/newsfirstlive-kannada/media/post_attachments/wp-content/uploads/2024/10/FEET-SIGNS-HEALTH-PROBLEM.jpg)
ನಮ್ಮ ಪಾದಗಳು ಕೇವಲ ನಡೆಯಲು ಓಡಲು ಮಾತ್ರವಲ್ಲ. ಅವು ನಮ್ಮ ದೇಹದ ಸಂಪೂರ್ಣ ಆರೋಗ್ಯದ ಗುರುತನ್ನು ಕೂಡ ಹೇಳುತ್ತವೆ. ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳ ಸೂಚನೆಗಳನ್ನು ನಮ್ಮ ಪಾದವೇ ನೀಡುತ್ತದೆ. ಹೀಗಾಗಿ ನಾವು ಅದರ ಕಡೆ ಬಹಳಷ್ಟು ಗಮನಕೊಡಬೇಕು. ಪಾದಗಳಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತಿರಬೇಕು. ಏಳು ಸಮಯಗಳಲ್ಲಿ ನಮ್ಮ ಪಾದ ನಮಗಿರುವ ಗಂಭೀರ ಆರೋಗ್ಯದ ಸಮಸ್ಯೆಗಳ ಸೂಚನೆಯನ್ನು ನೀಡುತ್ತದೆ.
ಇದನ್ನೂ ಓದಿ: ಈ ಏಳು ಡಿಟಾಕ್ಸ್ ಅಂಶಗಳು ನಿಮ್ಮ ಕಿಡ್ನಿಯನ್ನು ಆರೋಗ್ಯಕರವಾಗಿ ಇಡುತ್ತವೆ
ಪಾದಗಳು ಊದಿಕೊಳ್ಳುವುದು:
ಪಾದಗಳು ಊದಿಕೊಳ್ಳುವುದು ಒಂದು ಸಣ್ಣ ಸಂಗತಿ. ಆದ್ರೆ ನಿರಂತರವಾಗಿ ಕಡಿಮೆಯೇ ಆಗದೆ ಊದಿಕೊಂಡ ಪಾದಗಳು ಸುಮಾರು ದಿನಗಳ ಕಾಲ ಹಾಗೆ ಇದ್ದರೆ ಅಲ್ಲಿ ಸಮಸ್ಯೆ ಇದೆ ಅಂತಲೇ ಅರ್ಥ. ಕೆಳಗಿನ ಅಂಗಗಳಾದ ಪಾದ, ಕಾಲುಗಳಲ್ಲಿ ಸಮಸ್ಯೆ ಇದೆ ಅಂತಲೇ ಅರ್ಥ. ಅಲ್ಲಿ ದ್ರವಗಳು ಶೇಖರಣೆಗೊಳ್ಳುತ್ತಿವೆ ಎಂದೇ ಇದರ ಸೂಚನೆಗಳು. ಒಂದು ಬಾರಿ ತ್ಯಾಜ್ಯಗಳು ಈ ಅಂಗಗಳಲ್ಲಿ ಶೇಖರಣೆಗೊಳ್ಳಲು ಶುರುವಾದ್ರೆ ಹಾರ್ಟ್ ಅಟ್ಯಾಕ್ನಂತಹ ಸಮಸ್ಯೆಗಳು ಶುರುವಾಗಿದೆ ಎಂದು ತಿಳಿದುಕೊಳ್ಳಬೇಕು. ಇಂತಹ ಸಮಯದಲ್ಲಿ ಹೃದಯ ರಕ್ತವನ್ನು ಪಂಪ್ ಮಾಡುವ ಕಾರ್ಯ ಇಲ್ಲಿ ನಿಧಾನಗತಿಯಿಂದ ಸಾಗುತ್ತಿರುತ್ತದೆ. ಹೀಗಾಗಿ ಬಹಳಷ್ಟು ದಿನ ಪಾದಗಳು ಊದಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
ಮುಂಗಾಲಿನಲ್ಲಿ ನೋವು ಕಾಣಿಸಿಕೊಳ್ಳುವುದು
ಮುಂಗಾಲಿನಲ್ಲಿ ನಿಮಗೆ ನಿರಂತರ ನೋವು ಕಾಣಿಸಿಕೊಂಡರೆ ನಿಮಗೆ ಕೀಲೂತ ಶುರುವಾಗಿದೆ ಅನ್ನೋ ಸೂಚನೆ ಅದು. ಕೀಲುಗಳಲ್ಲಿ ಸಂಧವಾತ, ಉರಿಯೂತ ಶುರುವಾದಲ್ಲಿ ಈ ರೀತಿಯ ಲಕ್ಷಣಗಳು ಕಾಣುತ್ತವೆ. ಕೀಲುಗಳಲ್ಲಿ ಯೂರಿಕ್ ಆ್ಯಸಿಡ್ ವೃದ್ಧಿಯಾಗುತ್ತಿದೆ ಎಂದು ತಿಳಿದುಕೊಳ್ಳಬೇಕು.
ಪಾದಗಳು ಜುಮ್ ಹಿಡಿಯುವುದು ಮತ್ತು ಮರಗಟ್ಟುವುದು
ಒಂದು ವೇಳೆ ನಿಮ್ಮ ಪಾದ ಪದೇ ಪದೇ ಜುಮ್ ಹಿಡಿಯುವುದುರ ಹಾಗೂ ಮರುಗಟ್ಟುವುದು ಆಗಲು ಶುರು ಆಗಿದಲ್ಲಿ, ಇದು ನರಮಂಡಲಕ್ಕೆ ಹಾನಿ ಆಗಿದೆ ಅನ್ನುವ ಸೂಚನೆ. ಇಂತಹ ಸಮಸ್ಯೆಗಳು ಹೆಚ್ಚು ಸಕ್ಕರೆ ಕಾಯಿಲೆಯೊಂದಿಗೆ ನಂಟನ್ನು ಹೊಂದಿರುತ್ತವೆ.ಸಕ್ಕರೆ ಕಾಯಿಲೆ ತುಂಬಾ ಹೆಚ್ಚಾದಾಗ ಈ ರೀತಿಯ ಸಮಸ್ಯೆಗಳು ಕಾಣುತ್ತವೆ.
ಸ್ಪೈಡರ್ ವೈನ್ಸ್:
ಪಾದದ ಬಳಿ ಉಬ್ಬಿದ ರಕ್ತನಾಳಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸ.ಇದು ಕೂಡ ಲಿವರ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಚಿಸುತ್ತದೆ.
ಒಡೆದ ಪಾದಗಳು:
ಒಡೆದ ಪಾದಗಳು ಅವುಗಳನ್ನು ಸುಂದರವಾಗಿಟ್ಟುಕೊಳ್ಳುವಲ್ಲಿ ವಹಿಸಿದ ನಿರ್ಲಕ್ಕೆ ಸಾಕ್ಷಿಯಾದರೂ ಕೂಡ, ಅವು ಅನೇಕ ಸಮಸ್ಯೆಗಳ ಸೂಚನೆಯೂ ಕೂಡ ಆಗಿವೆ. ಥೈರಾಡ್ನಂತಹ ಸಮಸ್ಯೆಗಳು ಆರಂಭವಾದ ಸೂಚನೆಗಳು ಅಂತಲೂ ಹೇಳಲಾಗುತ್ತದೆ.
ಪಾದಗಳು ತಂಪಾಗುವುದು
ಬೇಸಿಗೆ ಕಾಲದಲ್ಲಿಯೂ ಕೂಡ ನಿಮ್ಮ ಪಾದಗಳು ಮಂಜುಗಡ್ಡೆಯಂತೆ ತಂಪಾಗಿ ಇದ್ದರೆ ಇದು ರಕ್ತಪರಿಚಲನೆಯ ಹಾಗೂ ನರಕ್ಕೆ ಸಂಬಂಧಿಸಿದ ಸಮಸ್ಯೆಗಳು ಇವೆ ಎಂದು ಅರ್ಥ. ದೇಹದಲ್ಲಿ ಕಡಿಮೆ ಕಬ್ಬಿಣ ಅಂಶ ಇದ್ದಲ್ಲಿ ಅಥವಾ ಅನೆಮಿಯಾದಂತಹ ಸಮಸ್ಯೆಗಳು ನಿಮ್ಮ ದೇಹದಲ್ಲಿದ್ದರೆ ಇಂತಹ ಸೂಚನೆಗಳು ಕಾಣ ಸಿಗುತ್ತವೆ.
ಇದನ್ನೂ ಓದಿ:ಈ ಲಕ್ಷಣಗಳು ನಿಮಲ್ಲಿ ಇದ್ಯಾ? ಕಮ್ಮಿ ಉಪ್ಪು ತಿನ್ನೋದು ಎಷ್ಟು ಡೇಂಜರ್..?
ಹಿಮ್ಮಡಿಯಲ್ಲಿ ನೋವು
ದೇಹದಲ್ಲಿ ಪೋಟ್ಯಾಶೀಯಂ ಸೋಡಿಯಂನಂತಹ ಜೀವಸತ್ವಗಳು ಕಡಿಮೆಯಾದಲ್ಲಿ ಹಿಮ್ಮಡಿಯ ನೋವು ಕಾಣಿಸಿಕೊಳ್ಳತ್ತದೆ. ಇಂತಹ ಸಮಸ್ಯೆಗಳು ಕಂಡು ಬಂದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ