ಮಂಡ್ಯದಲ್ಲಿ ಪೊಲೀಸರ ಬಳಿಕ ವೈದ್ಯರ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮ ಬಲಿ.. ಈ ಪಟ್ಟಣಕ್ಕೆ ಏನಾಗಿದೆ?

author-image
Veena Gangani
Updated On
ಮಂಡ್ಯದಲ್ಲಿ ಪೊಲೀಸರ ಬಳಿಕ ವೈದ್ಯರ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮ ಬಲಿ.. ಈ ಪಟ್ಟಣಕ್ಕೆ ಏನಾಗಿದೆ?
Advertisment
  • ಮೇ 29 ಗುರುವಾರ ಮಿಮ್ಸ್‌‌ಗೆ ಮಗಳನ್ನು ಕರೆತಂದಿದ್ದ ತಂದೆ ನಿಂಗರಾಜು
  • ಮಂಡ್ಯ ಮಿಮ್ಸ್ ಆಸ್ಪತ್ರೆಯ ವೈದ್ಯರ ವಿರುದ್ಧ ಪೋಷಕರು ಗಂಭೀರ ಆರೋಪ
  • ಬೇರೆ ವೈದ್ಯರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ ಒತ್ತಾಯ

ಮಂಡ್ಯ: ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮ ಬಲಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿಯಾಗಿದ್ದಾಳೆ. ನೆಲ್ಲೂರು ಗ್ರಾಮದ ಸಾನ್ವಿ (7) ಮೃತ ಬಾಲಕಿ.

ಇದನ್ನೂ ಓದಿ:ಸ್ಟಾರ್​ ನಟನ ಹೆಂಡತಿಯ ಬ್ಯುಸಿನೆಸ್​ ಐಡಿಯಾ.. ಕೇವಲ ನಿದ್ದೆ ಮಾಡಲು ಲಕ್ಷ ಲಕ್ಷ ಹಣ, ಭಾರೀ ಟೀಕೆ!

publive-image

ಮೃತ ಬಾಲಕಿ ಕಾಲಿನ ಮೇಲೆ ಟೈಲ್ಸ್ ಬಿದ್ದು ಪಾದದ ಮೂಳೆ ಮುರಿತಗೊಂಡಿತ್ತು. ಹೀಗಾಗಿ ಮೇ 29 ಗುರುವಾರ ಮಿಮ್ಸ್‌‌ಗೆ ತಂದೆ ನಿಂಗರಾಜು ಮಗಳನ್ನು ಕರೆತಂದಿದ್ದರು. ಆಗ ಪಾದದ ಮೂಳೆ ಮುರಿತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬಂದಿದ್ದ ಬಾಲಕಿಗೆ ರಾತ್ರಿಯೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದಾದ ಬಳಿಕ ಆಪರೇಷನ್ ಮಾಡಿದ ಕೂಡಲೇ ರಾತ್ರಿಯೇ ವಾರ್ಡ್‌ಗೆ ಶಿಫ್ಟ್ ಮಾಡಿದ್ದರು. ಆದ್ರೆ ಶುಕ್ರವಾರ ಬೆಳಿಗ್ಗೆ ಬಾಲಕಿ ಆರೋಗ್ಯದಲ್ಲಿ ಏರುಪೇರು ಆಗಿದೆ. ಬಳಿಕ ತೀವ್ರ ನಿಗಾ ಘಟಕದಲ್ಲಿ ಬಾಲಕಿಗೆ ಚಿಕಿತ್ಸೆ ಕೊಟ್ಟಿದ್ದಾರೆ. ಶನಿವಾರ ಬೆಳಿಗ್ಗೆ ಡ್ರಿಪ್ ಮೂಲಕ ಔಷಧಿ ನೀಡಲಾಗಿತ್ತು. ಔಷಧಿ ನೀಡುತ್ತಿದ್ದಂತೆ ಸಾನ್ವಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಳು. ಆದ್ರೆ ಶನಿವಾರ ರಾತ್ರಿ 10:30ರಲ್ಲಿ ಮಗು ನಿಧನದ ಬಗ್ಗೆ ಪೋಷಕರಿಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಪೋಷಕರಿಗೆ ಮಾಹಿತಿ ನೀಡುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಿ ಕರೆಸಿಕೊಂಡಿದ್ದ ಆರೋಪ.

publive-image

ಆದ್ರೆ, ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದೇ ನನ್ನ ಮಗಳ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಮಗು ಸಾವಿನ ಬಗ್ಗೆ ಪ್ರಶ್ನಿಸಿದ ಕುಟುಂಬಸ್ಥರಿಗೆ ಮಿಮ್ಸ್ RMO ಡಾ. ದರ್ಶನ್, ಅಂಗಾಂಗ ವೈಫಲ್ಯದಿಂದ ಮಗು ಸತ್ತಿದೆ, ಬೇಕಾದರೆ ತನಿಖೆ ಮಾಡಿಸಿಕೊಳ್ಳಿ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರಂತೆ. ಅಲ್ಲದೇ ಪೊಲೀಸರ ಮೂಲಕ ನಮ್ಮನ್ನು ಕಳುಹಿಸಲು ಯತ್ನಿಸಿದ್ದಾರೆ ಎಂದು ಮೃತ ಮಗುವಿನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment