/newsfirstlive-kannada/media/post_attachments/wp-content/uploads/2025/03/7-Major-Changes.jpg)
ಏಪ್ರಿಲ್ 1 ರಿಂದ ಬದಲಾಗಲಿರುವ ಹಲವು ಹಣಕಾಸು ನಿಯಂತ್ರಣಗಳ ಕೆಲವು ನಿಯಮಗಳು ಇಡೀ ದೇಶದ ಜನರ ಮೇಲೆ ಭಾರೀ ಪರಿಣಾಮ ಬೀರಲಿದೆ. ಇಲ್ಲಿ ಆ ಬಗ್ಗೆ ಹಲವು ವಿಸ್ತೃತ ವಿವವರಗಳಿವೆ. ಯುನಿಫೈಡ್ ಪೆನ್ಸನ್ ಸ್ಕೀಮ್ ಸೇರಿ ಟ್ಯಾಕ್ಸ್ ಸ್ಲ್ಯಾಬ್ ಮತ್ತು ಯುಪಿಐಗಳಲ್ಲಿ ಹಲವು ಪರಿಣಾಮಕಾರಿ ಬದಲಾವಣೆಗಳಾಗಲಿದ್ದು. ನಿಮ್ಮ ಜೇಬಿಗೆ ಮತ್ತಷ್ಟು ಬಿಸಿ ಮುಟ್ಟಿಸಲಿವೆ.
ಹಣಕಾಸು ಹೊಸ ವರ್ಷ ಏಪ್ರಿಲ್ 1 ರಿಂದ ಆರಂಭವಾಗಲಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCI) ಯುಪಿಐ ಮೂಲಕ ಮಾಡಲಾಗುವ ವ್ಯವಹಾರಗಳಿಗೆ ಹೊಸ ನಿಯಮಗಳನ್ನು ಜಾರಿ ಮಾಡಲು ಸಜ್ಜಾಗಿದೆ. ವ್ಯವಹಾರಗಳಲ್ಲಾಗುವ ಸಮಸ್ಯೆಗಳನ್ನು ತಗ್ಗಿಸಲು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಜಾರಿಗೆ ತರಲು ಸಿದ್ಧಗೊಂಡಿದೆ. ಪಿಎಸ್ಪಿ ಅಂದ್ರೆ ಪೇಮೆಂಟ್ ಸರ್ವಿಸ್ ಪ್ರೊವೈಡರ್ಸ್ ಮತ್ತು ಬ್ಯಾಂಕ್ಗಳು ತಮ್ಮ ಆ್ಯಪ್ಗಳನ್ನು ಪ್ರತಿವಾರ ಮೊಬೈಲ್ ನಂಬರ್ಗಳ ದಾಖಲೆಗಳನ್ನ ಅಪ್ಡೇಟ್ ಮಾಡಿಕೊಳ್ಳಬೇಕು.
ಬ್ಯಾಂಕ್ ಪೇಮೆಂಟ್ ಸರ್ವಿಸ್ ಪ್ರೊವೈಡರಸ್ ಮತ್ತು ಯುಪಿಐನ ಥರ್ಡ್ ಪಾರ್ಟಿ ಪ್ರೊವೈಡರ್ಸ್ಗಳಾದ ಫೋನ್ ಪೇ, ಜಿಪೇ ಮತ್ತು ಪೇಟಿಎಂಗಳು ಸದ್ಯ ಪರಿಚಯಗೊಂಡಿರುವ ಯುಪಿಐನ ಹೊಸ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಇದನ್ನೂ ಓದಿ:NTPC ಗ್ರೀನ್ ಎನರ್ಜಿ ನೇಮಕಾತಿ 2025; ಹುದ್ದೆಗಳಿಗೆ ಅರ್ಜಿ ಆಹ್ವಾನ.. ಉದ್ಯೋಗಕ್ಕೆ ಆಯ್ಕೆ ಹೇಗೆ ನಡೆಯುತ್ತೆ?
ಇನ್ನು ಕೇಂದ್ರ ಸರ್ಕಾರ ಯುನಿಫೈಡ್ ಪೆನ್ಶನ್ ಸ್ಕೀಮ್ನ್ನು ಪರಿಚಯ ಮಾಡುತ್ತಿದೆ. ಇದು ಏಪ್ರಿಲ್ 1,2025ರಿಂದ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ. ಸುಮಾರು 23 ಲಕ್ಷ ಸರ್ಕಾರಿ ನೌಕರರಿಗೆ ಇದು ಲಾಭದಾಯಕವಾಗಲಿದೆ ಎಂದು ಹೇಳಲಾಗುತ್ತಿದೆ. ಯಾರು ಕನಿಷ್ಠ 25 ವರ್ಷ ಸರ್ಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸಿದ್ದಾರೋ ಅವರು ಶೇಖಡಾ 50 ರಷ್ಟು ತಮ್ಮ ಬೇಸಿಕ್ ಸ್ಯಾಲರಿಯಷ್ಟು ನಿವೃತ್ತಿ ಹಣವನ್ನು ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಜಿಎಸ್ಟಿಯಲ್ಲಿ ಆಗಿರುವ ಸುಧಾರಣೆಗಳು ಇದೇ ವರ್ಷ ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ಜಿಎಸ್ಟಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸಲು ತೆರಿಗೆದಾರರು ಕಡ್ಡಾಯವಾಗಿ ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಷನ್ನ್ನು ಬಳಸಬೇಕು. ಮತ್ತು ಇ-ವೇ ಬಿಲ್ ಮೂಲಕವೇ ದಾಖಲೆಗಳನ್ನು ಪಡೆಯಬೇಕು
ಇದನ್ನೂ ಓದಿ:ಮೊಟ್ಟೆ ಮತ್ತು ಜ್ಯೂಸ್ ಮಾರಾಟಗಾರರಿಗೆ GST ನೋಟಿಸ್.. ಕಾರಣವೇನು?
ಇನ್ನು ಹೊಸ ಟ್ಯಾಕ್ಸ್ ಸ್ಲ್ಯಾಬ್ ಕೂಡ ಏಪ್ರಿಲ್ 1 ರಿಂದಲೇ ಆರಂಭವಾಗಲಿದೆ. ಕಳೆದ ಬಜೆಟ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವರ್ಷಕ್ಕೆ 12 ಲಕ್ಷ ರೂಪಾಯಿ ಆದಾಯ ಇರುವ ಯಾವುದೇ ವ್ಯಕ್ತಿಯೂ ಟ್ಯಾಕ್ಸ್ ಕಟ್ಟುವ ಅವಶ್ಯಕತೆಯಿಲ್ಲ ಎಂದು ಸೊನ್ನೆ ಆದಾಯ ತೆರಿಗೆಯ ಪ್ರಮಾಣವನ್ನು ವರ್ಷಕ್ಕೆ 12 ಲಕ್ಷಕ್ಕೆ ಏರಿಸಿದ್ದಾರೆ. ಅದು ಕೂಡ ಇದೇ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
ಹಲವು ವಿಭಾಗಗಳಲ್ಲಿ ಟಿಡಿಎಸ್ನ್ನು ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರು ತಮ್ಮ ಖಾತೆಯಲ್ಲಿರುವ 1 ಲಕ್ಷ ರೂಪಾಯಿಯ ಮೇಲೆ ಹೆಚ್ಚಿನ ಬಡ್ಡಿದರವನ್ನು ಪಡೆಯಲಿದ್ದಾರೆ. ಇದು ಕೂಡ ಏಪ್ರಿಲ್ 1,2025ರಿಂದ ಜಾರಿಗೆ ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ