newsfirstkannada.com

Breaking News: ಒರಿಸ್ಸಾದಲ್ಲಿ ಮತ್ತೊಂದು ರೈಲು ದುರಂತ; 7 ಮಂದಿ ಸಾವು, ಒಬ್ಬರು ಗಂಭೀರ

Share :

Published June 8, 2023 at 1:13am

Update June 8, 2023 at 1:18am

    ಮತ್ತೊಂದು ರೈಲು ದುರಂತದಿಂದ ಬೆಚ್ಚಿ ಬಿದ್ದ ಜನರು

    ಗೂಡ್ಸ್​ ರೈಲಿಗೆ ಸಿಲುಕಿ ಪ್ರಾಣ ಬಿಟ್ಟ 7 ಕಾರ್ಮಿಕರು

    ಬಾಲಸೋರ್​ ದುರ್ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ

ಒರಿಸ್ಸಾ: ಇತ್ತೀಚೆಗೆ ಬಾಲಸೋರ್​ನಲ್ಲಿ ತ್ರಿವಳಿ ರೈಲುಗಳ ಡಿಕ್ಕಿ ಹೊಡೆದು 288 ಜನರು ಸಾವನ್ನಪ್ಪಿದ್ದರು. ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಆದರೆ ಆ ಆಘಾತ ಮಾಸುವ ಮುನ್ನವೇ ಮತ್ತೊಂದು ರೈಲು ದುರಂತ ಎದುರಾಗಿದೆ. ಈ ದುರಂತದಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಒಬ್ಬರು ಗಂಭೀರ ಗಾಯಗೊಂಡಿದ್ದಾರೆ,

ಜಜ್‌ಪುರ್‌ ಕಿಯೋಂಜರ್‌ ರೋಡ್‌ ಬಳಿ ಈ ಘಟನೆ ಸಂಭವಿಸಿದೆ. ಮಳೆಗೆ​ ಗೂಡ್ಸ್ ರೈಲಿನ ರೇಕ್ ಬಳಿ 8 ಜನರು ನಿಂತಿದ್ದರು. ಮಳೆಯಿಂದ ರಕ್ಷಿಸಿಕೊಳ್ಳಲು ರೈಲಿನ ರೇಕ್​ ಬಳಿ ನಿಂತಿದ್ದರು. ಈ ವೇಳೆ ರೈಲು ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 7 ಜನರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇತ್ತೀಚಿನ ರೈಲು ದುರಂತ ಮಾಸುವ ಮುನ್ನವೇ ಮತ್ತೊಂದು ಅಘಾತ ಜನರನ್ನು ಬೆಚ್ಚಿ ಬೀಳಿಸಿದೆ. ಹೀಗಾಗಿ 7 ಜನರು ಕಾರ್ಮಿಕರ ಸಾವಿಗೆ ನಿಖರ ಕಾರಣವನ್ನು ತಿಳಿಯಲು ಉನ್ನತ ಮಟ್ಟದ ತನಿಖೆಗೆ ರೈಲ್ವೇ ಇಲಾಖೆ ಆದೇಶಿಸಿದೆ.

ಇನ್ನು ಮೃತರ ಕುಟುಂಬಕ್ಕೆ ಸಿಎಂ ನವೀನ್ ಪಟ್ನಾಯಕ್ ಪರಿಹಾರ ಘೋಷಿಸಿದ್ದಾರೆ. ತಲಾ ₹ 5 ಲಕ್ಷ ಘೋಷಣೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಒರಿಸ್ಸಾದಲ್ಲಿ ಮತ್ತೊಂದು ರೈಲು ದುರಂತ; 7 ಮಂದಿ ಸಾವು, ಒಬ್ಬರು ಗಂಭೀರ

https://newsfirstlive.com/wp-content/uploads/2023/06/train.jpg

Load More