ಮತ್ತೆ ಭುಗಿಲೆದ್ದ ಹಿಂಸಾಚಾರ, 72 ಸಾವು.. ಪ್ರಧಾನಿ ರಾಜೀನಾಮೆಗೆ ಆಗ್ರಹ; ಭಾರತೀಯರಿಗೆ ಹೇಳಿದ್ದೇನು?

author-image
Bheemappa
Updated On
ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಭಾರತವೇ ಗತಿ; ನಿಲ್ಲದ ಹಿಂಸಾಚಾರ.. ಬಾಂಗ್ಲಾದಲ್ಲಿ ಏನೆಲ್ಲ ಆಗೋಯ್ತು..
Advertisment
  • ಸಂಪರ್ಕದಲ್ಲಿ ಇರುವಂತೆ ಪ್ರಜೆಗಳಿಗೆ ತಿಳಿಸಿರುವ ಕೇಂದ್ರ ಸರ್ಕಾರ
  • ಆಡಳಿತ ಪಕ್ಷ ಹಾಗೂ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆ
  • ಪ್ರತಿಭಟನೆಯಲ್ಲಿ ಭಾರೀ ಸಾವು-ನೋವು.. 72 ಜನರು ಸಾವು

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಮತ್ತೆ ಹಿಂಸಾಚಾರಕ್ಕೆ ತಿರುಗಿದ್ದು ಸುಮಾರು 72 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಬಾಂಗ್ಲಾದಲ್ಲಿನ ಭಾರತೀಯರು ಎಚ್ಚರವಾಗಿರುವಂತೆ ಹಾಗೂ ಸದಾ ಸಂಪರ್ಕದಲ್ಲಿ ಇರುವಂತೆ ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ:ಅಯ್ಯೋ ದುರಂತ!.. 18 ಫ್ಯಾಮಿಲಿ ಕಾಪಾಡಿದ್ದ ರಿಯಲ್ ಹೀರೋ.. ಕಾರು ಸಮೇತ ಕಣ್ಮುಂದೆಯೇ ಕೊಚ್ಚಿ ಹೋದ

ಆಡಳಿತದಲ್ಲಿರುವ ಅವಾಮಿ ಲೀಗ್‌ ಪಕ್ಷದ ಬೆಂಬಲಿಗರು ಹಾಗೂ ಬಾಂಗ್ಲಾದ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರ ನಡುವೆ ಘರ್ಷಣೆ ಉಂಟಾಗಿದೆ. ಈ ವೇಳೆ ಸಂಘರ್ಷದಲ್ಲಿ 72 ಜನರು ಮೃತಪಟ್ಟಿದ್ದಾರೆ. ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಿಂಸಾಚಾರ ಹೆಚ್ಚಾದ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಜಿಮ್​ ವಸ್ತುಗಳ ಸೇಲ್ಸ್​ಮ್ಯಾನ್​ ಮೃತದೇಹ ಪತ್ತೆ.. ಪ್ರಕರಣ ಬೆನ್ನ ಹತ್ತಿದ್ದ ಪೊಲೀಸರಿಗೆ ಶಾಕ್​ ಮೇಲೆ ಶಾಕ್​!

publive-image

ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಸಹಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಬಂದಿದ್ದರು. ಆದರೆ ಈ ಪ್ರತಿಭಟನೆಯನ್ನು ಅವಾಮಿ ಲೀಗ್, ಛಾತ್ರ ಲೀಗ್ ಮತ್ತು ಜುಬೋ ಲೀಗ್‌ನ ಕಾರ್ಯಕರ್ತರು ವಿರೋಧ ಮಾಡಿದ್ದಾರೆ. ಇದೇ ವೇಳೆ ಎರಡು ಕಡೆಯಿಂದ ಘರ್ಷಣೆ ಉಂಟಾಗಿ ಸಾವು, ನೋವುಗಳು ಸಂಭವಿಸಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Olympics; ಗ್ರೇಟ್​ ಬ್ರಿಟನ್​ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು.. ಸೆಮಿಸ್​​ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ

ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳು ಬಾಂಗ್ಲಾದೇಶದಲ್ಲಿನ ಭಾರತೀಯ ಹೈಕಮಿಷನ್ ಕಚೇರಿಯ ಸಂಪರ್ಕದಲ್ಲಿರುವಂತೆ ಸೂಚನೆ ನೀಡಲಾಗಿದೆ. ಹಿಂಸಾಚಾರ ನಡೆಯುತ್ತಿರುವ ಹಿನ್ನೆಲೆ ಎಚ್ಚರಿಕೆಯಿಂದ ಇರುವಂತೆಯೂ ತಿಳಿಸಲಾಗಿದೆ. ತುರ್ತು ಸಂದರ್ಭದಲ್ಲಿ +88-01313076402 ನಂಬರ್​ಗೆ ಕಾಲ್​ ಮಾಡುವಂತೆ ತನ್ನ ಎಕ್ಸ್​ ಅಕೌಂಟ್​ನಲ್ಲಿ ಹೈ ಕಮಿಷನ್ ಕಚೇರಿ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment