newsfirstkannada.com

ವಿಜಯಲಕ್ಷ್ಮಿ, ಪವಿತ್ರಾ ಗೌಡ ಜಟಾಪಟಿ: ಕೆ.ಎಸ್ ಪುಟ್ಟಣ್ಣಯ್ಯ ಜನ್ಮದಿನದ ಕಾರ್ಯಕ್ರಮದಲ್ಲಿ ನಟ ದರ್ಶನ್!​​

Share :

Published January 26, 2024 at 7:12pm

  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ಯಕ್ರಮಕ್ಕೆ ಆಗಮನ

  ನಟ ದರ್ಶನ್​ಗೆ ಸಾಥ್​ ಕೊಟ್ಟ ಧನ್ವೀರ್, ವಿನೋದ್ ಪ್ರಭಾಕರ್

  ನಟ ದರ್ಶನ್ ಕಂಡು ‘ಡಿ ಬಾಸ್’ ಎಂದು ಕೂಗುತ್ತಿರೋ ಫ್ಯಾನ್ಸ್​

ಮಂಡ್ಯ: ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ 75ನೇ ಜನ್ಮ ದಿನೋತ್ಸವ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದಾರೆ. ಪಾಂಡವಪುರ ತಾಲೂಕು ಕಚೇರಿಯಿಂದ ಪಾಂಡವ ಕ್ರೀಡಾಂಗಣದವರೆಗೆ ಮೆರವಣಿಗೆ ಸಾಗಿತ್ತು.

ಈ ವೇಳೆ ರೈತರ ಬಗೆಗಿನ ಕಾಟೇರ ಸಿನಿಮಾ ಸಕ್ಸಸ್ ಹಿನ್ನಲೆಯಲ್ಲಿ ಚಿತ್ರ ತಂಡಕ್ಕೆ ಸನ್ಮಾನ ಮಾಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರು ಅದ್ಧೂರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಈ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ಮೂಲಕ ಭರ್ಜರಿ ಪ್ರದರ್ಶನ ನೀಡಿದ್ದರು.

ನಟ ದರ್ಶನ್​ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಟ ಧನ್ವೀರ್, ವಿನೋದ್ ಪ್ರಭಾಕರ್, ಯಶಸ್ಸ್ ಸೂರ್ಯ ಸಾಥ್ ನೀಡಿದ್ದರು. ಇನ್ನೂ, ಪತ್ನಿ ವಿಜಯಲಕ್ಷ್ಮಿ‌ ಹಾಗೂ ಪವಿತ್ರ ಗೌಡ ಜಟಾಪಟಿ ನಡುವೆ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗಿಯಾಗಿದ್ದಾರೆ.  ಮೆರವಣಿಗೆ ವೇಳೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ರೈತಸಂಘದಿಂದ ಬೃಹತ್ ಸಪೋಟಾ ಹಾರ ಸಮರ್ಪಣೆ ಮಾಡಲಾಯಿತು. ರೋಡ್ ಶೋ ಉದ್ದಕ್ಕೂ ಡಿ ಬಾಸ್.. ಡಿ ಬಾಸ್ ಎಂದು ಅಭಿಮಾನಿಗಳು ಜೈಕಾರ ಹಾಕುತ್ತಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಜಯಲಕ್ಷ್ಮಿ, ಪವಿತ್ರಾ ಗೌಡ ಜಟಾಪಟಿ: ಕೆ.ಎಸ್ ಪುಟ್ಟಣ್ಣಯ್ಯ ಜನ್ಮದಿನದ ಕಾರ್ಯಕ್ರಮದಲ್ಲಿ ನಟ ದರ್ಶನ್!​​

https://newsfirstlive.com/wp-content/uploads/2024/01/dboss-23.jpg

Load More