newsfirstkannada.com

ನಾಳೆ ಶ್ರೀಗಳ 75ನೇ ವರ್ಷದ ಅಮೃತ ಮಹೋತ್ಸವ.. ಭಾವೈಕ್ಯತಾ ಸಂಸ್ಥಾನ ಮಹಾಪೀಠದಲ್ಲಿ ಸಂಭ್ರಮವೋ ಸಂಭ್ರಮ

Share :

Published January 31, 2024 at 6:34am

Update January 31, 2024 at 6:35am

    ಜಗದ್ಗುರು ಫಕೀರೇಶ್ವರರು ಸ್ಥಾಪಿಸಿರುವ ಮಹಾಪೀಠ

    500 ವರ್ಷಗಳ ಇತಿಹಾಸ ಹೊಂದಿರುವ ಭಾವೈಕ್ಯತಾ ಸಂಸ್ಥಾನ

    ಮಠದ ಆನೆ ಚಂಪಿಕಾಗೂ 60 ವರ್ಷ ತುಂಬಿರೊ ಸಂಭ್ರಮ

ಗದಗ: ಅದು 500 ವರ್ಷಗಳ ಇತಿಹಾಸ ಹೊಂದಿರುವ ವಿಶಿಷ್ಠ ಸಂಪ್ರದಾಯದ ಭಾವೈಕ್ಯತಾ ಸಂಸ್ಥಾನ ಮಹಾಪೀಠ. ಹಿಂದೂ-ಮುಸ್ಲಿಂಮರು ಒಟ್ಟೊಟ್ಟಿಗೆ ಪೂಜಿಸುವ ಅಪರೂಪದ ಸಂಪ್ರದಾಯಗಳನ್ನು ಹೊಂದಿರುವ ಅಜ್ಜನ ಮಹಾಪೀಠ. ಫಕೀರಸ್ವಾಮೀಗಳ 13ನೇ ಪೀಠಾಧಿಪತಿ ಶ್ರೀ ಸಿದ್ಧರಾಮೇಶ್ವರ ಫಕೀರಸ್ವಾಮೀಗಳ 75ನೇ ವರ್ಷದ ಅಮೃತ ಮಹೋತ್ಸವ. ಇದು ಅಜ್ಜನ ಭಕ್ತರಿಗೆ ಅಮೃತ ಗಳಿಗೆ.

ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ಐತಿಹಾಸಿಕ ಫಕೀರೇಶ್ವರ ಮಠ ದೇಶದ ಸೌಹಾರ್ದ ಪರಂಪರೆಯ ಇತಿಹಾಸದಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತದೆ. ಹಿಂದೂ-ಮುಸ್ಲಿಂರ ಭಾವೈಕ್ಯತೆಯನ್ನ ಇಡೀ ಜಗತ್ತಿಗೆ ಪರಿಚಯಿಸಿದೆ ಈ ಭಾವೈಕ್ಯತಾ ಮಹಾಪೀಠದಲ್ಲೀಗ ಅಮೃತ ಮಹೋತ್ಸವದ ಸಂಭ್ರಮ ಸಡಗರ ಮನೆ ಮಾಡಿದೆ.

ಭಾವೈಕ್ಯತೆ ಮಠದಲ್ಲೀಗ 13ನೇ ಪೀಠಾಧಿಪತಿಗಳಾಗಿರೋ ಸಿದ್ಧರಾಮೇಶ್ವರ ಶ್ರೀಗಳ 75ನೇ ವರ್ಷದ ಅಮೃತ ಮಹೋತ್ಸವವನ್ನ ಆಚರಣೆ ಮಾಡಲಾಗ್ತಿದೆ. ನಾಳೆ ಹುಬ್ಬಳ್ಳಿಯ ನಾಣ್ಯಗಳು ನೆಹರು ಮೈದಾನದಲ್ಲಿ ಅಮೃತ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಇದೇ ವೇಳೆ ಶ್ರೀಗಳ ತುಲಾಭಾರ ಕಾರ್ಯವೂ ನಡೆಯಲಿದೆ. ಇದಕ್ಕಾಗಿ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಮೃತ ಮಹೋತ್ಸವದಲ್ಲಿ ಶ್ರೀಗಳಿಗೆ 10 ರೂಪಾಯಿ ಮುಖ ಬೆಲೆಯ ಒಟ್ಟು 5 ಸಾವಿರದ 555 ಕೆಜಿ ನಾಣ್ಯಗಳ ಜೊತೆ ಆನೆ ಅಂಬಾರಿ ಸಹಿತ ಶ್ರೀಗಳ ತುಲಾಭಾರ ನಡೆಯಲಿದೆ. ಇದಕ್ಕಾಗಿ ಬೃಹತ್​ ತಕ್ಕಡಿ ಸಿದ್ಧಗೊಂಡಿದೆ.

ಇನ್ನು ಮಠದ ಆನೆ ಚಂಪಿಕಾಗೂ 60 ವರ್ಷ ತುಂಬಿರೋದ್ರಿಂದ ಸಂಭ್ರಮ ಇಮ್ಮಡಿಗೊಂಡಿದೆ. ಇದೇ ಚಂಪಿಕಾ ಆನೆ ಮೇಲೆ ಕೂತು ಶ್ರೀಗಳು ತುಲಾಭಾರ ಮಾಡಿಸಿಕೊಳ್ಳಲಿದ್ದಾರೆ. ಅಮೃತ ಮಹೋತ್ಸವದ ಪ್ರಯುಕ್ತ ಭಾವೈಕ್ಯತೆಯ ರಥಯಾತ್ರೆ ಹುಬ್ಬಳ್ಳಿಯಿಂದಲೇ ಪ್ರಾರಂಭವಾಗಿ. ರಾಜ್ಯದ 8 ಜಿಲ್ಲೆಗಳಲ್ಲಿ ಪರ್ಯಟನೆ ಮಾಡುವ ಮೂಲ ಭಾವೈತ್ಯತೆ ಸಾರಲಿದೆ.

ಇನ್ನು ಅಮೃತ ಮಹೋತ್ಸವ ಆರಂಭಕ್ಕೂ ಮುನ್ನ ಮೂರು ಸಾವಿರ ಮಠದಿಂದ ಬೃಹತ್​ ಆನೆ ಅಂಬಾರಿ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ 5 ಆನೆ, 5 ಕುದುರೆ, 2 ಒಂಟೆ 15ಕ್ಕೂ ಕಲಾತಂಡಗಳು ಭಾಗಿಯಾಗಲಿವೆ. ಒಟ್ಟಾರೆ ಶಿರಹಟ್ಟಿ ಪಕೀರೇಶ್ವರ ಮಠದಲ್ಲೀಗ ಅಮೃತ ಮಹೋತ್ಸವದ ಸಂಭ್ರಮ ಮನೆ ಮಾಡಿದ್ದು, ಶ್ರೀಗಳ ತುಲಾಬಾರ ಕಣ್ತುಂಬಿಕೊಳ್ಳಲು ಮಠದ ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆ ಶ್ರೀಗಳ 75ನೇ ವರ್ಷದ ಅಮೃತ ಮಹೋತ್ಸವ.. ಭಾವೈಕ್ಯತಾ ಸಂಸ್ಥಾನ ಮಹಾಪೀಠದಲ್ಲಿ ಸಂಭ್ರಮವೋ ಸಂಭ್ರಮ

https://newsfirstlive.com/wp-content/uploads/2024/01/darwad-1-1.jpg

Load More