/newsfirstlive-kannada/media/post_attachments/wp-content/uploads/2024/12/FARMER-DIVORCE.jpg)
ದಾಂಪತ್ಯದಲ್ಲಿ ಪ್ರೀತಿ, ನಂಬಿಕೆ ಸಂಬಂಧಗಳ ದುರ್ಬಲತೆಯಿಂದಾಗಿ ಇತ್ತೀಚೆಗೆ ಡಿವೋರ್ಸ್ಗಳ ಸಂಖ್ಯೆ ಹೆಚ್ಚುತ್ತಿದೆ. ದಾಂಪತ್ಯದಲ್ಲಿ ನೆಮ್ಮದಿ ಇಲ್ಲದಾಗ ಅಂತಹ ಸಂಬಂಧಗಳು ದೂರವಾಗಿ ನೆಮ್ಮದಿ ಪಡೆಯಲು ಯತ್ನಿಸುತ್ತಾರೆ. ಇತ್ತೀಚೆಗೆ ಹೆಂಡತಿಯ ಕಾಟಕ್ಕೆ ಬೇಸತ್ತು ಬೆಂಗಳೂರಿನ ಟೆಕ್ಕಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಸುದ್ದಿಯಾಯ್ತು. ಟೆಕ್ಕಿ ಅತುಲ್ ಸುಭಾಷ್ ಒಂದೂವರೆ ಗಂಟೆ ವಿಡಿಯೋ ಮಾಡಿ, 40 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಅದರಲ್ಲಿ ಪತ್ನಿಗೆ ಹಣದ ದುರಾಸೆಯಿದೆ, ಮಾನಸಿಕ ಕಿರುಕುಳ ನೀಡ್ತಾಳೆ ಅಂತ ಆರೋಪಿಸಿದ್ದ. ಹರಿಯಾಣದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದ್ದು ಪತಿ ತನ್ನ ಪತ್ನಿಗೆ ಜಮೀನು, ಆಸ್ತಿಯನ್ನೇ ಮಾರಿ ಜೀವನಾಂಶ ನೀಡಿದ್ದಾನೆ.ರೈತನಾಗಿರುವ ಪತಿ ಸುಭಾಷ್ ಚಂದ್ರ ವಯಸ್ಸು 70, ಪತ್ನಿ ಸಂತೋಷ್ ಕುಮಾರಿ ವಯಸ್ಸು 73. ಮೊಮ್ಮಕ್ಕಳೊಂದಿಗೆ ಕಾಲ ಕಳೆಯಬೇಕಾದ ಹೊತ್ತಲ್ಲಿ ದಂಪತಿ ದೂರವಾಗಿದ್ದು ಪತಿ, ತನ್ನ ಪತ್ನಿಗೆ ಬರೋಬ್ಬರಿ 3 ಕೋಟಿ ರೂ. ಜೀವನಾಂಶ ನೀಡಿದ್ದಾನೆ.
ಇದನ್ನೂ ಓದಿ:ಹಾಲು ಹಿಡಿದು ಫಸ್ಟ್ ನೈಟ್ ಕೋಣೆಗೆ ಬಂದ ಮದುಮಗಳು.. ಸೀನ್ ಕಟ್ ಆಗಿದೆ.. ಮುಂದೇನಾಯ್ತು..?
ಈಗ ವಿಚ್ಛೇದನ ಪಡೆದುಕೊಂಡಿರುವ ದಂಪತಿ ಆ.27, 1980ರಂದು ಮದುವೆಯಾಗಿದ್ರು. ಈಗ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಸೇರಿ ಮೂವರು ಮಕ್ಕಳಿದ್ದಾರೆ.
ಇವರಿಬ್ಬರು ಸುದೀರ್ಘ 44 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದಾರೆ. ಆದರೆ ವರ್ಷಗಳು ಕಳೆದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ. ಅವರ ಸಂಬಂಧ ಮತ್ತಷ್ಟು ಹದಗೆಟ್ಟು 2006, ಮೇ 8ರಿಂದ ತಮ್ಮ ತಮ್ಮ ದಾರಿ ಕಂಡುಕೊಂಡು ಬೇರೆ ಬೇರೆಯಾಗಿ ವಾಸಿಸತೊಡಗಿದ್ದಾರೆ. ಅದಾದ ಬಳಿಕ ಪತಿ ಕೌಟುಂಬಿಕ ಕೋರ್ಟ್ನಲ್ಲಿ ಮಾನಸಿಕ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ. ಆದರೆ 2013ರಲ್ಲಿ ಪತ್ನಿಯ ವಿಚ್ಛೇದನದ ಮನವಿಯನ್ನು ಕರ್ನಾಲ್ ಕೋರ್ಟ್ ತಿರಸ್ಕರಿಸಿತ್ತು.
ಇದನ್ನೂ ಓದಿ:ಕ್ಷಮಿಸಿಬಿಡು ಇನಿಯನೇ.. ಪ್ರೀತಿಸಿದ ಹುಡುಗನಿಗೆ ಮೆಸೇಜ್ ಮಾಡಿ ಪ್ರಾಣ ಬಿಟ್ಟ ಯುವತಿ; ಕಾರಣ ನಿಗೂಢ!
ಆದರೂ ಡಿವೋರ್ಸ್ಗಾಗಿ ಪತ್ನಿ ಸಂತೋಷ್ ಕುಮಾರಿ, ಪಂಜಾಬ್-ಹರಿಯಾಣ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಳು. ಈ ಪ್ರಕರಣ 11 ವರ್ಷಗಳಿಂದ ಬಾಕಿ ಉಳಿದಿದ್ದು ನ.4ರಂದು ಡಿವೋರ್ಸ್ ಪ್ರಕರಣವನ್ನು ಇತ್ಯರ್ಥಗೊಳಿಸಿದೆ. ಕಳೆದ ನವೆಂಬರ್ನಲ್ಲಿ ಈ ಪ್ರಕರಣ ರಾಜಿ ಮೂಲಕ ಹೈಕೋರ್ಟ್ ಕೊನೆಗೊಳಿಸಿದೆ. ರೈತ ಸುಭಾಷ್ ಚಂದ್ ತನ್ನ ಪತ್ನಿಗೆ 3.07 ಕೋಟಿ ರೂ. ಶಾಶ್ವತ ಜೀವನಾಂಶ ನೀಡಲು ಒಪ್ಪಿಕೊಂಡಿದ್ದಾನೆ. ಜೀವನಾಂಶ ನೀಡಲು ಕೃಷಿ ಭೂಮಿಯನ್ನೇ ಮಾರಾಟ ಮಾಡಿದ್ದಾನೆ. ಅದರಿಂದ ಬಂದ 2 ಕೋಟಿ 16 ಲಕ್ಷ ರೂ. ಡಿಡಿ ನೀಡಿದ್ದಾನೆ. ಅಲ್ಲದೆ ಕಬ್ಬು ಸೇರಿ ವಿವಿಧ ಬೆಳೆಗಳ ಮಾರಾಟದಿಂದ ಬಂದ 50 ಲಕ್ಷ ರೂ. ನಗದು ರೂಪದಲ್ಲಿ ಮತ್ತು ಚಿನ್ನ, ಬೆಳ್ಳಿ ಆಭರಣ ಮಾರಿ 40 ಲಕ್ಷ ರೂ. ಪತ್ನಿ ಮತ್ತು ಮೂವರು ಮಕ್ಕಳಿಗೆ ನೀಡಿದ್ದಾನೆ.
ಒಪ್ಪಂದದಂತೆ ಇದು ಪತ್ನಿ, ಮಕ್ಕಳಿಗೆ ನೀಡಿದ ಶಾಶ್ವತ ಜೀವನಾಂಶ. ಮುಂದೆ ರೈತನ ಅಥವಾ ಆತನ ಉತ್ತರಾಧಿಕಾರದ ಮೇಲೆ ಯಾವುದೇ ಹಕ್ಕು ಪತ್ನಿ, ಆತನ ಮಕ್ಕಳಿಗೆ ಇರುವುದಿಲ್ಲ ಅಂತ ಹೈಕೋರ್ಟ್ ಆದೇಶದಲ್ಲಿ ಹೇಳಿದೆ. ಈ ಪ್ರಕರಣ 44 ವರ್ಷ ದಾಂಪತ್ಯ ಜೀವನ ನಡೆಸಿದ ಮೇಲೆಯೂ ಅವರ ನಡುವೆ ಸಂಬಂಧದಲ್ಲಿನ ಪ್ರೀತಿ, ವಿಶ್ವಾಸಾರ್ಹತೆ ಪ್ರಶ್ನಿಸುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ