ನಿದ್ದೆಗಾಗಿ 70% ದಂಪತಿಗಳು ಡಿವೋರ್ಸ್​.. ಅದರಲ್ಲಿ ಭಾರತವೇ ಫಸ್ಟ್; ನಿಮಗೂ ಈ ಸಮಸ್ಯೆ ಇದ್ಯಾ?

author-image
admin
Updated On
ನಿದ್ದೆಗಾಗಿ 70% ದಂಪತಿಗಳು ಡಿವೋರ್ಸ್​.. ಅದರಲ್ಲಿ ಭಾರತವೇ ಫಸ್ಟ್; ನಿಮಗೂ ಈ ಸಮಸ್ಯೆ ಇದ್ಯಾ?
Advertisment
  • ನಿದ್ದೆ.. ನಿದ್ದೆ.. ನಿದ್ದೆ.. ಸಮಸ್ಯೆಯಿಂದ ಬೇರೆಯಾಗ್ತಿದ್ದಾರೆ ಜೋಡಿ
  • ದಂಪತಿಗಳ ನಡುವೆ ಡಿವೋರ್ಸ್​ ಹೆಜ್ಜೆ.. ಬೇರೆ ದೇಶದಲ್ಲಿ ಎಷ್ಟು?
  • ಮಹಿಳೆಯರ ವೈಯಕ್ತಿಕ ವಿಚಾರಕ್ಕೂ ನಿದ್ರೆಯೇ ಕಾರಣವಂತೆ!

ನಿದ್ದೆ.. ನಿದ್ದೆ.. ನಿದ್ದೆ.. ಅಲ್​ಮೋಸ್ಟ್ ಆಲ್​​ ಜನರಿಗೆ ಬೇಕಾಗಿರೋದು ನಿದ್ದೆ. ಈ ನಿದ್ದೆ ಕೆಟ್ಟು ಯಾರ್ ಇರ್ತಾರೆ ಅಂತಾರೆ. ಅದೇ ರೀತಿ ಒಳ್ಳೇ ನಿದ್ದೆ ಮಾಡಬೇಕು ಅಂತಂದ್ರೆ ಕನಿಷ್ಠ 7 ರಿಂದ 8 ಗಂಟೆ ನಿದ್ದೆ ಮಾಡಬೇಕು ಅಂತ ಡಾಕ್ಟರ್​​ಗಳೇ ಹೇಳ್ತಾರೆ. ಇದೇ ನಿದ್ದೆಯ ವಿಚಾರವಾಗಿ ಮಾಡಿರೋ ಒಂದು ಸರ್ವೇಯಿಂದ ಜನರು ತಲೆಕಡೆಸಿಕೊಂಡಿದ್ದಾರೆ. ಯಾಕೆಂದ್ರೆ 70 ಪರ್ಸೆಂಟ್​ಗಿಂತ ಹೆಚ್ಚಾಗಿ ಭಾರತದಲ್ಲಿ ವಾಸಿಸುತ್ತಿರೋ ದಂಪತಿಗಳು ನಿದ್ರೆ ಕಾರಣದಿಂದ ವಿಚ್ಛೇದನಕ್ಕೆ ಹೆಜ್ಜೆ ಹಾಕ್ತಿದ್ದಾರಂತೆ. ಶಾಂತಿ ಹಾಗೂ ಒಳ್ಳೆ ನಿದ್ದೆಗೋಸ್ಕರ ಸಪರೇಟಾಗಿ ಮಲಗ್ತಿದ್ದಾರೆ ಅಂತ ಒಂದು ರಿಪೋರ್ಟ್​ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ರೆಸ್‌ಮೆಡ್‌ನ 2025ರ ಜಾಗತಿಕ ನಿದ್ರೆಯ ಸಮೀಕ್ಷೆಯ ಪ್ರಕಾರ, ಭಾರತ ದೇಶ ನಿದ್ರೆ ವಿಚಾರವಾಗಿ ಡಿವೋರ್ಸ್​ನಲ್ಲಿ ಫಸ್ಟ್ ಇದ್ದು, 78% ದಂಪತಿಗಳು ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಚೀನಾ 67%, ದಕ್ಷಿಣ ಕೊರಿಯಾ 65%ನಲ್ಲಿದೆ. 13 ಮಾರುಕಟ್ಟೆಗಳಲ್ಲಿ 30,000ಕ್ಕೂ ಹೆಚ್ಚು ವ್ಯಕ್ತಿಗಳನ್ನು ಸರ್ವೇ ಮಾಡಲಾಗಿದೆ. ಇದ್ರಲ್ಲಿ ವಿಚಾರ ಮಾಡಬೇಕಾಗಿರೋದು ಏನಂದ್ರೆ ಇದೇ ಸರ್ವೇಯಿಂದ ಯುನೈಟೆಡ್ ಕಿಂಗ್‌ಡಮ್ ಹಾಗೂ ಯುನೈಟೆಡ್ ಸ್ಟೇಟ್ಸ್‌ನ ದಂಪತಿಗಳು ನಿದ್ರೆ ವಿಚಾರದಿಂದ 50% ಒಟ್ಟಿಗೆ ಮಲಗ್ತಿದ್ದಾರೆ, ಇನ್ನರ್ಧ ಬೇರೆ ಬೇರೆ ಮಲಗ್ತಿದ್ದಾರೆ.

publive-image

ನಿದ್ರೆಯ ಭಂಗಕ್ಕೆ ಕಾರಣ ಅಂತಂದ್ರೆ ಸಂಗಾತಿಯ ಗೊರಕೆ, ಜೋರಾಗಿ ಉಸಿರಾಡೋದು ಅಥವಾ ಗಾಳಿಗಾಗಿ ಏದುಸಿರು ಬಿಡೋದು 32%, ಚಡಪಡಿಕೆ 12%, ಮಲಗೋ ಟೈಂ ಸರಿಯಿಲ್ಲದೇ ಇರೋದು 10% ಹಾಗೂ 8% ಹಾಸಿಗೆಗೆ ಹಾಕೋ ಪರದೆಯಿಂದ ಸೇರಿವೆ. ಸಪರೇಟ್ ಆಗಿ ಮಲಕ್ಕೊಂಡ್ರೇ, ಒಳ್ಳೇ ಹಾಗೂ ಸೈಲೆನ್ಸ್ ನಿದ್ದೆ ಬರುತ್ತಂತೆ. ಇದ್ರಿಂದ ಗಂಡ ಹೆಂಡ್ತಿ ನಡುವೆ ದಾಂಪತ್ಯ ಜೀವನ ಚೆನ್ನಾಗಿರುತ್ತೆ ಅಂತ ಅಂದಾಜಿಸಲಾಗಿದೆ.

ಒಟ್ಟಿಗೆ ಮಲಗೋದ್ರಿಂದ ಯೂಸ್ ಅಂತಾನೂ ಕೆಲವ್ರು ಹೇಳಿದ್ದಾರೆ. ಆಕ್ಸಿಟೋಸಿನ್ ಅಂದ್ರೆ ಪ್ರೀತಿಯ ಹಾರ್ಮೋನ್​ನಿಂದ ಕಡಿಮೆ ಮಟ್ಟದ ಡಿಪ್ರೆಷನ್, ಆತಂಕ ಹಾಗೂ ಒತ್ತಡಕ್ಕೆ ಕಾರಣವಾಗುತ್ತೆ. ಅಕ್ಯುರೇಟಾಗಿ ಹೇಳಬೇಕು ಅಂತಂದ್ರೆ, ಶೇಕಡಾ 69 ರಷ್ಟು ಭಾರತೀಯರಿಗೆ ಹೆಚ್ಚಿನ ಒತ್ತಡದ ಅಂಶ ಅಂತ ವರದಿಯಾಗಿದೆ. 67% ದಕ್ಷಿಣ ಕೊರಿಯಾ, 65% ಥೈಲ್ಯಾಂಡ್ ಜನರು ಒತ್ತಡನೇ ಅಂತಾನೇ ಹೇಳ್ತಾರೆ. ಶೇ.53 ರಷ್ಟು ಜನರ ಆತಂಕ ಅಂತಂದ್ರೇ ನಿದ್ರೆ ಅಂತಾನೇ ಪ್ರಾಥಮಿಕ ಕಾರಣ ಅಂತ ಮೆನ್ಶನ್ ಮಾಡಿ ಹೇಳಿದ್ದಾರೆ.

publive-image

70% ಕಾರ್ಮಿಕರು ರಾತ್ರಿಯ ನಿದ್ರೆಯ ಇಲ್ಲದೇ ಅನಾರೋಗ್ಯದಿಂದ ಚಿಕಿತ್ಸೆ ಪಡೀತಾ ಇದೀವಿ ಅಂತ ಒಪ್ಪಿಕೊಂಡಿದ್ದಾರೆ. 49% ಜನರು ವಾರಕ್ಕೆ ಕನಿಷ್ಠ 3 ಸರಿ ನಿದ್ರೆ ಮಾಡೋಕೂ ಕಷ್ಟ ಪಡ್ತಿದ್ದಾರೆ. ಆದ್ರೆ 37% ಜನರು ರಾತ್ರಿ 9 ಗಂಟೆ ಆದ್ಮೇಲೆ ನೈಟ್​​ ಶಿಫ್ಟ್​​ನಿಂದ ಒದ್ದಾಡ್ತಿದ್ದಾರಂತೆ. ಋತುಮತಿ ಟೈಂನಲ್ಲಿ 44% ರಷ್ಟು ಮಹಿಳೆಯರು ವಾರಕ್ಕೆ ಕನಿಷ್ಠ 3 ಬಾರಿ ನಿದ್ದೆ ಮಾಡೋಕೆ ಕಷ್ಟಪಡ್ತಿದ್ದಾರೆ.

ನಿದ್ರಾಹೀನತೆಯಿಂದ ಎದುರಾಗೋ ಸಮಸ್ಯೆಗಳ ಬಗ್ಗೆ ರೆಸ್‌ಮೆಡ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಕಾರ್ಲೋಸ್ ನುನೆಜ್ ಎಚ್ಚರಿಕೆ ಕೊಟ್ಟಿದ್ದಾರೆ. ನಿದ್ರೆ ಕೊರತೆ ಅಪಾಯ. ಚಿಕಿತ್ಸೆ ಪಡೆಯದ ಸ್ಲೀಪ್ ಅಪ್ನಿಯಾ ಹೊಂದಿರೋ ವ್ಯಕ್ತಿಗಳಲ್ಲಿ, ಅಪಾಯಗಳು ಹೆಚ್ಚಿರುತ್ವೆ, ಹೃದಯ ವೈಫಲ್ಯ, ಶುಗರ್ ಹಾಗೂ ಪಾರ್ಶ್ವವಾಯುಗೆ ಕಾರಣ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಮಾಧುರಿ ಸೌಂದರ್ಯದ ಸೆಳೆತಕ್ಕೆ ಮೈಮರೆತಿದ್ದ ಸ್ಟಾರ್ ನಟ.. ತುಟಿಯಲ್ಲಿ ರಕ್ತ ಬರುವಂತೆ ಕಚ್ಚಿದ್ದ! ಯಾರು ಗೊತ್ತಾ? 

ಸಣ್ಣ ಪುಟ್ಟ ಕಾರಣಗಳಿಗೆ ಬೇರೆ ಬೇರೆ ದೇಶಗಳಲ್ಲಿ ಡಿವೋರ್ಸ್​ ಶುರುವಾಗಿದೆ. ಅದೇ ರೀತಿ ನಾವೇನ್​ ಕಮ್ಮಿ ಅಂತಾಲೋ ಏನೋ, ಭಾರತದಲ್ಲೂ ವಿಚ್ಛೇದನ ಕೇಸ್​​ಗಳು ದಾಖಲಾಗ್ತಿವೆ. ಅದ್ರಂತೆ ಗಂಡ ಹೆಂಡತಿ ಸಾಂಸಾರಿಕ ಜೀವನಕ್ಕೆ ನಿದ್ದೆ ಇಂರ್ಪಾಟೆಂಟ್ ಈ ವರದಿ ಇನ್​ಡೈರೆಕ್ಟ್ಆಗಿ ಹೇಳ್ತಿದೆ. ಕರೆಕ್ಟ್ ಟೈಂನಲ್ಲಿ ಕರೆಕ್ಟಾಗಿ ನಿದ್ದೆ ಮಾಡೋದಕ್ಕೆ ಪ್ಲ್ಯಾನ್ ಮಾಡಿಕೊಳ್ಳಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment