newsfirstkannada.com

ವರ್ಷದ ಮೊದಲ ಮಳೆಗೆ ಮುಂಬೈ ತತ್ತರ.. ಧೂಳು ಮಿಶ್ರಿತ ಬಿರುಗಾಳಿ.. ಮಳೆಗೆ 14 ಸಾವು.. 70 ಮಂದಿ ಗಂಭೀರ

Share :

Published May 14, 2024 at 9:06am

    ಪೆಟ್ರೋಲ್ ಬಂಕ್ ಮೇಲೆ ಜಾಹೀರಾತು ಫಲಕ ಬಿದ್ದು ಅವಾಂತರ

    ಚಲಿಸ್ತಿದ್ದ ಆಟೋ ರಿಕ್ಷಾದ ಮೇಲೆ ತೆಂಗಿನ ಮರ ಬಿದ್ದು ಅನಾಹುತ

    1 ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟ ಸ್ಥಗಿತ ಮಾಡಲಾಗಿತ್ತು

ಮುಂಬೈನ ಘಾಟ್‌ಕೋಪರ್‌ನಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯಿಂದ ಮುಂಬೈ ಜನ ಕಣ್ಣು ಬಿಡಲಾಗದೆ, ಉಸಿರಾಡಲಾಗದೆ ಒದ್ದಾಡಿದ್ದಾರೆ. ಧೂಳಿನ ಬಿರುಗಾಳಿ ಸಮೇತ ಭಾರೀ ಮಳೆಗೆ ವಾಣಿಜ್ಯ ನಗರಿಯ ಜನರು ಬೆಚ್ಚಿಬಿದ್ದಿದ್ದಾರೆ. ಏಕಾಏಕಿ ಕಬ್ಬಿಣದ ಪಾರ್ಕಿಂಗ್ ಲಾಟ್‌ ಕುಸಿದು ಬಿದ್ದರೇ, ಪೆಟ್ರೋಲ್ ಬಂಕ್ ಮೇಲೆ ಜಾಹೀರಾತು ಫಲಕ ಬಿದ್ದು ಅವಾಂತರ ಸೃಷ್ಟಿದೆ. ಇನ್ನೊಂದು ಕಡೆ ಆಟೋ ರಿಕ್ಷಾದ ಮೇಲೆ ತೆಂಗಿನ ಮರ ಬಿದ್ದು ಅನಾಹುತ ಮಾಡಿದೆ.

ಮುಂಬೈನಲ್ಲಿ ಬೊಬ್ಬಿರಿದ ವರುಣ

ವಾಣಿಜ್ಯನಗರಿ ಮುಂಬೈನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ನಿನ್ನೆ ಸುರಿದ ಮಳೆಗೆ ಮುಂಬೈನಲ್ಲಿ ಭಾರೀ ಅವಾಂತರವೇ ಸೃಷ್ಟಿಯಾಗಿದೆ.. ಧೂಳು ಮಿಶ್ರಿತ ಬಿರುಗಾಳಿ ಮುಂಬೈನ ಹಲವು ಭಾಗಗಳಲ್ಲಿ ಬಿರುಗಾಳಿಯಿಂದ ಇಡೀ ನಗರವೇ ತಬ್ಬಿಬ್ಬಾಗುವ ಸ್ಥಿತಿ ನಿರ್ಮಾಣವಾಗಿತ್ತು.

ಇದನ್ನೂ ಓದಿ: ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 5 ದಿನ ವರುಣಾರ್ಭಟ.. ಭಾರೀ ಮಳೆಗೆ ವಿಶ್ವಮಾನವ ಟ್ರೈನ್ ಮೇಲೆ ಬಿದ್ದ ಮರ

ದಾದರ್, ಕುರ್ಲಾ, ಮಾಹಿಮ್, ಘಾಟ್‌ಕೋಪರ್, ಮುಲುಂಡ್ ಮತ್ತು ವಿಖ್ರೋಲಿ ಉಪನಗರಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಬದ್ಲಾಪುರ್, ಕಲ್ಯಾಣ್ ಮತ್ತು ಉಲ್ಲಾಸ್‌ನಗರದಲ್ಲಿ ಸಹ ಬಿರುಸಿನ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿದೆ. ಬಿರುಗಾಳಿ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ 15 ವಿಮಾನಗಳ ಮಾರ್ಗವನ್ನು ಬದಲಿಸಲಾಯಿತು.

100 ಅಡಿ ಎತ್ತರದ ಜಾಹೀರಾತು ಫಲಕ ಬಿದ್ದಿದ್ದು, 14 ಮಂದಿ ಸಾವು

ಘಾಟ್‌ಕೋಪರ್ ಪ್ರದೇಶದ ಚೆಡ್ಡಾನಗರ ಜಂಕ್ಷನ್‌ನಲ್ಲಿ ಪೆಟ್ರೋಲ್ ಬಂಕ್‌ನಲ್ಲಿ 100 ಅಡಿ ಎತ್ತರದ ಜಾಹೀರಾತು ಫಲಕ ಬಿದ್ದಿದ್ದು, 14 ಮಂದಿ ಸಾವನ್ನಪ್ಪಿದ್ದಾರೆ. ಪೆಟ್ರೋಲ್ ಬಂಕ್‌ನಲ್ಲಿದ್ದ 70 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ, ಸ್ಥಳಕ್ಕೆ ಅಗ್ನಿಶಾಮಕ ದೌಡಾಯಿಸಿದ್ದು, ರಕ್ಷಣಾ ಕಾರ್ಯಾ ಮಾಡಿದ್ದಾರೆ. ಚಿಕಿತ್ಸೆಗಾಗಿ ಹಲವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಮುಂಬೈನ ವಾಡಾಲದಲ್ಲಿ ಕಬ್ಬಿಣದ ಪಾರ್ಕಿಂಗ್ ಲಾಟ್‌ ಕಂಬಗಳು ಕುಸಿದು ಬಿದ್ದಿವೆ.

ಇದನ್ನೂ ಓದಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ನಿಧನ

ಆಟೋ ರಿಕ್ಷಾದ ಮೇಲೆ ಬಿದ್ದ ಮರ, ಚಾಲಕ ಗಂಭೀರ

ಭಾರೀ ಗಾಳಿಗೆ ತೆಂಗಿನ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೇಘವಾಡಿ ನಾಕಾದಲ್ಲಿ ನಡೆದಿದೆ. ಕೂಡಲೇ ಸ್ಥಳೀಯರು ಆಟೋ ಚಾಲಕ ಹಯಾತ್ ಖಾನ್​​ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಮುಂಬೈ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್ ಸಿಬ್ಬಂದಿ ಮತ್ತು 108 ಆಂಬ್ಯುಲೆನ್ಸ್ ಸೇವೆಗಳನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ವರ್ಷದ ಮೊದಲ ಮಳೆಗೆೇ ವಾಣಿಜ್ಯ ನಗರಿ ತತ್ತರಿ ಹೋಗಿರೋದಂತೂ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರ್ಷದ ಮೊದಲ ಮಳೆಗೆ ಮುಂಬೈ ತತ್ತರ.. ಧೂಳು ಮಿಶ್ರಿತ ಬಿರುಗಾಳಿ.. ಮಳೆಗೆ 14 ಸಾವು.. 70 ಮಂದಿ ಗಂಭೀರ

https://newsfirstlive.com/wp-content/uploads/2024/05/MUMBAI_RAIN.jpg

Load More