ಹಿರಿಯರೊಬ್ಬರಿಗೆ ಏಷ್ಯಾದಲ್ಲೇ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆ
ಹೈ-ರಿಸ್ಕ್ ಬೈಲಟೇರಿಯಲ್ ಲಂಗ್ ಟ್ರಾನ್ಸ್ಪ್ಲಾಂಟ್ ಅಂದರೆ ಏನು?
ಬ್ರೈನ್ ಡೆಡ್ ಆಗಿದ್ದ ವ್ಯಕ್ತಿಯ ಶ್ವಾಸಕೋಶ ತೆಗೆದು ಕಸಿ
ತಮಿಳುನಾಡಿನ ಚೆನ್ನೈನ ಎಂಜಿಎಂ ಆಸ್ಪತ್ರೆಯು ಇಂದು ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ. 78 ವರ್ಷದ ವೃದ್ಧರೊಬ್ಬರಿಗೆ ಶ್ವಾಸಕೋಶದ ಕಸಿಯನ್ನು ಯಶಸ್ವಿಯಾಗಿ ನಡೆಸಿದ್ದು, ಇದು ಏಷ್ಯಾದಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಮಾಡಿದ ಯಶಸ್ವಿ ಬೈಲಟೇರಿಯಲ್ ಲಂಗ್ ಟ್ರಾನ್ಸ್ಪ್ಲಾಂಟ್ ಆಗಿದೆ.
ಡಾ.ಕೆ.ಆರ್.ಬಾಲಕೃಷ್ಣನ್, ಡಾ.ಸುರೇಶ್ ರಾವ್ ಕೆ.ಜಿ.ನೇತೃತ್ವದಲ್ಲಿ ಶ್ವಾಸಕೋಶ ಕಸಿ ನಡೆದಿತ್ತು. ವೃದ್ಧನ ಎರಡೂ ಶ್ವಾಸಕೋಶಗಳು ಡ್ಯಾಮೇಜ್ ಆಗಿದ್ದವು. ಬೆಂಗಳೂರು ನಿವಾಸಿಯಾಗಿದ್ದ ವೃದ್ಧ, ಎಆರ್ಡಿಎಸ್ (acute respiratory distress syndrome) ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಜೊತೆಗೆ ನ್ಯೂಮೋನಿಯಾ ಕೂಡ ಕಾಡ್ತಿತ್ತು. ತಪಾಸಣೆಗೆ ಒಳಪಡಿಸಿದ ವೈದ್ಯರಿಗೆ, ಶ್ವಾಸಕೋಶ ಕಂಪ್ಲೀಟ್ ಹಾಳಾಗಿರೋದು ಗೊತ್ತಾಗುತ್ತದೆ.
ಹೀಗಾಗಿ ವೈದ್ಯರು ವೃದ್ಧನಿಗೆ ಶ್ವಾಸಕೋಶ ಟ್ರಾನ್ಸ್ಪ್ಲಾಂಟ್ ಮಾಡಲು ಕಾಯುತ್ತಿರುತ್ತಾರೆ. ಸುಮಾರು 15 ದಿನಗಳ ಕಾಲ ವೆಂಟಿಲೆಟರ್ನಲ್ಲಿ ಈ ವೃದ್ಧನನ್ನು ಇಟ್ಟುಕೊಂಡಿರುತ್ತಾರೆ. ಹೊತ್ತಿಗೆ ಬ್ರೈನ್ ಡೆಡ್ ಆಗಿದ್ದ ವ್ಯಕ್ತಿಯೊಬ್ಬರು ತಮ್ಮ ಅಂಗಾಂಗಗಳನ್ನು ದಾನ ಮಾಡಲು ಮುಂದಾಗುತ್ತಾರೆ. ಇವರ ಎರಡೂ ಶ್ವಾಸಕೋಶಗಳನ್ನು ವೃದ್ಧನಿಗೆ ಕಸಿ ಮಾಡಿದ್ದಾರೆ. ಈ ವೈದ್ಯರ ಈ ಪ್ರಯೋಗ ಯಶಸ್ವಿಯಾಗಿದೆ.
ಬೈಲಟೇರಿಯಲ್ ಲಂಗ್ ಟ್ರಾನ್ಸ್ಪ್ಲಾಂಟ್ ಅಂದರೆ ಏನು..?
ಬೈಲಟೇರಿಯಲ್ ಲಂಗ್ ಟ್ರಾನ್ಸ್ಪ್ಲಾಂಟ್ ಅಂದರೆ, ಶ್ವಾಸಕೋಶಗಳಿಗೆ ಸರ್ಜರಿ ಮಾಡುವ ಒಂದು ಟೆಕ್ನಿಕ್ ಆಗಿದೆ. ಇಲ್ಲಿ ಎರಡೂ ಶ್ವಾಸಕೋಶಗಳನ್ನು ತೆಗೆದು, ದಾನ ಮಾಡಿದ ವ್ಯಕ್ತಿಯ ಲಂಗ್ಸ್ ಅಳವಡಿಸಲಾಗುತ್ತದೆ. ಇದೊಂದು ಹೈರಿಸ್ಕ್ ಕೇಸ್ ಆಗಿರುತ್ತದೆ.
ರೋಗಿಯ ಕಂಡೀಷನ್ ಮತ್ತು ಅವರ ವಯಸ್ಸು ನಮ್ಮ ಸರ್ಜರಿಗೆ ನಿಜಕ್ಕೂ ಸವಾಲ್ ಆಗಿತ್ತು. ಶ್ವಾಸಕೋಶ ದಾನಿಗಳು ಸಿಗುತ್ತಿದ್ದಂತೆಯೇ ನಾವು ಕಾರ್ಯಪ್ರವೃತ್ತರಾದೇವು. ನಮ್ಮ ವೈದ್ಯಕೀಯ ತಂಡಕ್ಕೆ ಸಲಾಂ ಹೇಳ್ತೀನಿ. ಸರ್ಜರಿಗೆ ಒಳಗಾಗಿರುವ ವೃದ್ಧ ಇನ್ನೇನು ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಡಾ.ಕೆಆರ್.ಬಾಲಕೃಷ್ಣನ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ