Advertisment

ತಂದೆಯಿಂದ ಮಕ್ಕಳಿಗೆ ಈ 7 ವಿಶೇಷ ಲಕ್ಷಣಗಳು ಅನುವಂಶಿಕವಾಗಿ ಬರುತ್ತವೆ.. ಯಾವುವು ಗೊತ್ತಾ?

author-image
Gopal Kulkarni
Updated On
ತಂದೆಯಿಂದ ಮಕ್ಕಳಿಗೆ ಈ 7 ವಿಶೇಷ ಲಕ್ಷಣಗಳು ಅನುವಂಶಿಕವಾಗಿ ಬರುತ್ತವೆ.. ಯಾವುವು ಗೊತ್ತಾ?
Advertisment
  • ತಂದೆಯ ಈ 7 ಗುಣಲಕ್ಷಣಗಳು ಮಕ್ಕಳಿಗೆ ಹುಟ್ಟುತ್ತಲೇ ಬರುತ್ತವೆ
  • 2002ರಲ್ಲಿ ನಡೆದ ಆ ಒಂದು ಅಧ್ಯಯನದಲ್ಲಿ ಏನೇನು ಹೇಳಲಾಗಿದೆ?
  • ತಂದೆಯ ಯಾವೆಲ್ಲಾ ಲಕ್ಷಣಗಳು ಮಕ್ಕಳಿಗೆ ಅನುವಂಶಿಕವಾಗಿ ಬರುತ್ತವೆ?

ಮಕ್ಕಳು ತಂದೆಯ ನಡತೆಯಿಂದ, ತಂದೆಯ ಸ್ವಭಾವದಿಂದ ತಂದೆಯ ಪ್ರಭಾವದಿಂದ ಬಹಳಷ್ಟು ಕಲಿಯುತ್ತಾರೆ. ಅಪ್ಪನೇ ಅವರ ಬದುಕಿನ ಮೊಟ್ಟ ಮೊದಲ ಹೀರೋ ಆಗಿರುತ್ತಾನೆ. ಆದ್ರೆ ಎಲ್ಲ ಮಕ್ಕಳಿಗೂ ತಂದೆಯಿಂದ 7 ವಿಶೇಷ ಲಕ್ಷಣಗಳು ಅನುವಂಶಿಕವಾಗಿ ಬರುತ್ತವೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಒಂದು ಮಗು ತಂದೆ ಹಾಗೂ ತಾಯಿಯ ಮುಖ ಲಕ್ಷಣ ಗುಣ ಲಕ್ಷಣ ಹಾಗೂ ಮಾನಸಿಕ ಸ್ಥಿತಿಯನ್ನು ಹೊತ್ತುಕೊಂಡೆ ಭೂಮಿಗೆ ಬರುತ್ತವೆ. ಅವು ತನ್ನ ತಂದೆ ತಾಯಿಯ ಸಮ್ಮಿಲನದ ಒಂದು ಪ್ರತಿರೂಪ. ಆದ್ರೆ ವಿಶೇಷವಾಗಿ ಮಕ್ಕಳು ತಂದೆಯ ಡಿಎನ್​ಎ ಲಕ್ಷಣಗಳನ್ನು ಹೆಚ್ಚು ಹೊಂದಿರುತ್ತವೆ. ಅಂತಹ 7 ಲಕ್ಷಣಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ

Advertisment

publive-image

1 ತಂದೆಯ ಮುಖದ ಹೊಳಪು: ಹುಟ್ಟಿದ ಮಗುವಿನ ಮುಖ ತಂದೆಯಂತಾದರು ಇರಬಹುದು ಇಲ್ಲವೇ ತಾಯಿಯಂತಾದರು ಇರಬಹುದು. ಆದ್ರೆ ಮಗುವಿನ ಮುಖದ ಹೊಳಪು ಮಾತ್ರ ಅವರ ತಂದೆಯನ್ನೇ ಹೋಲುತ್ತದೆ. ಒಂದು ವೇಳೆ ತಂದೆ ಕಪ್ಪಾಗಿ, ದಪ್ಪ ತ್ವಚೆಯನ್ನು ಹೊಂದಿದ್ದು ಹಾಗೆ ಗುಂಗುರು ಕೂದಲನ್ನು ಹೊಂದಿದ್ದರೆ ಮಕ್ಕಳು ಕೂಡ ಅದೇ ಲಕ್ಷಗಣಗಳನ್ನ ಹೊಂದುತ್ತದೆ.

ಇದನ್ನೂ ಓದಿ:1000 ರೂಪಾಯಿ ಹೂಡಿಕೆ ಮಾಡಿ ಲಕ್ಷ ಲಕ್ಷ ಗಳಿಸುತ್ತಿರುವ ಮಹಿಳೆ! ಇದು ಗೃಹಿಣಿಯೊಬ್ಬಳ ಯಶೋಗಾಥೆ

publive-image

2 ಪಾದದ ಗಾತ್ರ: ಹುಟ್ಟಿದ ಮಗು ಮುಖ ಮೈಕಟ್ಟು ತಂದೆಯನ್ನೇ ಹೋಲಲಿ ಅಥವಾ ತಾಯಿಯನ್ನೇ ಹೋಲಲಿ ಆದ್ರೆ ವಯಸ್ಸಿಗೆ ಬಂದ ಮೇಲೆ ಅವರ ಪಾದದ ಗಾತ್ರ ತಂದೆಯಷ್ಟೇ ಇರುತ್ತದೆ. ಇದು ಅನುವಂಶಿಕವಾಗಿ ತಂದೆಯಿಂದ ಮಕ್ಕಳಿಗೆ ಬರುವ ಒಂದು ಗುಣಲಕ್ಷಣ. ಮಕ್ಕಳು ಹೆಚ್ಚು ಕಡಿಮೆ ತಂದೆಯ ಪಾದದ ಪ್ಯಾಟರ್ನ್​​ನನ್ನೇ ಹೊಂದಿರುತ್ತಾರೆ.

Advertisment

ಇದನ್ನೂ ಓದಿ:ಅರಿಶಿನಕ್ಕೂ ಬಂತು ಕೇಡುಗಾಲ ! ಹಳದಿ ಪದಾರ್ಥದಲ್ಲಿದೆ ಹೃದಯಕ್ಕೆ ಮಾರಕವಾಗುವ ಅಂಶ!

publive-image

3 ಕಣ್ಣಿನ ಬಣ್ಣ: ತಂದೆಯ ಅನುವಂಶಿಕ ಗುಣ ಹೆಚ್ಚು ಪ್ರಭಾವ ಬೀರುವುದು ಮಕ್ಕಳ ಕಣ್ಣಿನ ಬಣ್ಣದ ಮೇಲೆ. ಹಲವು ಮಕ್ಕಳ ಕಣ್ಣುಗಳು ನೋಡಲು ತಾಯಿಯನ್ನೇ ಹೋಲುತ್ತಿರುತ್ತವೆ. ಆದ್ರೆ ಕಣ್ಣಿನ ಬಣ್ಣ ಮಾತ್ರ ತಂದೆಯನ್ನೇ ಹೋಲುತ್ತವೆ. ಒಂದು ವೇಳೆ ತಾಯಿ ನೀಲಿ ಕಣ್ಣನ್ನು ಹೊಂದಿದ್ದು ಹಾಗೆ ತಂದೆ ಕಂದು ಬಣ್ಣದ ಕಣ್ಣನ್ನು ಹೊಂದಿದ್ದರೆ ಬಹುತೇಕ ಮಕ್ಕಳು ತಂದೆಯ ಕಣ್ಣಿನ ಬಣ್ಣವನ್ನೇ ಹೊಂದಿರುತ್ತವೆ.

publive-image

4 ಗಣಿತ ಜ್ಞಾನ: ನಿಮಗೆ ನಂಬಲು ಕೊಂಚ ಆಶ್ಚರ್ಯ ಎನಿಸಬಹುದು. ಆದರೂ ಇದು ಸತ್ಯ ಮಕ್ಕಳಲ್ಲಿ ಗಣಿತ ಬಿಡಿಸುವ ಕೌಶಲ್ಯ ತಂದೆಯಿಂದಲೇ ಬಳುವಳಿಯಾಗಿ ಬರುತ್ತದೆ. ಒಂದು ವೇಳೆ ತಂದೆ ಮ್ಯಾಥ್ಸ್​ನಲ್ಲಿ ವೀಕ್ ಇದ್ರೆ ಮಕ್ಕಳು ಕೂಡ ಗಣಿತ ಸಮಸ್ಯೆಗಳನ್ನು ಬಗೆಹರಿಸಲು ಪರದಾಡುತ್ತಾರೆ. ಅವರು ಗಣಿತದಲ್ಲಿ ಪಂಟರ್ ಇದ್ರೆ, ಮಕ್ಕಳು ಕೂಡ ಗಣಿತದಲ್ಲಿ ಪಂಟರ್ ಇರುತ್ತಾರೆ.

Advertisment

publive-image

5 ಹಲ್ಲಿನ ಆರೋಗ್ಯ: ಮಕ್ಕಳ ಹಲ್ಲಿನ ಆರೋಗ್ಯ ಹಾಗೂ ಹಲ್ಲುಗಳ ಆಕಾರ ಬಹುತೇಕ ತಂದೆಯನ್ನೇ ಹೋಲುತ್ತವೆ. ಅದು ಮಾತ್ರವಲ್ಲ ಹಲ್ಲಿನ ಆರೋಗ್ಯವೂ ಕೂಡ ತಂದೆಯನ್ನೇ ಹೋಲುತ್ತವೆ. ತಂದೆಯ ದಂತದ ಆರೋಗ್ಯ ತುಂಬಾ ಬಲಿಷ್ಠವಾಗಿದ್ದರೆ ಮಕ್ಕಳ ದಂತಗಳು ಕೂಡ ಅಷ್ಟೇ ಆರೋಗ್ಯಕರವಾಗಿ ಇರುತ್ತವೆ.

6 ಎತ್ತರ: ಮಕ್ಕಳ ಎತ್ತರ ಅತಿಹೆಚ್ಚು ತಂದೆಯನ್ನೇ ಅನುವಂಶಿಕವಾಗಿಯೇ ಬಂದಿರುತ್ತದೆ. ತಂದೆಯ ಎತ್ತರದ ಅನುಗುಣವಾಗಿ ಅವರು ಕೂಡ ಬೆಳೆಯುತ್ತಾರೆ. ತಂದೆ ಕುಳ್ಳಗೆ ಇದ್ದರೆ ಬಹುತೇಕ ಮಕ್ಕಳು ಕುಳ್ಳಗೆನೇ ಬೆಳೆಯುತ್ತವೆ. ತಂದೆಯ ಎತ್ತರ ಸಾಧಾರಣವಾಗಿ ಇದ್ದರೆ ಮಕ್ಕಳ ಎತ್ತರ ಸಾಧಾರಣವಾಗಿಯೇ ಇರುತ್ತದೆ. ತಂದೆ ತುಂಬಾ ಎತ್ತರವಿದ್ದರೆ ಮಕ್ಕಳು ಕೂಡ ಅವರದೇ ಎತ್ತರವನ್ನು ಭವಿಷ್ಯದಲ್ಲಿ ಪಡೆಯುತ್ತವೆ ಎಂದು ಹೇಳಲಾಗುತ್ತದೆ.

7 ಮುಖ ಲಕ್ಷಣಗಳು: ಮಕ್ಕಳ ಮುಖ ಲಕ್ಷಣಗಳು ಬಹುತೇಕ ತಂದೆಯನ್ನೇ ಹೋಲುತ್ತವೆ. ಅವರ ದವಡೆ ಮೂಗು ಹೆಚ್ಚು ಕಡಿಮೆ ತಂದೆಯನ್ನೇ ಹೋಲುತ್ತವೆ. ಅದು ಮಾತ್ರವಲ್ಲ ಮುಖದ ಹಾವಭಾವವೂ ಕೂಡ ಮುಂದೆ ಅವರನ್ನೇ ಹೋಲುವ ಸಾಧ್ಯತೆಯೂ ಕೂಡ ಇರುತ್ತದೆ. ಈ ಏಳು ವಿಷಯಗಳನ್ನು 2002ರಲ್ಲಿ ಪ್ರಕಟಣೆಗೊಂಡ ನ್ಯೂಕ್ಲೈಕ್ ಆ್ಯಸಿಡ್​ ರಿಸರ್ಚ್ ಎಂಬ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment