀಫ್ ಪಡೆಯಬಹುದು.

Advertisment

ಸೋಂಪು ಕಾಳು
ಸೋಂಪು ಕಾಳಗಳನ್ನು ಹೆಚ್ಚು ಸೇವಿಸುವುರಿಂದ ವೈರಲ್ ಫೀವರ್ ಆದಷ್ಟು ಬೇಗ ಕಡಿಮೆಯಾಗುತ್ತದೆ. ಇದರಲ್ಲಿ ಆ್ಯಿಂಟಿ ಬ್ಯಾಕ್ಟಿರಿಯಾ, ಆ್ಯಂಟಿವೈರಲ್​ನಂತಹ ಅಂಶಗಳು ಇವೆ. ಅದು ಮಾತ್ರವಲ್ಲ, ಈ ಒಂದು ಸೋಂಪು ಕಾಳು ಸೇವಿಸುವುದರಿಂದ ಬಿಳಿ ರಕ್ತಕಣಗಳು ಹೆಚ್ಚಾಗುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಸೋಂಕುಗಳ ವಿರುದ್ಧ ಸಮರ್ಥವಾಗಿ ಹೋರಾಡಲು ದೇಹ ಸ್ಜಜಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment