/newsfirstlive-kannada/media/post_attachments/wp-content/uploads/2025/01/Maharashtra-Train-Accident.jpg)
ಮಹಾರಾಷ್ಟ್ರದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಅಪಘಾತಕ್ಕೀಡಾಗಿ ಪುಷ್ಪಕ್ ಎಕ್ಸ್​ಪ್ರೆಸ್ ಮಹಾರಾಷ್ಟ್ರದ ಜಲಗಾಂವ್ ಬಳಿ ಹೊತ್ತಿ ಉರಿದಿದೆ ಎಂಬ ವದಂತಿಗೆ ಹೆದರಿ ಜಿಗಿದವರ ಮೇಲೆ ಕರ್ನಾಟಕ ಎಕ್ಸ್​ಪ್ರೆಸ್ ಹರಿದು 8ಕ್ಕೂ ಹೆಚ್ಚು ಮಂದಿ ಜೀವವನ್ನು ಬಿಟ್ಟಿದ್ದಾರೆ.
ಅಸಲಿಗೆ ಪುಷ್ಪಕ್ ಟ್ರೇನ್​ನಲ್ಲಿ ಬೆಂಕಿ ಆವರಿಸಿದೆ ಎಂದು ದೊಡ್ಡ ವದಂತಿ ಏಕಾಏಕಿ ಟ್ರೇನ್​ ತುಂಬಾ ಹರಡಿದೆ. ಕೂಡಲೇ ಪ್ರಾಣರಕ್ಷಣೆಗೆ ಪ್ರಯಾಣಿಕರು ಒಂದು ಹಳಿಯಿಂದ ಮತ್ತೊಂದು ಹಳಿಗೆ ನೆಗೆದಿದ್ದಾರೆ ಈ ವೇಳೆ ದೆಹಲಿಯಿಂದ ಕರ್ನಾಟಕಕ್ಕೆ ಬರ್ತಿದ್ದ ಕರ್ನಾಟಕ ಎಕ್ಸ್​ಪ್ರೆಸ್​ ಜಿಗಿದ ಜನರ ಮೇಲೆ ಹರಿದು ಹೋಗಿದೆ. ರೈಲು ದುರಂತದಲ್ಲಿ ಮೃತದೇಹಗಳು ಛಿದ್ರ ಛಿದ್ರಗೊಂಡಿದ್ದು ಎಂತವರ ಎದೆಯನ್ನೂ ಕೂಡ ಝಲ್ ಎನ್ನಿಸುವಂತಿದೆ. ಸದ್ಯ ಘಟನೆಯಲ್ಲಿ 40 ಜನರು ಗಾಯಗೊಂಡಿದ್ದಾರೆ ಎಂಬ ವರದಿಯೂ ಕೂಡ ಬಂದಿದೆ
ಇದನ್ನೂ ಓದಿ:BREAKING: ಭಯಾನಕ ರೈಲು ದುರಂತ.. ಹಳಿಗೆ ಬಿದ್ದವರ ಮೇಲೆ ಹರಿದ ಕರ್ನಾಟಕ ಎಕ್ಸ್‌ಪ್ರೆಸ್!
ಮಾಹಿತಿ ಪ್ರಕಾರ ಪುಷ್ಪಕ್ ಎಕ್ಸ್ ಪ್ರೆಸ್ ಇದ್ದಕ್ಕಿದ್ದಂತೆ ನಿಂತಿತು. ಅದು ಕಿಡಿಗಳು ಹಾರಿ ಹೊಗೆ ಬರುವಂತೆ ಮಾಡಿತು. ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೆಲವು ಪ್ರಯಾಣಿಕರು ಭಾವಿಸಿದ್ದರು. ಅವರಲ್ಲಿ ಹಲವರು ಭಯದಿಂದ ರೈಲು ಹಳಿಗಳ ಮೇಲೆ ಹಾರಿದರು. ಅದೇ ಸಮಯಕ್ಕೆ ಬೆಂಗಳೂರು ಎಕ್ಸ್‌ಪ್ರೆಸ್ ಇನ್ನೊಂದು ಹಳಿಯಲ್ಲಿ ಹೋಗುತ್ತಿತ್ತು. ಈ ಎಕ್ಸ್‌ಪ್ರೆಸ್ ಕೆಲವು ಪ್ರಯಾಣಿಕರನ್ನು ತಪ್ಪಿಸಿದೆ. ಹಲವು ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಹಾಗೂ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us