Advertisment

ರಾಜ್ಯಾದ್ಯಂತ 76ನೇ ಗಣರಾಜ್ಯೋತ್ಸವ ಸಂಭ್ರಮ; ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ ಗೆಹ್ಲೋಟ್​​

author-image
Gopal Kulkarni
Updated On
ರಾಜ್ಯಾದ್ಯಂತ 76ನೇ ಗಣರಾಜ್ಯೋತ್ಸವ ಸಂಭ್ರಮ; ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ ಗೆಹ್ಲೋಟ್​​
Advertisment
  • ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮ
  • ಧ್ವಜಾರೋಹಣ ಮಾಡಿದ ರಾಜ್ಯಪಾಲ ಥಾವರ್ ಚೆಂದ್​ ಗೆಹ್ಲೋಟ್​​
  • ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಜ್ಜಾಗಿರುವ ಒಂದೂವರೆ ಸಾವಿರ ಮಕ್ಕಳು

ಇಡೀ ದೇಶದಲ್ಲಿ ಈಗ 76ನೇ ಗಣರಾಜ್ಯೋತ್ಸವ ಸಂಭ್ರಮ ಕಳೆಗಟ್ಟಿದೆ. ಎಲ್ಲೆಲ್ಲೂ ತ್ರಿವರ್ಣ ಧ್ವಜಗಳ ಹಾರಾಟ ನಡೆದಿದೆ. ರಾಜ್ಯದಲ್ಲಿಯೂ ಗಣರಾಜ್ಯೋತ್ಸವ ಸಂಭ್ರಮ ಅದ್ಧೂರಿಯಾಗಿ ನೇರವೇರಿಸಲಾಗಿದೆ. ರಾಜ್ಯಪಾಲ ಥಾವರ್​ ಚೆಂದ್​ ಗೆಹ್ಲೋಟ್ ಧ್ವಜಾರೋಹಣ ಮಾಡುವ ಮೂಲಕ ಗೌರವ ವಂದನೆಯನ್ನು ಸ್ವೀಕರಿಸಿದರು. ಮಾಣಿಕ್ ಷಾ ಪರೇಡ್​​ ಮೈದಾನದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

Advertisment

ಪೊಲೀಸರು, ಸ್ಕೌಟ್ಸ್ ಮತ್ತು ಗೈಡ್ಸ್​, ಎನ್​​ಸಿಸಿ, ಸೇವಾ ದಳ ಹಾಗೂ ವಿವಿಧ ಶಾಲೆಯ ಮಕ್ಕಳಿಂದ ಪಥ ಸಂಚಲನ ನಡೆಯಿತು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಕವಾಯತು ಮತ್ತು ಬ್ಯಾಂಡ್​ ಗಮನ ಸೆಳೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುಕೊಡಲು ಒಂದೂವರೆ ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ನೆರೆದಿದ್ದರು.

ಇದನ್ನೂ ಓದಿ:ಕರ್ನಾಟಕ ವೀರನನ್ನು ತಮಿಳಿಗನನ್ನಾಗಿ ತೋರಿಸಿತಾ ಅಕ್ಷಯ್ ಕುಮಾರ್ ಚಿತ್ರ; ಕೆರಳಿ ಕೆಂಡವಾಗಿದ್ದೇಕೆ ಕೊಡವ ಸಮುದಾಯ?

ಮಾಣಿಕ್​ ಷಾ ಪರೇಡ್ ಮೈದಾನದಲ್ಲಿ ಬೆಂಗಳೂರು ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸರು ಮುಂಜಾಗ್ರತೆವಹಿಸಿದ್ದರು. ಗಣರಾಜ್ಯೋತ್ಸವದ ಅಂಗವಾಗಿ ಭದ್ರತೆಗೆ ಒಟ್ಟು 8 ಡಿಎಸ್​ಪಿ. 17 ಮಂದಿ ಎಸಿಪಿ, 44 ಪಿಐ ಸೇರಿ ಒಟ್ಟು 1051 ಪೊಲೀಸರ ನಿಯೋಜನೆ ಮಾಡಲಾಗಿತ್ತು. ಜೊತೆಗೆ 114 ಪಿಎಸ್​ಐ, 58 ಎಎಸ್​ಐ, 80 ಸಿಬ್ಬಂದಿ, 30 ಕ್ಯಾಮರಾ ಸಿಬ್ಬಂದಿಗಳು ಹಾಜರಿದ್ದರು.

Advertisment

ಇನ್ನು ಬಂದೋಬಸ್ತ್​ಗೆ 10 ಕೆಎಸ್​ಆರ್​​ಪಿ ತುಕಡಿ, 2 ಅಗ್ನಿಶಾಮಕ ವಾಹನ, ಕ್ಷಿಪ್ರ ಕಾರ್ಯಾಚರಣೆ ತಂಡ ಮತ್ತು ಮೈದಾನದ ಸುತ್ತ ಒಟ್ಟು 103 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಕಲರ್ ಕೋಡ್​ಗಳ ಮೂಲಕ ಪಾಸ್ ವಿತರಿಸಿ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಪಿಂಕ್​​ ಬಣ್ಣದ ಪಾಸ್​ ನೀಡಲಾಗಿತ್ತು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment