ದೇವರ ಉತ್ಸವದಲ್ಲಿ ಘೋರ ಕಾಲ್ತುಳಿತ.. ಜೀವ ಕಳೆದುಕೊಂಡ 7 ಭಕ್ತರು..

author-image
Veena Gangani
Updated On
ದೇವರ ಉತ್ಸವದಲ್ಲಿ ಘೋರ ಕಾಲ್ತುಳಿತ.. ಜೀವ ಕಳೆದುಕೊಂಡ 7 ಭಕ್ತರು..
Advertisment
  • ಕಾಲ್ತುಳಿತದಲ್ಲಿ 30ಕ್ಕೂ ಹೆಚ್ಚು ಭಕ್ತಾದಿಗಳಿಗೆ ಗಂಭೀರ ಗಾಯ
  • ಗಾಯಗೊಂಡವರು ನಾರ್ತ್ ಗೋವಾ ಆಸ್ಪತ್ರೆಗೆ ದಾಖಲು
  • ಘಟನಾ ಸ್ಥಳಕ್ಕೆ ಗೋವಾಸಿಎಂ ಪ್ರಮೋದ್ ಸಾವಂತ್ ಭೇಟಿ

ಪಣಜಿ: ಗೋವಾದಲ್ಲಿ ಕಾಲ್ತುಳಿತದಿಂದ 7 ಭಕ್ತರು ಜೀವ ಕಳೆದುಕೊಂಡಿದ್ದು, ಗಾಯಗೊಂಡವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಪಾಕ್​ನ ಬಣ್ಣ ಬಯಲು ಮಾಡಿದ NIA.. ಪಹಲ್ಗಾಮ್ ದಾಳಿ ತನಿಖೆಗೆ ಹೊಸ ತಿರುವು..!

publive-image

ಗೋವಾದ ಶಿರ್ಗಾಂವ್ ದೇವಾಲಯದಲ್ಲಿ ಜಾತ್ರೆ ನಡೆಯುತ್ತಿತ್ತು. ಇದೇ ವೇಳೆ ಏಕಾಏಕಿ ಜನಜಂಗುಳಿ ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಪರಿಣಾಮ 7 ಜನರು ಸ್ಥಳದಲ್ಲೇ ಸಾವನಪ್ಪಿದ್ದು, 50ಕ್ಕೂ ಹೆಚ್ಚು ಭಕ್ತಾದಿಗಳಿಗೆ ಗಂಭೀರ ಗಾಯವಾಗಿದೆ.

publive-image

ಗಾಯಗೊಂಡವರನ್ನ ಆ ಕೂಡಲೇ ನಾರ್ತ್ ಗೋವಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಘಟನೆ ನಡೆಯುತ್ತಿದ್ದಂತೆ ಗೋವಾ ಸಿಎಂ ಪ್ರಮೋದ್ ಸಾವಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಜೊತೆಗೆ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳ ಬಗ್ಗೆ ವಿಚಾರಿಸಿದ್ರು. ಇನ್ನು ಸಾವಿನ ಸಂಖ್ಯೆಯಲ್ಲಿ ಏರಿಕೆ ಸಾಧ್ಯತೆಗಳಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment