/newsfirstlive-kannada/media/post_attachments/wp-content/uploads/2025/05/Taroor-Modi.jpg)
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ‘ಆಪರೇಷನ್ ಸಿಂಧೂರ’ ನಡೆಸಿತು. ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ದೊಡ್ಡ ಸಂಘರ್ಷವೇ ನಡೆಯಿತು. ಇದೀಗ ವಿದೇಶಗಳಿಗೆ ಭಾರತ- ಪಾಕ್ ನಡುವಿನ ಸಂಘರ್ಷದ ಅಸಲಿ ಕಾರಣ ವಿವರಿಸಲು ಭಾರತ ಸರ್ಕಾರ ನಿಯೋಗಗಳನ್ನ ರಚನೆ ಮಾಡಿದೆ.
ಒಟ್ಟು 7 ನಿಯೋಗಗಳನ್ನು ರಚನೆ ಮಾಡಲಾಗಿದೆ. ಹಿರಿಯ ಲೋಕಸಭಾ, ರಾಜ್ಯಸಭಾ ಸದಸ್ಯರ ನೇತೃತ್ವದಲ್ಲಿ 7 ನಿಯೋಗ ರಚನೆ ಮಾಡಲಾಗಿದೆ. ಮೋದಿ ಸರ್ಕಾರ ರಚನೆ ಮಾಡಿರುವ 7 ನಿಯೋಗದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಸ್ಥಾನ ಪಡೆದಿದ್ದಾರೆ. ನಿಯೋಗವೊಂದರ ನೇತೃತ್ವವನ್ನು ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯ ಶಶಿ ತರೂರ್ಗೆ ನೀಡಲಾಗಿದೆ.
7 ನಿಯೋಗಗಳು..!
ಶಶಿ ತರೂರ್ (ಕಾಂಗ್ರೆಸ್)
ರವಿ ಶಂಕರ್ ಪ್ರಸಾದ್ (ಬಿಜೆಪಿ)
ಸಂಜಯ್ ಕುಮಾರ್ ಝಾ (ಜೆಡಿಯು)
ಬೈಜಂತ್ ಪಂಡಾ (ಬಿಜೆಪಿ)
ಕನಿಮೋಳಿ ಕುರುಣಾನಿಧಿ (ಡಿಎಂಕೆ)
ಸುಪ್ರಿಯಾ ಸುಳೆ (ಎನ್ಸಿಪಿ)
ಶ್ರಿಕಾಂತ್ ಏಕನಾಥ್ ಶಿಂಧೆ (ಶಿವಸೇನೆ)
ಏನು ಮಾಡಬೇಕು ಈ ನಿಯೋಗ..?
ಈ ನಿಯೋಗಗಳು ಅಮೆರಿಕಾ, ಇಂಗ್ಲೆಂಡ್, ಪ್ರಾನ್ಸ್, ಜರ್ಮನ್, ಜಪಾನ್ ಸೇರಿ ವಿವಿಧ ದೇಶಗಳಿಗೆ ಭೇಟಿ ನೀಡಬೇಕು. ಪಹಲ್ಗಾಮ್ ದಾಳಿ, ಅಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ಪಾಕಿಸ್ತಾನ ಭಯೋತ್ಪಾದನೆ ನೀಡುತ್ತಿರುವ ಬೆಂಬಲದ ಬಗ್ಗೆ ಜಗತ್ತಿನ ಮನವರಿಕೆ ಮಾಡಿಕೊಡಬೇಕು. ಮೇ 22 ರಿಂದ ವಿವಿಧ ದೇಶಗಳಿಗೆ ನಿಯೋಗಗಳು ತೆರಳಲಿವೆ. ಕತಾರ್, ದಕ್ಷಿಣ ಆಫ್ರಿಕಾ, ಯುಎಇ ದೇಶಗಳಿಗೂ ಹೋಗಿ ಮಾಹಿತಿ ನೀಡಲಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಆರೋಗ್ಯದ ಬಗ್ಗೆ ಸಿಂಗರ್ ಅರ್ಚನಾ ಉಡುಪ ಸ್ಪಷ್ಟನೆ.. ಕ್ಯಾನ್ಸರ್ ಬಗ್ಗೆ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ