ಕರ್ನಾಟಕದ ಈ ಜಿಲ್ಲೆಯಿಂದ ಪಾದಯಾತ್ರೆ.. ಕೇದಾರನಾಥ ತಲುಪಿದ 70 ವರ್ಷದ ವೃದ್ಧ

author-image
Bheemappa
Updated On
ಕರ್ನಾಟಕದ ಈ ಜಿಲ್ಲೆಯಿಂದ ಪಾದಯಾತ್ರೆ.. ಕೇದಾರನಾಥ ತಲುಪಿದ 70 ವರ್ಷದ ವೃದ್ಧ
Advertisment
  • ಕೇದಾರನಾಥಕ್ಕೆ ಎಷ್ಟು ದಿನಗಳ ಕಾಲ ಪಾದಯಾತ್ರೆ ಮಾಡಿದರು?
  • ಒಟ್ಟು ಎಷ್ಟು ಸಾವಿರ ಕಿಲೋ ಮೀಟರ್ ದೂರ ಈ ಪಾದಯಾತ್ರೆ?
  • ಪಾದಯಾತ್ರೆ ಮಾಡಿ ಕೇದಾರನಾಥ ತಲುಪಿದ 70 ವರ್ಷದ ವೃದ್ಧ

70 ವರ್ಷದ ವೃದ್ಧರೊಬ್ಬರು ಕರ್ನಾಟಕದಿಂದ ಪಾದಯಾತ್ರೆ ಮೂಲಕವೇ ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಂದಾಕಿನಿ ನದಿಯ ದಂಡೆಯ ಮೇಲಿರುವ ಕೇದಾರನಾಥಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಭಕ್ತಿ ಅನ್ನೋದು ಬಹುದೊಡ್ಡ ಶಕ್ತಿ. ಭಗವಂತ ಮತ್ತು ಮನುಷ್ಯನ ನಡುವಿನ ನಂಬಿಕೆಯ ಸಂಬಂಧ. ಇದು ದೈವತ್ವವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ 70 ವರ್ಷದ ವೃದ್ಧರೊಬ್ಬರು ಕರ್ನಾಟಕದಿಂದ ನಿರಂತರವಾಗಿ 60 ದಿನಗಳ ಕಾಲ ಪಾದಯಾತ್ರೆ ಮಾಡಿ ಉತ್ತರಾಖಂಡದ ಮಂದಾಕಿನಿ ನದಿಯ ದಂಡೆಯ ಮೇಲಿರುವ ಕೇದಾರನಾಥ ದೇವಾಲಯವನ್ನು ತಲುಪಿದ್ದಾರೆ.

ಈ ವೃದ್ಧನ ಪಾದಯಾತ್ರೆಯ ಪ್ರಯಾಣವು ಕಲಬುರ್ಗಿಯಿಂದ ಆರಂಭವಾಯಿತು. ಹೀಗೆ ನಿರಂತರವಾಗಿ 60 ದಿನಗಳವರೆಗೆ ನಡೆದು.. ನಡೆದು ಶಿವನ ದೇವಾಲಯ ಇರುವ ಕೇದಾರನಾಥವನ್ನು ತಲುಪಿ ಸಂತಸ ಪಟ್ಟಿದ್ದಾರೆ. ಸುಮಾರು 2,200 ಕಿ.ಮೀ ಪಾದಯಾತ್ರೆ ನಡೆಸಿದ ಈ ತಂಡವು ಉತ್ತರಾಖಂಡದ ಕೇದಾರನಾಥ ಧಾಮಕ್ಕೆ ಬಂದು ಭೋಲೇನಾಥನ ದರ್ಶನ ಪಡೆದು ಧನ್ಯವಾಗಿದೆ. ಬಿರುಬೇಸಿಗೆ ಮಾರ್ಚ್​ನಲ್ಲಿ ಕಲಬುರಗಿಯಿಂದ ಆರಂಭವಾದ ಆಧ್ಯಾತ್ಮಿಕ ಪಾದಯಾತ್ರೆ, ಸಾಕಷ್ಟು ಸವಾಲಿನಿಂದ ಕೂಡಿತ್ತು. ಕಲಬುರಗಿಯ ಬಿಸಿಲು ಹೊದ್ದ ದಖ್ಖನ್​ ಪ್ರಸ್ತಭೂಮಿ, ಆ ಬಳಿಕ ಬಯಲು, ಕಾಡು, ಪರ್ವತಗಳ ಶ್ರೇಣಿಯಲ್ಲಿ ಪಾದಯಾತ್ರೆ ಮಾಡಿ ಗಮ್ಯ ಸ್ಥಳ ತಲುಪಿದೆ.

ಇದನ್ನೂ ಓದಿ: ಇತಿಹಾಸ ಬರೆದ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ.. ಪದಕಕ್ಕೆ ಮುತ್ತಿಕ್ಕಿದ ಲೆಫ್ಟಿನೆಂಟ್ ಕರ್ನಲ್

publive-image

ಇದೇ ಮೊದಲ ಬಾರಿಗೆ ಕರ್ನಾಟಕದಿಂದ ಕೇದಾರನಾಥಕ್ಕೆ ಭೇಟಿ ನೀಡಿದ್ದೇವೆ. ಮರ್ಚ್ 3 ರಂದು ಕಲಬುರಗಿಯಿಂದ ಪಾದಯಾತ್ರೆ ಆರಂಭವಾಯಿತು. ಮೇ 1ಕ್ಕೆ ಕೇದಾರನಾಥವನ್ನು ತಲುಪಿದ್ದೇವೆ. ಇನ್ನು ಜಾಸ್ತಿ ದಿನ ಆಗುತ್ತೆ ಎಂದುಕೊಂಡಿದ್ದೇವು. ಆದರೆ ಬೇಗನೇ ಪಾದಯಾತ್ರೆ ಮುಗಿದಿದೆ. ಪಾದಯಾತ್ರೆ ಮಾಡುವ ಪ್ರತಿ ಭಕ್ತನ ಮೇಲೂ ದೇವರ ಆಶೀರ್ವಾದ ಇದ್ದೇ ಇರುತ್ತದೆ ಎಂದು ವೈರಲ್ ಆದ ವಿಡಿಯೋದಲ್ಲಿ ಹೇಳಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment