/newsfirstlive-kannada/media/post_attachments/wp-content/uploads/2025/01/bizarre-taxes.jpg)
ಭಾರತದಲ್ಲಿ ಸದ್ಯ 2025-26ರ ಬಜೆಟ್ನ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಮಧ್ಯಮ ವರ್ಗದವರಿಗೆ ಈ ಬಾರಿ ಏನೆಲ್ಲಾ ರಿಲೀಫ್ ಸಿಗಲಿದೆ ಎಂದು ಜನರು ಕಾಯುತ್ತಿದ್ದಾರೆ. ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ ಮೂರನೇ ಅವಧಿ ಸರ್ಕಾರದ ಎರಡನೇ ಪೂರ್ಣ ಪ್ರಮಾಣದ ಬಜೆಟ್ನ್ನು ಮಂಡಿಸಲಿದ್ದಾರೆ. ಇದರ ನಡುವೆ ಅಮೆರಿಕಾದಲ್ಲಿ ಬಂದ ಹೊಸ ಸರ್ಕಾರ ತನ್ನ ತೆರಿಗೆ ನೀತಿಯನ್ನು ಬದಲಾಯಿಸಲು ನಿಂತಿದೆ. ಇದೆಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಸಮಗ್ರ ಬಜೆಟ್ ಮಂಡಿಸಬೇಕಾದ ಅನಿವಾರ್ಯತೆಯಲ್ಲಿ ನಿರ್ಮಲಾ ಸೀತಾರಾಮನ್ ಇದ್ದಾರೆ. ಇತ್ತೀಚೆಗೆ ನಿರ್ಮಲಾ ಸೀತಾರಾಮನ್ ಅವರು ವಿಧಿಸುತ್ತಿರುವ ಜಿಎಸ್ಟಿ ವಿಚಾರವಾಗಿ ಅನೇಕ ರೀಲ್ಸ್ಗಳು ಮಿಮ್ಸ್ಗಳನ್ನು ಮಾಡುತ್ತಿದ್ದಾರೆ. ಆದ್ರೆ ಒಂದು ಗೊತ್ತಾ ನೂರಾರು ವರ್ಷಗಳ ಹಿಂದೆ ಈ ಜಗತ್ತು ಯಾವುದಕ್ಕೆಲ್ಲಾ ಟ್ಯಾಕ್ಸ್ ಕಟ್ಟಿದೆ ಅಂತ, ಗಡ್ಡ ಬಿಡೋದ್ರಿಂದ ಹಿಡಿದು, ಮೂತ್ರ ಮಾಡುವ ವಿಚಾರಕ್ಕೂ ಕೂಡ ಟ್ಯಾಕ್ಸ್ ಕಟ್ಟಿದೆ. ಅಚ್ಚರಿಯಾದ್ರೂ ಕೂಡ ಇದು ನಿಜ. ಅಂತಹ ವಿಚಿತ್ರ 8 ಟ್ಯಾಕ್ಸ್ಗಳನ್ನು ನಾವು ನಿಮಗೆ ವಿವರಿಸುತ್ತೇವೆ.
1. ಮನೆಯ ಕಿಟಕಿಯ ಮೇಲೆ ಟ್ಯಾಕ್ಸ್:
ವಿಚಿತ್ರ ಅನಿಸಿದರೂ ಕೂಡ ಇದು ನಿಜ. 1696ರಲ್ಲಿ ಇಂಗ್ಲೆಂಡ್ನ 3ನೇ ಕಿಂಗ್ ವಿಲಿಯಂ ಕಿಟಕಿಯ ಮೇಲೆ ತೆರಿಗೆಯನ್ನು ವಿಧಿಸಿದ್ದರು. ಜನರು ತಮ್ಮ ಮನೆಗೆ ಎಷ್ಟು ಕಿಟಕಿಗಳನ್ನು ಹೊಂದಿರುತ್ತಾರೋ ಅಷ್ಟು ಕಿಟಕಿಗಳಿಗೆ ಟ್ಯಾಕ್ಸ್ ಕಟ್ಟಬೇಕಿತ್ತು. ಅಂದಿನ ಮೂರನೇ ವಿಲಿಯಮ್ಸ್ ರಾಜನ ಖಜಾನೆ ಖಾಲಿಯಾಗಿತ್ತು. ಅದಕ್ಕಾಗಿ ಸಾಧ್ಯವಾದಷ್ಟು ಎಲ್ಲ ಕಡೆಯಿಂದಲೂ ಟ್ಯಾಕ್ಸ್ ವಸೂಲಿಗೆ ಇಳಿದಿದ್ದ. ಯಾವ ಮನೆಗೆ 10ಕ್ಕಿಂತ ಹೆಚ್ಚು ಕಿಟಕಿಗಳಿವೆ ಅವರು 10 ಶಿಲ್ಲಿಂಗ್ ಟ್ಯಾಕ್ಸ್ ಕಟ್ಟಬೇಕಿತ್ತು. ಹೀಗಾಗಿ ಜನರು ಟ್ಯಾಕ್ಸ್ನಿಂದ ತಪ್ಪಿಸಿಕೊಳ್ಳಲು ಮನೆಯ ಕಿಟಕಿಗಳನ್ನು ಇಟ್ಟಿಗೆಗಳನ್ನು ಏರಿಸಿ ಸಂಪೂರ್ಣವಾಗಿ ಮುಚ್ಚಿ ಹಾಕಿದರು ಮುಂದೆ ಅಂದ್ರೆ 1851ರಲ್ಲಿ ಈ ತೆರಿಗೆಯನ್ನು ತೆಗೆದು ಹಾಕಲಾಯ್ತು.
2. ಗಡ್ಡದ ಮೇಲೆ ಟ್ಯಾಕ್ಸ್ ಭೂತ:
1535ರಲ್ಲಿ ಇಂಗ್ಲೆಂಡ್ ರಾಜ 8ನೇ ಹೆನ್ರಿ ಮೊದಲ ಬಾರಿ ದೇಶದಲ್ಲಿ ಗಡ್ಡದ ಮೇಲೆ ತೆರಿಗೆಯನ್ನು ಹೇರಿದ. ಯಾರು ಎರಡು ವಾರಕ್ಕಿಂತ ಹೆಚ್ಚು ಗಡ್ಡ ಯಾರು ಬಿಡುತ್ತಾರೋ ಅವರು ಟ್ಯಾಕ್ಸ್ ಕಟ್ಟಬೇಕಿತ್ತು. ಒಂದು ವೇಳೆ ಟ್ಯಾಕ್ಸ್ ವಸೂಲಿಗೆ ಬಂದಾಗ ಆ ವ್ಯಕ್ತಿ ಮನೆಯಲ್ಲಿ ಇರದೇ ಇದ್ದಲ್ಲಿ ಪಕ್ಕದ ಮನೆಯವರು ಆ ತೆರಿಗೆಯನ್ನು ಕಟ್ಟಬೇಕಿತ್ತು. 1698ರಲ್ಲಿ ರಷ್ಯಾದಲ್ಲಿಯೂ ಕೂಡ ಈ ಗಡ್ಡದ ಟ್ಯಾಕ್ಸ್ ಭೂತ ಸೃಷ್ಟಿಯಾಗಿತ್ತು. ಗಡ್ಡ ಬೆಳೆಸಿದವರೆಲ್ಲಾ ತೆರಿಗೆ ಕಟ್ಟಬೇಕು ಎಂದು ತ್ಸಾರ್ ಪೀಟರ್ ಆಜ್ಞೆ ಹೊರಡಿಸಿದ್ದ.
3 ಆತ್ಮಗಳ ಮೇಲೆಯೂ ತೆರಿಗೆ
ರಷ್ಯಾದ ರಾಜ ಪೀಟರ್ ದಿ ಗ್ರೇಟ್ ಕೂಡ 1718ರಲ್ಲಿ ಒಂದು ವಿಚಿತ್ರ ತೆರಿಗೆ ಪದ್ಧತಿಯನ್ನು ದೇಶದಲ್ಲಿ ಜಾರಿಗೆ ತಂದಿದ್ದ. ಯಾರು ಆತ್ಮ, ದೆವ್ವ, ಭೂತಗಳನ್ನು ನಂಬುತ್ತಾರೋ, ಅವುಗಳ ಪೂಜೆ ಮಾಡುತ್ತಾರೋ ಅವರು ದೇಶಕ್ಕೆ ತೆರಿಗೆ ಕಟ್ಟಬೇಕಿತ್ತು. ಒಂದು ವೇಳೆ ನಂಬದವರು ಕೂಡ ಧರ್ಮದ ಮೇಲೆ ನಂಬಿಕೆಯಿಲ್ಲದ ಆರೋಪದ ಮೇಲೆಯೂ ಟ್ಯಾಕ್ಸ್ ಕಟ್ಟಬೇಕಿತ್ತು. ಚರ್ಚ್ ಮತ್ತು ಶ್ರೀಮಂತರನ್ನು ಬಿಟ್ಟು ಉಳಿದ ಎಲ್ಲರಿಂದಲೂ ಈ ತೆರಿಗೆ ವಸೂಲಿ ಮಡಲಾಗುತ್ತಿತ್ತು. ಇದು ಕೂಡ ಗಡ್ಡದ ತೆರಿಗೆಯ ರೀತಿ ತೆರಿಗೆ ಕಟ್ಟಬೇಕಾದವರು ಮನೆಯಲ್ಲಿ ಇಲ್ಲದೇ ಇದ್ದಿದ್ದರೆ ಪಕ್ಕದ ಮನೆಯವರು ತೆರಿಗೆ ಕಟ್ಟಬೇಕಿತ್ತು.
4. ಎದೆಭಾರಕ್ಕೂ (ಸ್ತನ) ಕಟ್ಟಬೇಕಿತ್ತು ತೆರಿಗೆ
19ನೇ ಶತಮಾನದಲ್ಲಿ ಕೇರಳಾದ ತಿರುವಾಂಕೂರು ರಾಜ ಕೆಳಗಿನ ಜಾತಿಯವರೆಂದು ಗುರುತಿಸಲಾದ ಇಝವಾಮ ಥೀಯ್ಯಾ, ನದಾರ್, ಮತ್ತು ದಲಿತ ಸಮುದಾಯಗಳು ತಮ್ಮ ಸ್ತನಗಳನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕಾದರೂ ಟ್ಯಾಕ್ಸ್ ಕಟ್ಟಬೇಕಿತ್ತು. ಒಂದು ವೇಳೆ ತೆರಿಗೆ ಕಟ್ಟದೇ ಇದ್ದರೆ ಈ ಸಮುದಾಯದ ಮಹಿಳೆಯರಿಗೆ ತಮ್ಮ ತಮ್ಮ ಎದೆಯ ಮುಂಭಾರಕ್ಕೆ ಬಟ್ಟೆಯನ್ನು ಕಟ್ಟಿ ಮುಚ್ಚಿಕೊಳ್ಳುವಂತಿರಲಿಲ್ಲ. ಕೊನೆಗೆ ಈ ತೆರಿಗೆ ಪದ್ಧತಿಯನ್ನು ಗಟ್ಟಿಗಿತ್ತಿ ನಂಗೇಲಿ ಎಂಬ ಮಹಿಳೆಯ ಹೋರಾಟದಿಂದ ಕೊನೆಗೊಳಿಸಲಾಯ್ತು. ದಿಟ್ಟ ಮಹಿಳೆ ನಂಗೇಲಿ ಈ ತೆರಿಗೆ ಪದ್ಧತಿ ವಿರುದ್ಧ ಸಿಡಿದೆದ್ದು ನಿಂತಳು. ಅದಕ್ಕಾಗಿ ಅವಳ ಸ್ತನಗಳನ್ನೇ ಕತ್ತರಿಸಲಾಯ್ತು ಎಂದು ಇತಿಹಾಸ ಹೇಳುತ್ತದೆ. ಅವಳ ಆತ್ಮಾಹುತಿಯ ನಂತರ ದೊಡ್ಡ ಮಟ್ಟದ ಹೋರಾಟ ಉಂಟಾಗಿ ಕೊನೆಗೆ ರಾಜ ಸ್ತನಗಳ ಮೇಲಿನ ತೆರಿಗೆಯನ್ನು ಹಿಂಪಡೆದ.
5. ಅವಿವಾಹಿತರಿಗೆ ಟ್ಯಾಕ್ಸ್
9ನೇ ಶತಮಾನದಲ್ಲಿ ಇಂತಹದೊಂದು ತೆರಿಗೆ ಪದ್ಧತಿಯನ್ನು ಅಂದಿನ ರಾಜ ಆಗಸ್ಟಸ್ ಜಾರಿಗೆ ತಂದಿದ್ದನು. ಮದುವೆಗಳನ್ನು ದೇಶದಲ್ಲಿ ಹೆಚ್ಚು ಮಾಡಲು ಹಾಗೂ ಅವುಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ರೀತಿಯ ಟ್ಯಾಕ್ಸ್ ಹೇರಲಾಗಿತ್ತು. ಇದು ಮಾತ್ರವಲ್ಲ ಮದುವೆಯಾಗಿ ಮಕ್ಕಳು ಮಾಡಿಕೊಳ್ಳದ ದಂಪತಿಗಳಿಗೂ ಕೂಡ ಅಂದು ಟ್ಯಾಕ್ಸ್ ಹೇರಲಾಗುತ್ತಿತ್ತು. 20 ರಿಂದ 60 ವರ್ಷದೊಳಗಿನರವು ಮದುವೆಯಾಗದಿದ್ದರೆ ಮತ್ತು ಮದುವೆಯಾಗಿಯೂ ಕೂಡ ಮಕ್ಕಳನ್ನು ಮಾಡಿಕೊಳ್ಳದಿದ್ದರೆ ಈ ತೆರಿಗೆಯನ್ನು ವಸೂಲಿ ಮಾಡಲಾಗುತ್ತಿತ್ತು. ಇನ್ನು 15ನೇ ಶತಮಾನದಲ್ಲಿ ಒಟ್ಟೊಮನ್ ಸಾಮ್ರಾಜ್ಯದಲ್ಲಿಯೂ ಕೂಡ ಈ ರೀತಿಯ ಟ್ಯಾಕ್ಸ್ ವಸೂಲಿ ಮಾಡಲಾಗುತ್ತಿತ್ತು. 1924ರಲ್ಲಿ ಇಟಲಿಯ ಸರ್ವಾಧಿಕಾರಿ ಬೆನಿಟೋ ಮುಸಲನಿ ಕೂಡ ಅವಿವಾಹಿತ ತೆರಿಗೆಯನ್ನು ಜಾರಿಗೆ ತಂದಿದ್ದ. 21 ರಿಂದ 50 ವರ್ಷದೊಳಗಿನವರು ಮದುವೆಯಾಗದಿದ್ದರೆ ಅವರಿಗೆ ತೆರಿಗೆ ಹೇರಲಾಗುತ್ತಿತ್ತು
6. ಲೈಂಗಿಕ ಮಿಲನಕ್ಕೂ ಇತ್ತು ತೆರಿಗೆ
1971ರಲ್ಲಿ ಯುಎಸ್ನ ರೋಡ್ ದ್ವೀಪವೂ ಆರ್ಥಿಕ ಸಮಸ್ಯೆಯಿಂದ ತುಂಬಾ ತತ್ತರಿಸಿ ಹೋಗಿತ್ತು. ಅಂದಿನ ಡೆಮಾಕ್ರಟಿಕ್ ಸ್ಟೇಟ್ನ ಲೆಜಿಸ್ಲೇಟರ್ ಆದ ಬರ್ನಾರ್ಡ್ ಗ್ಲಾಡ್ಸ್ಟೋನ್ ದಂಪತಿಗಳು ಅಥವಾ ಜೋಡಿಗಳು ಒಂದು ಬಾರಿ ದೈಹಿಕ ಮಿಲನಗೊಂಡರೆ 2 ಡಾಲರ್ ತೆರಿಗೆ ಕಟ್ಟಬೇಕು ತೆರಿಗೆ ನಿಯಮವನ್ನು ತಂದಿದ್ದ. ಆದರೆ ಅದೃಷ್ಟವಷಾತ್ ಇದು ಎಂದಿಗೂ ಕೂಡ ಜಾರಿಗೆ ಬರಲಿಲ್ಲ. ಆದ್ರೆ ಜರ್ಮನಿಯಲ್ಲಿ 2004ರಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದ ಮೇಲೆ ಈ ಕಾರ್ಯದಲ್ಲಿ ತೊಡಗುವ ಪ್ರತಿ ಹೆಣ್ಣು ಮಗಳು ಕೂಡ ತಿಂಗಳಿಗೆ 150 ಯುರೊ ತೆರಿಗೆಯನ್ನು ಕಟ್ಟಬೇಕು ಎಂಬ ತೆರಿಗೆ ನೀತಿಯನ್ನು ಜಾರಿಗೆ ತಂದರು. ಇದನ್ನು ಕಾನೂನಿನಲ್ಲಿ ಸೆಕ್ಸ್ ಟ್ಯಾಕ್ಸ್ ಎಂದೇ ಉಲ್ಲೇಖಿಸಲಾಗಿತ್ತು. ಬೊನ್ನದಲ್ಲಿ ಪ್ರತಿ ವೇಶ್ಯೆಯೂ ಒಂದು ದಿನ ಕೆಲಸಕ್ಕೆ ಆರು ಯುರೋಸ್ ತೆರಿಗೆ ನೀಡಬೇಕಿತ್ತು. ಈ ಒಂದು ಸೆಕ್ಸ್ ಟ್ಯಾಕ್ಸ್ ದೇಶಕ್ಕೆ ಲಕ್ಷಾಂತರ ರೂಪಾಯಿ ವಾರ್ಷಿಕ ಆದಾಯವನ್ನು ತಂದುಕೊಟ್ಟಿತು.
7. ಮೂತ್ರದ ಮಾಡಿದರು ತೆರಿಗೆ
ಪ್ರಾಚೀನ ರೋಮ್ನಲ್ಲಿ ಮೂತ್ರವನ್ನು ಅತ್ಯಂತ ಮೌಲ್ಯಯುತ ಸರುಕು ಎಂದು ಗುರುತಿಸಲಾಗುತ್ತಿತ್ತು. ಮೂತ್ರವನ್ನು ಬಟ್ಟೆಯನ್ನು ತೊಳೆಯಲು ಹಾಗೂ ಹಲ್ಲು ಸ್ವಚ್ಛ ಮಾಡಲು ಉಪಯೋಗಿಸಲಾಗುತ್ತಿತ್ತು. ಇದರಲ್ಲಿ ಅಮೋನಿಯಾ ಅಂಶ ಇರುವುದರಿಂದ ಈ ಕಾರ್ಯಗಳಿಗೆ ಉಪಯೋಗಿಸಲಾಗುತ್ತಿತ್ತು. ವೆಸ್ಪಾಸಿಯನ್ ಸಾಮ್ರಾಜ್ಯದಲ್ಲಿ ಸಾರ್ವಜನಿಕ ಮೂತ್ರಲಾಯಗಳು ಸಂಗ್ರಹಿಸುವ ಹಾಗೂ ಹಂಚಿಕೆ ಮಾಡುವ ಮೂತ್ರದ ಮೇಲೆ ಟ್ಯಾಕ್ಸ್ ವಿಧಿಸಲಾಗಿತ್ತು. ಒಂದು ದಿನ ಇದರ ಬಗ್ಗೆ ವಾಸ್ಪಾಸಿಯನ್ ಮಗ ಟಿಟಸ್ ಪ್ರಶ್ನೆ ಮಾಡಿದಾಗ ವಾಸ್ಪಾಸಿಯನ್ ಅವನ ಮೂಗಿನ ಮೇಲೆ ಒಂದು ನಾಣ್ಯವನ್ನಿಟ್ಟು ಜನಪ್ರಿಯ ಹೇಳಿಕೆಯೊಂದನ್ನು ಹೇಳಿದ್ದ ಮನಿ ಡಸಂಟ್ ಸ್ಟಿಂಕ್. ಅಂದರೆ ದುಡ್ಡು ಎಂದು ದುರ್ವಾಸನೆ ಹೊಡೆಯುವುದಿಲ್ಲ ಎಂದು.
8. ಹಸು ತೇಗಿದರು ಕಟ್ಟಬೇಕಿತ್ತು ತೆರಿಗೆ
ನ್ಯೂಜಿಲೆಂಡ್ನ ಕೃಷಿಕರು ಎದುರಿಸುತ್ತಿರುವ ಟ್ಯಾಕ್ಸ್ ಇದು. ಆಕಳು ಸಾಕಿದವರ ಅದು ಕೂಗದಂತೆ ನೋಡಿಕೊಳ್ಳಬೇಕು ಒಂದು ವೇಳೆ ಅವು ತೇಗಿದರೆ ರೈತರು ಟ್ಯಾಕ್ಸ್ ಕಟ್ಟಬೇಕು. 2022ರಲ್ಲಿಯೇ ಈ ಒಂದು ತೆರಿಗೆ ನೀತಿ ಜಾರಿಗೆ ಬಂತು. ಗ್ರೀನ್ ಹೌಸ್ ಹಾಗೂ ಗ್ಯಾಸ್ ಎಮ್ಮಿಷನ್ ಉದ್ದೇಶದಿಂದ ಜಾಗತಿಕ ತಾಪಾಮನದ ವಿಷಯವನ್ನು ಗಮನದಲ್ಲಿಟ್ಟುಕೊಂಡು ಈ ಟ್ಯಾಕ್ಸ್ ಹೇರಲಾಗಿದೆ. ಹಸುಗಳು ತೇಗುವುದಿಂದ ಎಮಿಷನ್ ಹೆಚ್ಚಾಗುತ್ತದೆ ಹೀಗಾಗಿ ಈ ಒಂದು ತೆರಿಗೆ ನೀತಿಯನ್ನು ಜಾರಿಗೆ ತರಲಾಗಿದೆ.2025ರಲ್ಲಿಯೂ ಕೂಡ ಈ ಟ್ಯಾಕ್ಸ್ ಇನ್ನೂ ಜಾರಿಯಲ್ಲಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ