/newsfirstlive-kannada/media/post_attachments/wp-content/uploads/2023/10/Sudha-Murthy-Narayan-Murthy.jpg)
ದೇಶದ ಯುವಕರು ವಾರಕ್ಕೆ ಕನಿಷ್ಠ 70 ಗಂಟೆ ಕೆಲಸ ಮಾಡಬೇಕು. ಇದರಿಂದ ಭಾರತದ ಆರ್ಥಿಕತೆಯ ಶಕ್ತಿ ಹೆಚ್ಚಾಗುತ್ತದೆ ಎನ್ನುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಈ ಸಲಹೆ ಸಿಕ್ಕಾಪಟ್ಟೆ ಚರ್ಚೆಗೀಡಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಾರಾಯಣ ಮೂರ್ತಿ ಅವರ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಈ ಬಗ್ಗೆ ಚರ್ಚೆ, ಟೀಕೆ, ಟ್ರೋಲ್‌ಗಳು ಜಾಸ್ತಿಯಾಗುತ್ತಿದ್ದಂತೆ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ಸಖತ್ ಕೌಂಟರ್ ಕೊಟ್ಟಿದ್ದಾರೆ.
ವಾರಕ್ಕೆ 70 ಗಂಟೆ ಕೆಲಸ ಮಾಡುವ ಸಲಹೆಯನ್ನು ಬೆಂಬಲಿಸಿರುವ ಸುಧಾಮೂರ್ತಿ, ನಾರಾಯಣ ಮೂರ್ತಿ ಅವರು ಬರೀ 70 ಗಂಟೆಯಲ್ಲ ವಾರಕ್ಕೆ 80-90 ಗಂಟೆ ಕೆಲಸ ಮಾಡಿದವರು. ನಾರಾಯಣ ಮೂರ್ತಿ ಅವರು ನಿಜವಾದ ಕಠಿಣ ಪರಿಶ್ರಮದಲ್ಲಿ ನಂಬಿಕೆ ಉಳ್ಳವರು. ಪರಿಶ್ರಮದಿಂದಲೇ ಬದುಕಿ, ಸಾಧಿಸಿದವರು. ಅವರಿಗೆ ಅನ್ನಿಸಿದ್ದನ್ನು ಅವರ ಅನುಭವವನ್ನೇ ಅವರು ಹಂಚಿಕೊಂಡಿದ್ದಾರೆ ಅಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ.
ನಾರಾಯಣ ಮೂರ್ತಿ ಅವರು ತಮ್ಮ ವೃತ್ತಿ ಜೀವನದಲ್ಲಿ 80-90 ಗಂಟೆಯಷ್ಟು ಕಡಿಮೆ ಕೆಲಸ ಮಾಡಿಲ್ಲ. ಕಠಿಣ ಶ್ರಮದಿಂದ ಕೆಲಸ ಮಾಡೋದು ನಾರಾಯಣ ಮೂರ್ತಿ ಅವರ ಫ್ಯಾಷನ್. ಅವರು ಅದನ್ನೇ ನಂಬಿಕೊಂಡು ಬಂದವರು. ಅವರು ಹಾಗೆ ಬದುಕಿದವರು. ಹಾಗಾಗಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಸ್ವಂತ ಅನುಭವದಿಂದಲೇ ಯುವಕರಿಗೆ ವಾರಕ್ಕೆ 70 ಗಂಟೆ ಕೆಲಸ ಮಾಡುವುದು ಉತ್ತಮ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಾರಕ್ಕೆ 70 ಗಂಟೆಯ ಕೆಲಸ.. ನಾರಾಯಣ ಮೂರ್ತಿ ಸಲಹೆಗೆ ಖ್ಯಾತ ಹೃದ್ರೋಗ ತಜ್ಞರಿಂದ ಖಡಕ್ ಪ್ರಶ್ನೆ; ನೆಟ್ಟಿಗರು ಫಿದಾ!
ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದ ನಾರಾಯಣ ಮೂರ್ತಿ ಅವರು ಈ ದೇಶದ ಯುವಕರಿಗೆ ನನ್ನದೊಂದು ಮನವಿ ಇದೆ. ಯುವಕರು ವಾರದಲ್ಲಿ 70 ಗಂಟೆಗಳ ದುಡಿಯಬೇಕು ಎಂದು ಹೇಳಿಕೆ ನೀಡಿದ್ದರು. 77 ವರ್ಷದ ನಾರಾಯಣ ಮೂರ್ತಿ ಅವರ ಈ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಇನ್ನೂ ಪರ, ವಿರೋಧವಾದ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ