Cholesterol: ಬೊಜ್ಜಿನ ಬಗ್ಗೆ ಇವೆ 7 ಕಾಲ್ಪನಿಕ ಕಥೆಗಳು; ಇವುಗಳ ಬಗ್ಗೆ ನಿಮಗೆ ಯಾರೂ ಹೇಳಿರಲ್ಲ!

author-image
Gopal Kulkarni
Updated On
Cholesterol: ಬೊಜ್ಜಿನ ಬಗ್ಗೆ ಇವೆ 7 ಕಾಲ್ಪನಿಕ ಕಥೆಗಳು; ಇವುಗಳ ಬಗ್ಗೆ ನಿಮಗೆ ಯಾರೂ ಹೇಳಿರಲ್ಲ!
Advertisment
  • ಕೊಲೆಸ್ಟ್ರಾಲ್​ ಬಗ್ಗೆ ಜನರಲ್ಲಿ ಏನೆಲ್ಲಾ ತಪ್ಪು ಕಲ್ಪನೆಗಳು ಇವೆ?
  • ಸಸ್ಯಾಹಾರದಿಂದ ಕೊಲೆಸ್ಟ್ರಾಲ್ ಇಲ್ಲದಂತೆ ಮಾಡಬಹುದಾ?
  • ಮೊಟ್ಟೆಯ ಹಳದಿ ಭಾಗ ಸೇವಿಸುವುದರಿಂದ ಹೆಚ್ಚಾಗುತ್ತಾ ಬೊಜ್ಜು?

ಕೊಲೆಸ್ಟ್ರಾಲ್​, ಕನ್ನಡದಲ್ಲಿ ಅದನ್ನು ಬೊಜ್ಜು, ಕೊಬ್ಬು ಎಂದು ಕರೆಯಬಹುದು. ಇದರ ಬಗ್ಗೆ ಅನೇಕ ಪರಿಭಾಷೆಗಳು ಇವೆ. ಕೊಲೆಸ್ಟ್ರಾಲ್ ವಿಚಾರವಾಗಿ ಅನೇಕ ಕಾಲ್ಪನಿಕ, ಕಟ್ಟಕತೆಗಳ ಕಂತೆಗಳೇ ಇವೆ. ಇದರ ಸುತ್ತ ಅಂತೆಕಂತೆಗಳೇ ಸುತ್ತಿಕೊಂಡಿವೆ.

ಕೊಲೆಸ್ಟ್ರಾಲ್ ವಿಚಾರದಲ್ಲಿ ಅನೇಕ ಅಪಾರ್ಥಗಳನ್ನು ಹರಡಲಾಗುತ್ತಿದೆ. ದಶಕಗಳಿಂದ ಇದನ್ನು ಹೃದಯ ಸಂಬಂಧಿ ಕಾಯಿಲೆಯ ದ್ವಾರ ಎಂದೇ ಹೇಳಿಕೊಂಡು ಬರಲಾಗಿದೆ. ಅದಲ್ಲೂ ಸಾಮಾನ್ಯ ನಂಬಿಕೆ ಅಂದ್ರೆ ಅದು ಕೊಲೆಸ್ಟ್ರಾಲ್ ತುಂಬಾ ಕೆಟ್ಟದ್ದು ಹೈ ಕೊಲೆಸ್ಟ್ರಾಲ್ ಇರುವ ಆಹಾರವನ್ನು ದೂರವಿಡುವುದರಿಂದ ನಿಮ್ಮ ಹೃದಯದ ಆರೋಗ್ಯ ಕಾಪಾಡಬಹುದು ಎನ್ನುವ ಮಟ್ಟಿಗೆ. ಇದು ನಿಜಕ್ಕೂ ಹೌದಾ?

ಇದನ್ನೂ ಓದಿ: ನೆನಪಿನ ಶಕ್ತಿ, ಗಮನಶಕ್ತಿ ವೃದ್ಧಿಸಿಕೊಳ್ಳಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ; ನಂತರ ಬದಲಾವಣೆ ನೋಡಿ!

ಸದ್ಯ ನಾವು ನಿಮಗೆ ಬೊಜ್ಜಿನ ಬಗ್ಗೆ ಹರಿಡಕೊಂಡಿರುವ ಹಲವು ಮಿಥ್ಯಾರೋಪಗಳ ಬಗ್ಗೆ ಹೇಳಲಿದ್ದೇವೆ. ಇದನ್ನು ಸರಿಯಾಗಿ ತಿಳಿದುಕೊಳ್ಳಿ. ಇದು ನಿಮಗೆ ಬೊಜ್ಜಿನ ಬಗ್ಗೆ ಇರುವ ಗೊಂದಲಗಳನ್ನು ತೊಡೆದು ಹಾಕುವಲ್ಲಿ ಸಹಾಯವಾಗುತ್ತದೆ.

ಕಟ್ಟಕಥೆ1- ಕೊಲೆಸ್ಟ್ರಾಲ್ ಕೆಟ್ಟದ್ದು
ಕೊಲೆಸ್ಟ್ರಾಲ್ ಬಗ್ಗೆ ಇರುವ ಅತಿದೊಡ್ಡು ತಪ್ಪು ಕಲ್ಪನೆ ಅಂದ್ರೆ ಅದು ಕೊಲೆಸ್ಟ್ರಾಲ್ ತುಂಬಾ ಕೆಟ್ಟದ್ದು. ಇದು ತುಂಬಾ ಅಪಾಯಕಾರಿ ಎಂಬುದು. ಆದ್ರೆ ಒಂದು ನೆನಪಿರಲಿ ಕೊಲೆಸ್ಟ್ರಾಲ್ ಎಂಬುದು ನಮ್ಮ ದೇಹಕ್ಕೆ ಅತ್ಯವಶ್ಯಕ. ಕಾರಣ ದೇಹದಲ್ಲಿ ಹಾರ್ಮೋನ್ ಉತ್ಪಾದನೆಯಾಗಲು ಕೊಲೆಸ್ಟ್ರಾಲ್ ಸಹಯಕಾರಿ. ವಿಟಮಿನ್ ಡಿ ಒದಗಿಸುವಲ್ಲಿಯೂ ಕೂಡ ಸಹಾಯಕಾರಿ ಹಾಗೂ ಇದು ಮೆದುಳಿನ ಕಾರ್ಯವ್ಯವಸ್ಥೆಯನ್ನು ಸುಧಾರಿಸಲು ಅವಶ್ಯಕ.

publive-image

ಕಟ್ಟುಕಥೆ-2: ಫ್ಯಾಟಿ ಫುಡ್ ಸೇವಿಸುವುದರಿಂದ ಕೊಲೆಸ್ಟ್ರಾಲ್ ಜಾಸ್ತಿ
ಆಧುನಿಕ ಸಂಶೋಧನೆಗಳು ಆಹಾರ ಕ್ರಮದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಅದು ರಕ್ತದಲ್ಲಿ ಬೊಜ್ಜಿನ ಅಂಶವನ್ನು ಹೆಚ್ಚಿಸುತ್ತದೆ ಎಂದು ಬಹಳ ಜನರನ್ನು ನಂಬಿಸಲಾಗಿದೆ. ನೀವು ಹೆಚ್ಚು ಕೊಲೆಸ್ಟ್ರಾಲ್ ಆಹಾರವನ್ನು ಸೇವಿಸಿದರೆ ದೇಹವು ಹೆಚ್ಚು ಕೊಲೆಸ್ಟ್ರಾಲ್ ಉತ್ಪಾದನೆ ಮಾಡುತ್ತದೆ. ಇದರಿಂದ ನಿಮ್ಮ ಲೀವರ್ ಕೂಡ ಕೊಲೆಸ್ಟ್ರಾಲ್​ನ್ನು ಕಡಿಮೆ ಉತ್ಪಾದಿಸುತ್ತದೆ ಎಂದು. ಹಲವಾರು ವರ್ಷಗಳಿಂದ ಜನರಿಗೆ ಮೊಟ್ಟೆ, ಮೀನು ಡೈರಿ ಪ್ರೊಡಕ್ಟ್​ಗಳನ್ನು ದೂರುವಿಡಿ ಎಂದು ಹೇಳುತ್ತಲೇ ಬರಲಾಗಿದೆ. ಆದ್ರೆ ನಾವು ನ್ಯೂಟ್ರಿಯಂಟ್​ ರಿಚ್​ ಫುಡ್​ಗಳನ್ನ ದೂರ ಮಾಡುವುದಕ್ಕಿಂತ ಒಂದು ಸಮತೋಲನ ಆಹಾರ ಕ್ರಮವನ್ನು ನಮ್ಮದಾಗಿಸಿಕೊಂಡರೆ ಆರೋಗ್ಯಕರ ಬೊಜ್ಜು, ಫೈಬರ್ ಮತ್ತು ಪ್ರೊಟೀನ್ ನಮ್ಮ ದೇಹ ಸೇರುತ್ತದೆ.

ಇದನ್ನೂ ಓದಿ:ಶಾಖಾಹಾರಿಗಳೇ ಅತಿಹೆಚ್ಚು ಕಾಲ ಬದುಕುತ್ತಾರಾ? ಈ ಮಾತು ಎಷ್ಟು ಸತ್ಯ, ಎಷ್ಟು ಮಿಥ್ಯ?

publive-image

ಕಟ್ಟುಕಥೆ-3: ಹೆಚ್ಚಿನ ಬೊಜ್ಜು ಹೃದಯ ಅನಾರೋಗ್ಯಕ್ಕೆ ಕಾರಣ
ಅತಿಹೆಚ್ಚು ಬೊಜ್ಜು ದೇಹದಲ್ಲಿ ಬೆಳೆಯುವುದರಿಂದ ಅದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೃದಯ ಆರೋಗ್ಯ ಸಮಸ್ಯೆಗೆ ಇದೊಂದೇ ಕಾರಣವಲ್ಲ. ದೇಹದಲ್ಲಿ ಸಾಮಾನ್ಯ ಕೊಲೆಸ್ಟ್ರಾಲ್ ಇದ್ದವರಲ್ಲಿಯೂ ಕೂಡ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಅತಿಹೆಚ್ಚು ಕೊಲೆಸ್ಟ್ರಾಲ್ ಇದ್ದವರು ದೀರ್ಘಾಯುಷಿಗಳಾಗಿರುವ ಉದಾಹರಣೆಯೂ ಇದೆ. ಹೃದಯ ಸಂಬಂಧಿ ಕಾಯಿಲೆಗಳು ಅನೇಕ ​ ಅಂಶಗಳ ಮೇಲೆ ಅವಲಂಬಿತಗೊಂಡಿರುತ್ತವೆ. ಉರಿಯೂತ, ಅನುವಂಶಿಕ ಸಮಸ್ಯೆಗಳು, ಆಹಾರಕ್ರಮ, ಜೀವನ ಶೈಲಿ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ.

publive-image

ಕಟ್ಟಕಥೆ-4: ದಢೂತಿ ದೇಹಗಳಿರುವವರಲ್ಲಿ ಮಾತ್ರ ಕೊಲೆಸ್ಟ್ರಾಲ್ ಹೆಚ್ಚು
ಅನೇಕ ಕಟ್ಟುಕತೆಗಳಲ್ಲಿ ಇದು ಕೂಡ ಒಂದು ಸ್ಥೂಲ ಕಾಯ ಅಂದ್ರೆ ಅತಿಯಾಗಿ ದಪ್ಪ ಇರುವವರಲ್ಲಿ ಮಾತ್ರ ಕೊಲೆಸ್ಟ್ರಾಲ್ ಹೆಚ್ಚಾಗಿ ಇರುತ್ತದೆ ಎಂಬ ಕಲ್ಪನೆ. ಆದರೆ ಅದು ನಿಜವಲ್ಲ. ಸಣಕಲು ದೇಹದವರಲ್ಲೂ ಕೂಡ ಅತಿಯಾದ ಕೊಲೆಸ್ಟ್ರಾಲ್ ಇರುವುದು ಕಂಡು ಬಂದಿದೆ. ಅನುವಂಶಿಕವಾಗಿಯೇ ಹೀಗೆ ಬಡಕಲು ದೇಹದವರಲ್ಲೂ ಕೊಲೆಸ್ಟ್ರಾಲ್ ಅತಿಯಾಗಿ ಇರುತ್ತದೆ. ದೇಹದ ತೂಕಕ್ಕಿಂತ ನಿರಂತರ ಆರೋಗ್ಯ ತಪಾಸಣೆ ಇಲ್ಲಿ ಮುಖ್ಯವಾಗುತ್ತದೆ. ಕೇವಲ ತೂಕ ಹೆಚ್ಚಿಗೆ ಇರುವುದರಿಂದ ಮಾತ್ರ ಕೊಲೆಸ್ಟ್ರಾಲ್ ಹೆಚ್ಚಿರುವುದಿಲ್ಲ.

publive-image

ಕಟ್ಟುಕಥೆ-5: ಮೊಟ್ಟೆಯ ಹಳದಿ ಭಾಗ ಕೊಲೆಸ್ಟ್ರಾಲ್​ ಹೆಚ್ಚಿಸುತ್ತದೆ
ಮೊಟ್ಟೆಯಲ್ಲಿರುವ ಹಳದಿ ಭಾಗದಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂಬ ಪರಿಕಲ್ಪನೆ ಅನೇಕ ವರ್ಷಗಳಿಂದಲೂ ಇದೆ. ಹೀಗಾಗಿಯೇ ಅನೇಕ ಜನರು ಮೊಟ್ಟೆಯನ್ನು ತಿನ್ನುವಾಗ ಹಳದಿ ಭಾಗವನ್ನು ತೆಗೆದಿಟ್ಟು ಮೊಟ್ಟೆಯನ್ನು ಸೇವಿಸುತ್ತಾರೆ. ಮೊಟ್ಟೆಯ ಹಳದಿ ಭಾಗ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚಿಸುತ್ತದೆ ಎಂಬ ಪರಿಕಲ್ಪನೆಯೂ ಕೂಡ ಇದೆ. ಆದ್ರೆ ಆ ಹಳದಿ ಭಾಗ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಕೊಲೈನ್, ವಿಟಮಿನ್ ಡಿ ಮತ್ತು ಪೌಷ್ಠಿಕಾಂಶ ಇರುತ್ತದೆ. ಮೊಟ್ಟೆಯಲ್ಲಿ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಉತ್ಪಾದಿಸುವ ಶಕ್ತಿ ಇದೆ. ಇದು ಕೊಲೆಸ್ಟ್ರಾಲ್ ಸಮತೋಲವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

publive-image

ಕಟ್ಟುಕಥೆ-6 ಕೇವಲ ಸ್ಟ್ಯಾಟಿನ್ಸ್​ಗಳು ಮಾತ್ರ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ.
ಸ್ಟ್ಯಾಟಿನ್ಸ್​ಗಳು ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಾಮಾನ್ಯವಾಗಿ ವೈದ್ಯರು ಬರೆಯುವ ಔಷಧಿಕಗಳು. ಆದರೆ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಇದೊಂದು ಪರಿಹಾರವಲ್ಲ. ಕೆಲವು ಸಮಯದಲ್ಲಿ ಇವುಗಳ ಅವಶ್ಯಕತೆ ಇರುವುದು ಹೌದು. ಆದ್ರೆ ಇವೇ ಅಂತಿಮ ಪರಿಹಾರವಲ್ಲ. ಇವುಗಳಿಂದ ಸ್ನಾಯು ನೋವು, ಲೀವರ್ ಹಾನಿಯಂತಹ ಅಡ್ಡಪರಿಣಾಮಗಳು ಆಗುತ್ತವೆ. ಹೀಗಾಗಿ ಹೆಚ್ಚು ಹೆಚ್ಚು ಫೈಬರ್ ಅಂಶಗಳುಳ್ಳ ಆಹಾರ ಸೇವನೆ, ನಿತ್ಯ ವ್ಯಾಯಾಮ, ಅತಿಹೆಚ್ಚು ಸಕ್ಕರೆ ಸೇವನೆಯನ್ನು ನಿಲ್ಲಿಸುವುದು ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಬೊಜ್ಜಿನ ಅಂಶವನ್ನು ಸುಧಾರಿಸಬಹುದು.

publive-image

ಕಟ್ಟುಕಥೆ-7: ಸಸ್ಯಾಹಾರ ಕೊಲೆಸ್ಟ್ರಾಲ್​ನ್ನು ನಾಶ ಮಾಡುತ್ತದೆ
ಅನೇಕ ಜನರು ಸಸ್ಯಾಹಾರದ ಮೊರೆ ಹೋಗುವುದರಿಂದ ನಾವು ಬೊಜ್ಜನ್ನು ಕರಗಿಸಬಹುದು ಎಂದು ನಂಬಿದ್ದಾರೆ. ಇದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಪೂರ್ಣವಾಗಿ ನಾಶವಾಗಿ ಹೋಗುತ್ತದೆ ಎಂಬ ನಂಬಿಕೆಯೂ ಇದೆ. ಒಂದು ವೇಳೆ ಸಸ್ಯಾಹಾರಗಳು ಕಡಿಮೆ ಕೊಲೆಸ್ಟ್ರಾಲ್ ಹೊಂದಿದ್ದರೆ ನಮ್ಮ ಲೀವರ್ ಕೂಡ ಕಡಿಮೆ ಕೊಲೆಸ್ಟ್ರಾಲ್​ನ್ನೇ ಉತ್ಪಾದಿಸುತ್ತದೆ. ಈಗಾಗಲೇ ಹೇಳಿದಂತೆ ದೇಹಕ್ಕೆ ಒಂದಿಷ್ಟು ಅಂಶದ ಕೊಲೆಸ್ಟ್ರಾಲ್ ಬೇಕೆ ಬೇಕು. ಸಸ್ಯಾಹಾರದಿಂದ ನಮ್ಮ ಹೃದಯ ಆರೋಗ್ಯಕ್ಕೆ ಸಹಾಯಕವಾಗಬಹುದು. ಆದ್ರೆ ದೇಹಕ್ಕೆ ಆರೋಗ್ಯಕರ ಬೊಜ್ಜು ಕೂಡ ಬೇಕು ಎಂಬುದರ ಬಗ್ಗೆ ನೆನಪಿರಬೇಕು. ಹೀಗಾಗಿ ಎಲ್ಲ ತರಹದ ನ್ಯೂಟ್ರಿಯಂಟ್ಸ್​ ಆಹಾರಗಳು ಸಮತೋಲನದ ಕೊಲೆಸ್ಟ್ರಾಲ್​ಗೆ ಸಹಾಕಾರಿಯಾಗುತ್ತವೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment