ಜಾಮೀನು ಸಿಕ್ಕಿದ್ದೇ ತಡ 30 ಕಿ.ಮೀ ರೋಡ್‌ ಶೋ; ಹಾನಗಲ್ ಗ್ಯಾಂಗ್‌ ಮತ್ತೆ ಜೈಲು ಪಾಲು

author-image
admin
Updated On
ಜಾಮೀನು ಸಿಕ್ಕಿದ್ದೇ ತಡ 30 ಕಿ.ಮೀ ರೋಡ್‌ ಶೋ; ಹಾನಗಲ್ ಗ್ಯಾಂಗ್‌ ಮತ್ತೆ ಜೈಲು ಪಾಲು
Advertisment
  • ಕಳೆದ 17 ತಿಂಗಳಿಂದ ಜೈಲಿನಲ್ಲಿದ್ದ ಆರೋಪಿಗಳು ಸಿಕ್ಕಿದ್ದ ಬೇಲ್‌!
  • ಪುಂಡಾಟ ಪ್ರದರ್ಶಿಸಿದ ತಪ್ಪಿಗೆ ಮತ್ತೆ 7 ಮಂದಿ ಜೈಲು ಪಾಲು
  • ಜಾಮೀನು ಸಿಕ್ಕಿದ್ದೇ ತಡ 30 ಕಿ.ಮೀ ರೋಡ್ ಶೋ ನಡೆಸಿದ್ದರು

ಹಾವೇರಿ: ಇವರು ಸಾಮಾನ್ಯ ಪುಂಡ ಪೋಕಿರಿಗಳು ಅಲ್ಲ. ಪ್ರಳಯಾಂತಕ ಪುಂಡರು. ಕಳೆದ 17 ತಿಂಗಳಿಂದ ಜೈಲಿನಲ್ಲಿದ್ದ ಆರೋಪಿಗಳು. 4 ದಿನದ ಹಿಂದಷ್ಟೇ ಜಾಮೀನು ಪಡೆದು ಬಂಧಿಖಾನೆಯಿಂದ ಹೊರ ಬಂದಿದ್ದರು. ಧಿಮಾಕು, ಪುಂಡಾಟ ಪ್ರದರ್ಶಿಸಿದ ತಪ್ಪಿಗೆ 7 ಮಂದಿ ಮತ್ತೆ ಜೈಲು ಪಾಲಾಗುವಂತೆ ಆಗಿದೆ.

ಯಾರಿವರು?
ಈ ಪುಂಡ ಪೋಕಿರಿಗಳು ಯಾವುದೋ ಹೋರಾಟದಲ್ಲಿ ಭಾಗಿಯಾಗಿ ಜೈಲಿಗೆ ಹೋದವರಲ್ಲ. ಹಾನಗಲ್‌ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾ*ಚಾರದ ಗಂಭೀರ ಆರೋಪ ಇವರ ಮೇಲಿದೆ.
A1- ಅಫ್ತಾಬ್ ಚಂದನಕಟ್ಟಿ
A2- ಮದರ್ ಸಾಬ್ ಮಂಡಕ್ಕಿ
A3- ಸಮಿವುಲ್ಲಾ ಲಾಲನವರ
A7- ಮಹಮ್ಮದ್ ಸಾದಿಕ್ ಅಗಸಿಮನಿ
A8- ಶೋಯಿಬ್ ಮುಲ್ಲಾ
A11- ತೌಸಿಪ್ ಚೋಟಿ
A13- ರಿಯಾಜ್ ಸಾವಿಕೇರಿ

publive-image

ಈ 7 ಆರೋಪಿಗಳು 17 ತಿಂಗಳು ಜೈಲಿನಲ್ಲಿ ಕಾಲ ಕಳೆದಿದ್ದರು. 4 ದಿನಗಳ ಹಿಂದೆ ಜಾಮೀನು ಸಿಕ್ಕಿದ್ದೇ ತಡ 30 ಕಿ.ಮೀ ರೋಡ್ ಶೋ ನಡೆಸಿ ಪುಂಡಾಟಿಕೆ ಮೆರೆದಿದ್ದರು.

ಇದನ್ನೂ ಓದಿ: ಕಿವಿ ಕೇಳದ ಅಪ್ಪ-ಅಮ್ಮ.. ಬೀದಿ ನಾಯಿಗಳ ದಾಳಿಗೆ ಪ್ರಾಣ ಬಿಟ್ಟ 6 ವರ್ಷದ ಬಾಲಕಿ; ಕರುಣಾಜನಕ ಸ್ಟೋರಿ! 

ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವಾಗಲೇ ಕೋರ್ಟ್ ಕೆಲವೊಂದು ಕಠಿಣ ಷರತ್ತುಗಳನ್ನ ವಿಧಿಸಲಾಗಿರುತ್ತೆ. ಆ ಬೇಲ್ ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಬೇಲ್ ರದ್ದು ಪಡಿಸುವಂತೆ ಅರ್ಜಿ ಸಲ್ಲಿಸಿದ್ದರು.

publive-image

ರೋಡ್ ಶೋ‌ ನಡೆಸಿ ಧಿಮಾಕು ಪ್ರದರ್ಶಿಸಿದ ಆರೋಪಿಗಳ ಮೇಲೆ ಪೊಲೀಸರು ರೌಡಿಶೀಟರ್ ಓಪನ್ ಜೊತೆಗೆ ಹೊಸ ಕೇಸ್ ಕೂಡ ದಾಖಲಿಸಿದ್ದಾರೆ. ಗ್ಯಾಂಗ್‌ ರೇ*ಪ್‌ ಕೇಸ್‌ನ ಈ ಆರೋಪಿಗಳು ರೋಡ್ ಶೋ ನಡೆಸಿದ ತಪ್ಪಿಗೆ ಜೂನ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

publive-image

ಬೇಲ್ ಸಿಕ್ಕ ಖುಷಿಯಲ್ಲಿ ಮೈಮರೆತು ರೋಡ್ ಶೋ ನಡೆಸಿದ ಹಾನಗಲ್ ಗ್ಯಾಂಗ್ ಮತ್ತೆ ಜೈಲುಪಾಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment