/newsfirstlive-kannada/media/post_attachments/wp-content/uploads/2024/08/BNG_LADY_DEAD.jpg)
ಬೆಂಗಳೂರು: ಪೂಜೆ ಮುಗಿಸಿ ವಾಪಸ್ ಆಗುವಾಗ ಬೈಕ್​ಗೆ ಲಾರಿ ಗುದ್ದಿದ ಪರಿಣಾಮ 7 ತಿಂಗಳ ಗರ್ಭಿಣಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ:ಕಾಂತಾರಗೆ ತಮಿಳು ಸ್ಟಾರ್ ನಟ ಎಂಟ್ರಿ ಕೊಡ್ತಾರಾ? ವಿಕ್ರಮ್- ರಿಷಬ್​ ಶೆಟ್ಟಿ ಭೇಟಿಯಾಗಿದ್ದೇಕೆ?
ನೆಲಮಂಗಲದ ತೋಟನಹಳ್ಳಿ ಗ್ರಾಮದ ನಿವಾಸಿ ಸಿಂಚನಾ ಮೃತಪಟ್ಟ ದುರ್ದೈವಿ. ಗಂಡ ಮಂಜುನಾಥ್ ಜೊತೆ ಮೃತ ಸಿಂಚನಾ, ಶಿವಗಂಗೆ ಗಣೇಶನ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ತಮ್ಮ ಮನೆಗೆ ಬೈಕ್​​ನಲ್ಲಿ ವಾಪಸ್ ಆಗುತ್ತಿದ್ದರು. ದಾಬಸ್​ಪೇಟೆ ಮೂಲಕ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎಡೆಹಳ್ಳಿ ಮಾರ್ಗವಾಗಿ ತೋಟನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದರು. ಈ ವೇಳೆ ಜಲ್ಲಿ ತುಂಬಿಕೊಂಡು ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಬೆಂಜ್ ಲಾರಿ, ಬೈಕ್​ಗೆ ಭೀಕರವಾಗಿ ಡಿಕ್ಕಿಯಾಗಿದೆ. ಇದರಿಂದ ಕೆಳಗೆ ಬಿದ್ದ 7 ತಿಂಗಳು ಗರ್ಭಿಣಿ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಲಾರಿ ಹರಿದ ಪರಿಣಾಮ ಗರ್ಭಿಣಿ ಹೊಟ್ಟೆಯಿಂದ ಮಗು ಹೊರಗೆ ಬಂದಿದ್ದು ಇದನ್ನು ನೋಡಲು ನನ್ನಿಂದ ಸಾಧ್ಯವಿಲ್ಲ ಎಂದು ಗೋಳಾಡಿದ್ದಾರೆ. ಪತ್ನಿಯ ಸಾವು ಕಣ್ಣಾರೆ ಕಂಡ ಗಂಡನ ಗೋಳು ಹೇಳತೀರದಾಗಿದೆ.
ಇನ್ನು ಬೈಕ್​ಗೆ ಲಾರಿ ಗುದ್ದಿದ ಬಳಿಕ ಡ್ರೈವರ್ ಲಾರಿ ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಕಳೆದ 6 ತಿಂಗಳಲ್ಲಿ ನೆಲಮಂಗಲ ಸಂಚಾರಿ​ ಠಾಣೆ ವ್ಯಾಪ್ತಿಯಲ್ಲಿ 90ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 125ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ