ಬೆನ್ನು ಮೂಳೆಯಲ್ಲಿ ನಡುಕ ಹುಟ್ಟಿಸೋ ಭೂತ ಪ್ರೇತಗಳ ಜಾಗಗಳು ಇವು.. ಭಾರತದಲ್ಲಿ ಎಲ್ಲೆಲ್ಲಿ ಇವೆ ಗೊತ್ತಾ?

author-image
Gopal Kulkarni
Updated On
ಬೆನ್ನು ಮೂಳೆಯಲ್ಲಿ ನಡುಕ ಹುಟ್ಟಿಸೋ ಭೂತ ಪ್ರೇತಗಳ ಜಾಗಗಳು ಇವು.. ಭಾರತದಲ್ಲಿ ಎಲ್ಲೆಲ್ಲಿ ಇವೆ ಗೊತ್ತಾ?
Advertisment
  • ಈ ಜಾಗಗಳಿಗೆ ಹೋಗಲು ನಿಮಗೆ ಎಂಟು ಎದೆ ಇದ್ದರೂ ಸಾಲಲ್ಲ
  • ಭಾರತದಲ್ಲಿರುವ ಹಲವು ಸ್ಥಳಗಳಲ್ಲಿ ಇಂದಿಗೂ ಇವೆ ವಿಚಿತ್ರ ಶಕ್ತಿಗಳು!
  • ಈ 7 ಜಾಗಗಳಲ್ಲಿ ಸಂಜೆಯಾದ ಮೇಲೆ ಪ್ರವೇಶ ಮಾಡಲು ಅವಕಾಶವಿಲ್ಲ

ದೈವ ಶಕ್ತಿ ಹಾಗೂ ದುಷ್ಟ ಶಕ್ತಿ ಇವೆಲ್ಲವೂ ಅವರವರ ಅನುಭವಕ್ಕೆ ದಕ್ಕಿದಷ್ಟು ಮಾತ್ರ. ಎರಡು ಇಲ್ಲ ಎನ್ನುವವರು ಇದ್ದಾರೆ. ಅವು ಇವೆ ಎನ್ನುವವರು ಇದ್ದಾರೆ. ಇದೆಲ್ಲದರ ಮಧ್ಯೆಯೂ ಅಗೋಚರವಾಗಿ ಒಂದಿಲ್ಲೊಂದು ರೂಪದಲ್ಲಿ ಇವುಗಳ ಇರುವಿಕೆಯ ಬಗ್ಗೆ ಅನೇಕ ಕಥಾನಕಗಳು ಇವೆ. ದೈವ ಶಕ್ತಿ ಇರುವುದೇ ದುಷ್ಟ ಶಕ್ತಿ ನಾಶಕ್ಕಾಗಿ. ದುಷ್ಟ ಶಕ್ತಿಗಳು ಇರುವುದೇ ದೈವ ಶಕ್ತಿಗಳಿಂದ ಮೋಕ್ಷಕ್ಕಾಗಿ ಎಂದು ಹೇಳಲಾಗುತ್ತದೆ. ದೈವ ಮತ್ತು ದುಷ್ಟ ಶಕ್ತಿಗಳ ಬಗ್ಗೆ ಚರ್ಚೆ ಕೇವಲ ಭಾರತದಲ್ಲಿ ಮಾತ್ರವಲ್ಲ, ಹಿಂದೂ ಧರ್ಮದಲ್ಲಿ ಮಾತ್ರವಲ್ಲ ಅನ್ಯ ಧರ್ಮದಲ್ಲಿಯೂ ಕೂಡ ಶೈತಾನ್, ಡೆವಿಲ್ ಶಕ್ತಿಯ ಬಗ್ಗೆ ಉಲ್ಲೇಖಗಳಿವೆ.

ಅದರಲ್ಲಿ ಭಾರತದಲ್ಲಿ ಇದರ ಬಗ್ಗೆ ನಂಬಿಕೆಗಳು ಹೆಚ್ಚಾಗಿಯೇ ಇವೆ. ಅವುಗಳು ಇವೆ ಎಂಬ ಕೆಲವು ಜಾಗಗಳು ಇಂದಿಗೂ ಕೂಡ ನಿಗೂಢವಾದ ಒಂದು ಶಕ್ತಿಯೊಂದಿಗೆ ಭಾರತದ ಅನೇಕ ಕಡೆಗಳಲ್ಲಿ ನಮಗೆ ಕಾಣ ಸಿಗುತ್ತವೆ ಅಂತಹ ದೆವ್ವಗಳಿವೆ, ದುಷ್ಟ ಶಕ್ತಿಗಳ ಕಾಟವಿದೆ ಎನ್ನುವ ಭಾರತದ ಹಲವು ಜಾಗಗಳ ಪರಿಚಯವನ್ನು ನಾವು ನಿಮಗೆ ಮಾಡಿ ಕೊಡುತ್ತೇವೆ. ಇಲ್ಲಿ ಹೋಗಲು ಎಂಟೆದೆ ಬೇಕು. ಎಂತಹ ಗಟ್ಟಿ ಗುಂಡಿಗೆಯ ಮನುಷ್ಯನ ಬೆನ್ನಮೂಳೆಯಲ್ಲೂ ನಡುಕ ಹುಟ್ಟಬೇಕು ಅಂತಹ ಅನುಭವ ಇಲ್ಲಿ ಆಗುತ್ತದೆ.

publive-image

1. ರಾಜಸ್ಥಾನದ ಭಂಗಾರ ಕೋಟೆ: ರಾಜಸ್ಥಾನದಲ್ಲಿರುವ ಭಂಗಾರ ಕೋಟೆಗೆ ಹೋಗಲು ಇಂದಿಗೂ ಕೂಡ ಜನ ಬೆಚ್ಚಿ ಬೀಳುತ್ತಾರೆ. ಇದು ಭಾರತದಲ್ಲಿ ಅತಿದೊಡ್ಡ ದೆವ್ವ ಶಕ್ತಿ ನೆಲೆಸಿರುವ ಸ್ಥಳವೆಂದು ಗುರುತಿಸಲಾಗುತ್ತದೆ. ಈ ಕೋಟೆಯಲ್ಲಿ ಪ್ರೀತಿಯೊಂದು ಅಂತ್ಯಗೊಂಡ ಕಥೆಯಿದೆ. ಆ ಪ್ರೇಮಿಗಳು ಇಂದಿಗೂ ಕೂಡ ಇಲ್ಲಿ ಭೂತವಾಗಿ ಕಾಡುತ್ತಿದ್ದಾರಂತೆ. ಸೂರ್ಯ ಮುಳುಗಿದ ಮೇಲೆ ಇಲ್ಲಿಯ ಜನ ಈ ಕಡೆ ತಲೆ ಹಾಕಿಯೂ ಕೂಡ ಮಲುಗುವುದಿಲ್ಲ. ಕಾರಣ ಸಂಜೆಯಾಗುತ್ತಿದ್ದಂತೆ ಈ ಕೋಟೆಯಿಂದ ದೆವ್ವಗಳು ಚೀರಾಡುವ ಸದ್ದು ಕೇಳಿ ಬರುತ್ತದೆ. ಇಡೀ ರಾತ್ರಿ ವಿಲಕ್ಷಣವಾದ ಸದ್ದು ಈ ಕೋಟೆಯಿಂದ ಬರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

publive-image

2. ಡುಮಾಸ್ ಬೀಚ್. ಗುಜರಾತ್​: ಗುಜರಾತ್​ನ ಡುಮಾಸ್​ ಬೀಚ್ ಅತ್ಯಂತ ಪ್ರಸಿದ್ಧಿ ಪಡೆದಿರುವಂತಹ ಸಾಗರ ತೀರ. ಇಲ್ಲಿ ಜನಗಳು ಬಂದು ಹೋಗುತ್ತಾರೆ. ಆದ್ರೆ ಅತ್ತ ಸೂರ್ಯ ಮುಳುಗುತ್ತಿದ್ದಂತೆ ಸಾಗರದ ದಂಡೆಯಲ್ಲಿ ಒಂದು ನರಪಿಳ್ಳೆಯೂ ಕೂಡ ಕಾಣುವುದಿಲ್ಲ. ಕಾರಣ ಇದು ಭೂತ ಪಿಶಾಚಿಗಳ ವಾಸಸ್ಥಾನ ಎಂಬ ನಂಬಿಕೆ ಹಲವು ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಇದರ ಇನ್ನೊಂದು ವಿಚಿತ್ರವೆಂದರೇ ಈ ಬೀಚ್​ ಕಪ್ಪು ಮರಳನ್ನು ಹೊಂದಿದ್ದು. ದುಷ್ಟಶಕ್ತಿಗಳ ಕಾರಣದಿಂದಲೇ ಈ ಬೀಚ್​ನ ಮರಳಿಗೆ ಕಪ್ಪು ಬಣ್ಣ ಬಂದಿದೆ ಎಂದೇ ವಾದಿಸಲಾಗುತ್ತದೆ. ಇನ್ನು ಸಂಜೆ ಹೊತ್ತಾದರೆ ಸಾಕು ಇಲ್ಲಿಂದ ವಿಚಿತ್ರ ಸದ್ದುಗಳು ಕೇಳಿ ಬರಲು ಆರಂಭಿಸುತ್ತವೆ ಎಂದು ಅನುಭವಸ್ಥರೇ ಹೇಳುತ್ತಾರೆ. ಬೆಳಗಿನ ಸಮಯ ಪ್ರವಾಸಿಗರಿಂದ ತುಂಬಿ ತುಳುಕುವ ಈ ಬೀಚ್​ನಲ್ಲಿ ಸಂಜೆ ವೇಳೆಗೆ ಒಂದೇ ಒಂದು ನರಮಾನವನ ಸುಳಿವೂ ಕಾಣುವುದಿಲ್ಲ. ಮಧ್ಯರಾತ್ರಿಯಂತೂ ಈ ಬೀಚ್​​ನಿಂದ ಆತ್ಮಗಳ ವಿಚಿತ್ರಧ್ವನಿಗಳು ಹೊರಹೊಮ್ಮುತ್ತವಂತೆ.

publive-image

3. ಶನಿವಾರವಾರ್ಡಾ ಕೋಟೆ-ಪುಣೆ: ಶನಿವಾರವಾರ್ಡ್​ ಕೋಟೆಯಲ್ಲಿಯೂ ಕೂಡ ಇಂತಹುದೇ ಅನುಭವ ಕೂಡ ನಮಗೆ ಕಾಣ ಸಿಗುತ್ತದೆ. ಇದು ನಿರ್ಮಾಣವಾಗಿದ್ದು ಪೇಶ್ವೆಗಳ ಕಾಲದಲ್ಲಿ ಮೊದಲನೇ ಬಾಜಿರಾವ್ ಈ ಕೋಟೆಯನ್ನು ನಿರ್ಮಾಣ ಮಾಡಿದ ಎಂಬ ಬಗ್ಗೆ ಇತಿಹಾಸದಲ್ಲಿ ಪುರಾವೆಗಳಿವೆ. 10ನೇ ಪೇಶ್ವೆ ನಾರಾಯಣರಾವ್ ಅನುವಂಶಿಕವಾಗಿ ಪಟ್ಟವನ್ನು ಏರಿದಾಗಿ, ಇವನ ಚಿಕ್ಕಪ್ಪ ರುಘುನಾಥ ರಾವ್ ಗರ್ದೀಸ್​​ಗಳ ಎಂಬ ಬುಡಕಟ್ಟು ಜನರ ಸಹಾಯದಿಂದ ನಾರಾಯಣರಾವ್​ ಅವರನ್ನು ಕೊಂದು ಅವನ ದೇಹವನ್ನು ತುಂಡರಿಸಿ ಎಸೆದಿದ್ದನಂತೆ. ಅಂದಿನಿಂದ ಈ ಕೋಟೆಯೊಳಗೆ ನಾರಾಯಣರಾವ್​ನ ಆತ್ಮ ಓಡಾಡುತ್ತಿದೆ ಎಂದು ಹೇಳಲಾಗುತ್ತದೆ. ರಾತ್ರಿ ವೇಳೆ ವಿಚಿತ್ರವಾದ ಕೂಗು ಈ ಕೋಟೆಯಿಂದ ಕೇಳಿ ಬರುತ್ತದೆ. ಹೀಗಾಗಿ ಸಂಜೆ ಮಾತ್ರವಲ್ಲ ಹಗಲು ಕೂಡ ಈ ಕೋಟೆಯೊಳಗೆ ಹೋಗುವುದಕ್ಕೆ ಜನರು ಈಗಲೂ ಕೂಡ ಹೆದರುತ್ತಾರೆ.

publive-image

4. ಜಿಪಿ ಬ್ಲಾಕ್- ಮೀರತ್: ಉತ್ತರಪ್ರದೇಶದಲ್ಲಿರುವ ಮೀರತ್​​ನ ಜಿಪಿ ಬ್ಲಾಕ್ ಕೂಡ ದೆವ್ವ ಭೂತಗಳ ಕಥೆಯನ್ನು ಹೊಂದಿದೆ. ಇಲ್ಲಿ ನಾಲ್ಕು ಜನರು ಗಂಡಸರು ಮತ್ತು ಒಂದು ಮಹಿಳೆ ಮೇಣದಬತ್ತಿಯನ್ನು ಹಿಡಿದುಕೊಂಡು ಸದಾ ಅಲೆದಾಡುತ್ತಾರಂತೆ. ಈ ರೀತಿಯ ಕೇಳಿದರೆ ಮೈ ತಣ್ಣಗಾಗಿ ಹೋಗುವ ಕಥೆಗಳು ಈ ಜಾಗದಲ್ಲಿ ಕೇಳಿ ಬರುತ್ತವೆ. ಕತ್ತಲಾದ ಮೇಲೆ ಈ ಜಾಗದಲ್ಲಿ ಒಂದು ನರಪಿಳ್ಳೆಯೂ ಕೂಡ ಹೋಗುವುದಕ್ಕೂ ಬೆಚ್ಚಿ ಬೀಳುತ್ತವೆ.

publive-image

5. ಕುಲ್ಧಾರ ಗ್ರಾಮ-ರಾಜಸ್ಥಾನ: ರಾಜಸ್ಥಾನದಲ್ಲಿ ಮತ್ತೊಂದು ಭಯಾನಕ ಜಾಗವೆಂದರೆ ಅದು ಕುಲ್ಧಾರ ಎಂಬ ಸಣ್ಣ ಹಳ್ಳಿ. ಈ ಗ್ರಾಮಕ್ಕೆ ಆ ಊರ ಜನರ ಶಾಪವೇ ಇದೆ. ಒಂದು ಹೆಣ್ಣಿಗಾಗಿ ಇಡೀ ಗ್ರಾಮಕ್ಕೆ ಗ್ರಾಮವೇ ಸರ್ವನಾಶವಾಗಿ ಹೋಗಿತ್ತು 1825ರಲ್ಲಿ ಸಲೀಂ ಸಿಂಗ್ ಎಂಬ ಅಲ್ಲಿನ ಪ್ರಧಾನಿಗೆ ಈ ಗ್ರಾಮದ ಯುವತಿಯ ಮೇಲೆ ಮನಸ್ಸಾಗಿತ್ತಂತೆ. ಇಲ್ಲಿ ಒಟ್ಟು 84 ಜನ ಪಿಲಿವಾಲ ಬ್ರಾಹ್ಮಣರು ವಾಸವಿದ್ದರಂತೆ. ಅಂದಿನ ಜೈಸಲ್ಮೇರ್​ನ ಪ್ರಧಾನಿ ಸಲೀಂ ಸಿಂಗ್​ಗೆ ಈ ಗ್ರಾಮದ ಹುಡುಗಿಯ ಮೇಲೆ ಮನಸ್ಸಾಗಿ ಆಕೆಯನ್ನು ಮದುವೆಯಾಗಲು ಮುಂದಾಗಿದ್ದನಂತೆ. ಇದನ್ನು ವಿರೋಧಿಸಿದ ಗ್ರಾಮಸ್ಥರ ಮೇಲೆ ಆತ ಹೆಚ್ಚಿನ ತೆರಿಗೆ ಹಾಕಿ ಹಿಂಸೆ ನೀಡಿದಾಗ. ಇಡೀ ಸಮುದಾಯ ಈ ಗ್ರಾಮವನ್ನು ತೊರೆದು ಹೋದರಂತೆ. ಹೋಗುವಾಗ ಈ ಗ್ರಾಮದಲ್ಲಿ ಇನ್ನು ಮುಂದೆ ಒಂದು ನರಪ್ರಾಣಿಯೂ ಕೂಡ ವಾಸಿಸದಂತಾಗಲಿ ಎಂದು ಶಾಪವಿತ್ತರಂತೆ. ಅಂದಿನಿಂದ ಇಂದಿನವರೆಗೂ ಈ ಗ್ರಾಮದಲ್ಲಿ ಒಂದು ನರಪ್ರಾಣಿಯೂ ವಾಸ ಮಾಡುವುದಿಲ್ಲ. ಅಂದಿನ ಪಳವುಳಿಕೆಗಳೇ ಇಂದಿಗೂ ಈ ಗ್ರಾಮದಲ್ಲಿ ಕಾಣಲು ಸಿಗುತ್ತವೆ. ಒಂದು ವೇಳೆ ಇಲ್ಲಿ ಇರಲು ಹೋದರೆ ದುಷ್ಟ ಶಕ್ತಿಗಳ ಕಾಟದ ಅನುಭವವಾಗುತ್ತದೆ. ಇಡೀ ಗ್ರಾಮವನ್ನು ಹಲವು ಆತ್ಮಗಳು ಇಂದಿಗೂ ಕಾಯುತ್ತಿವೆ ಎಂಬ ಕಥೆಯಿದೆ.

publive-image

6. ರಾಮೋಜಿ ಫಿಲ್ಮ್ ಸಿಟಿ- ಹೈದ್ರಾಬಾದ್​: ರಾಮೋಜಿರಾವ್ ಫಿಲ್ಮ ಸಿಟಿ ಅಂದ್ರೆ ಸಿನಿಮಾಗಳ ಸೆಟ್​ ಸಿನಿಮಾಗಳ ಶೂಟಿಂಗ್​ಗೆ ಹೆಸರಾದಂತಹ ಜಾಗ. ಆದ್ರೆ ಇಲ್ಲಿಯೂ ಕೂಡ ದುಷ್ಟ ಶಕ್ತಿಗಳ ಕಾಟವಿದೆಯೆಂದು ಅನುಭವಕ್ಕೆ ಬಂದವರು ಹೇಳುತ್ತಾರೆ. ಅಲ್ಲಿರುವ ಸಿಬ್ಬಂದಿಗಳೇ ಹೇಳುವ ಪ್ರಕಾರ. ಆಗಾಗ ಕೆಲವು ದೀಪಗಳು ಮಿನುಗಿ ಮಾಯವಾಗುತ್ತವೆಯಂತೆ. ಕೆಲವು ಕೋಣೆಯ ದ್ವಾರಗಳು ತಮ್ಮಿಂದ ತಾವೆ ಹೊಡೆದುಕೊಳ್ಳಲು ಆರಂಭಿಸುತ್ತವಂತೆ. ಇಲ್ಲಿ ಭೂತ ಪ್ರೇತಗಳ ಕಾಟವಿದೆ ಎಂದು ಅನುಭವಕ್ಕೆ ಬಂದವರು ಹಲವು ಬಾರಿ ಹೇಳಿದ್ದಾರೆ.

publive-image

7. ಮುಲ್ಚಾ ಮಹಲ್- ನವದೆಹಲಿ:ನವದೆಹಲಿಯಲ್ಲಿರುವ ಮಲ್ಚಾ ಮಹಲ್​​ನಲ್ಲಿಯೂ ಕೂಡ ದೆವ್ವ ಭೂತಗಳ ಓಡಾಟವಿದೆ ಎಂಬ ನಂಬಿಕೆ ಶತಮಾನಗಳಿಂದಲೂ ಇದೆ. ಈ ಒಂದು ಜಾಗವನ್ನು ಅತ್ಯುಗ್ರವಾದ ಶ್ವಾನಗಳು ಕಾಯುತ್ತವೆ. ಇಲ್ಲಿ ಬಂದ ಜನರಿಗೆ ದೂರ ಇರುವಂತೆ ಬೊಗಳಿಯೇ ಸಂಜ್ಞೆಯನ್ನು ಕೊಡುತ್ತೆ. ಇಲ್ಲಿಯವರೆಗೂ ಈ ಮಲ್ಚಾ ಮಹಲ್ ಒಳಗೆ ಕಾಲಿಡಲು ಯಾರಿಗೂ ಕೂಡ ಧೈರ್ಯ ಬಂದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment