/newsfirstlive-kannada/media/post_attachments/wp-content/uploads/2025/07/OLD_PEOPLE.jpg)
ದೇಶದ ಹಿರಿಯ ನಾಗರಿಕರಿಗೆ ಪ್ರಧಾನಿ ಮೋದಿ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಇನ್ಮುಂದೆ 70 ವರ್ಷ ಮೇಲ್ಮಟ್ಟ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಉಚಿತವಾಗಿ ಸಿಗಲಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲೇ ಕೇಂದ್ರ ಸರ್ಕಾರದ ಈ ನಿರ್ಧಾರ ಜಾರಿಯಾಗಲಿದೆ.
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಹೊಸ ನಿಯಮದ ಅನ್ವಯ ದೇಶದಲ್ಲಿ ಹಿರಿಯ ನಾಗರಿಕರಿಗೆ 5 ಲಕ್ಷದವರೆಗೂ ಉಚಿತ ಆರೋಗ್ಯ ಸೇವೆ ನೀಡಲಾಗುತ್ತದೆ. 70 ವರ್ಷ ಮೇಲ್ಮಟ್ಟ ಪ್ರತಿಯೊಬ್ಬರಿಗೂ ಈ ಯೋಜನೆ ಫಲಾನುಭವಿಗಳಾಗಲು ಅವಕಾಶ ನೀಡಲಾಗಿದೆ. ಇನ್ಮುಂದೆ ಹಿರಿಯ ನಾಗರಿಕರ ಆದಾಯ ಎಷ್ಟೇ ಇದ್ದರೂ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. 5 ಲಕ್ಷ ರೂಪಾಯಿವರೆಗಿನ ಉಚಿತ ಆರೋಗ್ಯ ವಿಮೆ ಪಡೆಯಲು ಹಿರಿಯ ನಾಗರಿಕರು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಕಾರ್ಡ್ ಹೊಂದಿರಬೇಕಷ್ಟೇ!.
ಈ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಏನಂದ್ರು?
ಇನ್ನು, ಈ ಬಗ್ಗೆ ಮಾತಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಇಡೀ ದೇಶಾದ್ಯಂತ ಆಯುಷ್ಮಾನ್ ಭಾರತ್ ಯೋಜನೆಯಿಂದ ಸದ್ಯ ನಾಲ್ಕೂವರೆ ಕೋಟಿ ಕುಟುಂಬಗಳು ಪ್ರಯೋಜನ ಪಡೆದುಕೊಳ್ಳುತ್ತಿವೆ. ಈ ಯೋಜನೆಯಲ್ಲಿ ಇನ್ಮುಂದೆ ಯಾವುದೇ ಆದಾಯ, ಸಾಮಾಜಿಕ ಸ್ಥಾನದ ಬೇಧವಿಲ್ಲದೆ ಎಲ್ಲಾ 70 ವರ್ಷ ಮೇಲ್ಪಟ್ಟ ನಾಗರಿಕರು ಆರೋಗ್ಯ ವಿಮೆ ಯೋಜನೆಗೆ ಅರ್ಹರಾಗುತ್ತಾರೆ ಎಂದಿದ್ದಾರೆ.
ಆಯುಷ್ಮಾನ್ ಯೋಜನೆಯಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಿಶಿಷ್ಟ ಗುರುತಿನ ಕಾರ್ಡ್ ನೀಡಲಾಗುತ್ತಿದೆ. ಆ ಕಾರ್ಡ್ ಬಳಸಿ ನಾಗರಿಕರು ವರ್ಷಕ್ಕೆ 5 ಲಕ್ಷದವರೆಗೂ ಆರೋಗ್ಯ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ.
ಏನಿದು ಆಯುಷ್ಮಾನ್ ಸ್ಕೀಮ್?
70 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನಗದು ರಹಿತ (Cashless) ಆಸ್ಪತ್ರೆ ಸೌಲಭ್ಯ ಕಲ್ಪಿಸೋ ಸ್ಕೀಮ್ ಆಯುಷ್ಮಾನ್. ಈ ಮೂಲಕ ಯಾವುದೇ ಹಣಕಾಸಿನ ಸಮಸ್ಯೆಯಿಲ್ಲದಂತೆ ಹಿರಿಯ ನಾಗರಿಕರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡೋದು ಇದರ ಉದ್ದೇಶ.
ಇದನ್ನೂ ಓದಿ:6 ಲಕ್ಷ ರೂಪಾಯಿ ಒಳಗೆ ಸಿಗೋ ಸೇಫ್ಟಿ ಏರ್ ಬ್ಯಾಗ್ಗಳನ್ನ ಒಳಗೊಂಡ ಬೆಸ್ಟ್ ಕಾರ್ಗಳು ಯಾವುವು?
ಆಯುಷ್ಮಾನ್ ಸ್ಕೀಮ್ ಸುಮಾರು 1,929 ವೈದ್ಯಕೀಯ ಕಾರ್ಯವಿಧಾನಗಳನ್ನು ಒಳಗೊಳ್ಳುತ್ತದೆ. ಮಿತಿ ಇಲ್ಲದ ಔಷಧಿಗಳು, ಸರಬರಾಜುಗಳು, ವೈದ್ಯರ ಶುಲ್ಕಗಳು, ಆಸ್ಪತ್ರೆ ಪೂರ್ವ ಮತ್ತು ನಂತರದ ರೋಗನಿರ್ಣಯ ಮತ್ತು ಔಷಧಿಗಳು ಇತ್ಯಾದಿ ಎಲ್ಲಾ ಚಿಕಿತ್ಸೆಯ ಶುಲ್ಕ ಒಳಗೊಂಡಿರುತ್ತದೆ.
ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಸುಮಾರು 35 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ. ಫಲಾನುಭವಿಗಳು ದಾಖಲಾದ ಮೊದಲ ದಿನದಿಂದ ಚಿಕಿತ್ಸೆ ದೊರೆಯಲು ಪ್ರಾರಂಭವಾಗುತ್ತದೆ. ಯಾವುದೇ ರೋಗ ಅಥವಾ ಚಿಕಿತ್ಸೆಗಾಗಿ ಕಾಯುವ ಅವಧಿ ಇರುವುದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ