Advertisment

3 ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಕಾರಿನಲ್ಲಿ ಪ್ರಾಣ ಬಿಟ್ಟ ದುರಂತ; ಕಾರಣವೇನು?

author-image
admin
Updated On
3 ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಕಾರಿನಲ್ಲಿ ಪ್ರಾಣ ಬಿಟ್ಟ ದುರಂತ; ಕಾರಣವೇನು?
Advertisment
  • ಕಾರಿನ ಒಳಗೆ ನೋಡಿದಾಗ ಒಂದೇ ಕುಟುಂಬದ 6 ಮಂದಿ ದುರಂತ
  • 7ನೇ ವ್ಯಕ್ತಿ ಕಾರಿನ ಹೊರಗೆ ಬಂದು ಸ್ಥಳೀಯರಿಗೆ ನೋವು ಹೇಳಿದ
  • ಇಬ್ಬರು ಹೆಣ್ಣು ಮತ್ತು ಒಬ್ಬ ಗಂಡು ಮಗ ಸೇರಿ 7 ಮಂದಿ ದಾರುಣ ಅಂತ್ಯ

ಮನೆಯ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಒಂದೇ ಕುಟುಂಬದ 7 ಮಂದಿ ಜೀವ ಕಳೆದುಕೊಂಡಿರುವ ದಾರುಣ ಘಟನೆ ಹರಿಯಾಣದ ಪಂಚಕುಲದಲ್ಲಿ ಬೆಳಕಿಗೆ ಬಂದಿದೆ. ಕಳೆದ ರಾತ್ರಿ ಪಾರ್ಕಿಂಗ್ ಮಾಡಿದ್ದ ಕಾರಿನಲ್ಲಿ 3 ಮಕ್ಕಳು ಸೇರಿ 6 ಮಂದಿ ಕಾರಿನಲ್ಲೇ ಪ್ರಾಣ ಬಿಟ್ಟಿದ್ದರು. ಮತ್ತೊಬ್ಬ ಅಂದ್ರೆ 7ನೇ ವ್ಯಕ್ತಿ ಕಾರಿನ ಹೊರಗೆ ಬಂದು ನಾನು ಕೂಡ ಇನ್ನು 5 ನಿಮಿಷದಲ್ಲೇ ಸಾವನ್ನಪ್ಪುತ್ತೇನೆ ಎನ್ನುವ ಹೇಳಿಕೆ ನೀಡಿದ್ದಾನೆ.

Advertisment

ಕಾರಿನ ಪಕ್ಕದಲ್ಲೇ ನಿತ್ರಾಣ ಸ್ಥಿತಿಯಲ್ಲಿದ್ದ 7ನೇ ವ್ಯಕ್ತಿಯ ಮಾತು ಕೇಳಿ ಅಕ್ಕ-ಪಕ್ಕದ ಮನೆಯವರು ಶಾಕ್ ಆಗಿದ್ದಾರೆ. ಕಾರಿನ ಒಳಗೆ ನೋಡಿದಾಗ ಒಂದೇ ಕುಟುಂಬದ 6 ಮಂದಿ ಜೀವ ಬಿಟ್ಟಿರೋದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಬದುಕಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ಸಾಗಿಸೋ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ನನಗೆ ಊಟ ಮಾಡಿಸ್ತಾ ಇದ್ದಳು​.. ದುಡ್ಡು ಬೇಡ ಸರ್; ಸಚಿವ ಚಲುವರಾಯಸ್ವಾಮಿ ಮುಂದೆ ತಂದೆ ಕಣ್ಣೀರು 

ಕಾರಿನಲ್ಲಿ ಪ್ರಾಣ ಕಳೆದುಕೊಂಡವರನ್ನ 42 ವರ್ಷದ ಪ್ರವೀಣ್ ಮಿತ್ತಲ್ ಅವರ ಕುಟುಂಬ ಸದಸ್ಯರು ಎಂದು ಗುರುತಿಸಲಾಗಿದೆ. ಉತ್ತರಾಖಂಡ ಡೆಹ್ರಾಡೂನ್ ಮೂಲದವರಾದ ಇವರು ಆಧ್ಯಾತ್ಮದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹರಿಯಾಣದ ಪಂಚಕುಲಕ್ಕೆ ಭೇಟಿ ನೀಡಿದ್ದರು. ಕಳೆದ ರಾತ್ರಿ ಬಾಗೇಶ್ವರ ಧಾಮಕ್ಕೆ ಭೇಟಿ ನೀಡಿದ್ದ ಈ ಕುಟುಂಬಕ್ಕೆ ಕಾರಿನಲ್ಲಿ ವಿಷ ಕುಡಿದು ಪ್ರಾಣ ಕಳೆದುಕೊಂಡಿದೆ ಎನ್ನಲಾಗಿದೆ.

Advertisment

publive-image

7 ಮಂದಿ ದುರಂತಕ್ಕೆ ಕಾರಣವೇನು?
ಪ್ರವೀಣ್ ಮಿತ್ತಲ್ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಸಾಲದ ಸುಳಿಯಲ್ಲಿ ಒದ್ದಾಡುತ್ತಿದ್ದ ಇಡೀ ಕುಟುಂಬ ವಿಷ ಕುಡಿಯಲು ತೀರ್ಮಾನಿಸಿದೆ. ನಿನ್ನೆ ರಾತ್ರಿ ಪಂಚಕುಲದಲ್ಲಿ ಹಲವು ಹೋಟೆಲ್‌ಗಳಲ್ಲಿ ರೂಮ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಇವರಿಗೆ ಯಾವ ಹೋಟೆಲ್‌ನಲ್ಲೂ ರೂಮ್‌ ಸಿಕ್ಕಿಲ್ಲ.

ಕೊನೆಗೆ ಕಾರಿನಲ್ಲಿ ಜೀವ ಬಿಡಲು ತೀರ್ಮಾನಿಸಿದ ಪ್ರವೀಣ್ ಮಿತ್ತಲ್‌ ಕುಟುಂಬ ತಮ್ಮ ಇಬ್ಬರು ಹೆಣ್ಣು ಮತ್ತು ಒಬ್ಬ ಗಂಡು ಮಗ ಸೇರಿದಂತೆ ವಯಸ್ಸಾದ ಪೋಷಕರಿಗೆ ವಿಷ ಕುಡಿಸಿ ಜೀವ ಕಳೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment