/newsfirstlive-kannada/media/post_attachments/wp-content/uploads/2024/07/MARALEKAYI.jpg)
ಮಂಡ್ಯ: ಮರಳೆಕಾಯಿ ಬೀಜ ತಿಂದು 8 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಉಪ್ಪಾರದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಉಪ್ಪಾರದೊಡ್ಡಿಯ ಮನೆಯೊಂದರ ಹಿಂದೆ ಮರಳೇಕಾಯಿ ಗಿಡ ಇತ್ತು. ನಿನ್ನೆ ಸಂಜೆ 5 ಗಂಟೆ ವೇಳೆಗೆ ಆಟವಾಡುತ್ತಿದ್ದ ಮಕ್ಕಳು ಮರಳೆಕಾಯಿ ತಿಂದಿದ್ದಾರೆ. ಕಾಯಿ ತಿಂದ ಕೂಡಲೇ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ನಂತರ ವಾಂತಿಯಾಗಿದೆ.
ಕೂಡಲೇ ಮಕ್ಕಳನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಬಂದಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮದ್ದೂರು ವೈದ್ಯರು ಕಳುಹಿಸಿಕೊಟ್ಟಿದ್ದಾರೆ. ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ಚಿಕಿತ್ಸೆಗೆ ಮಕ್ಕಳು ಸ್ಪಂದಿಸುತ್ತಿಸುತ್ತಿದ್ದಾರೆ. ಮಕ್ಕಳ ಆರೋಗ್ಯ ಯಥಾಸ್ಥಿತಿಗೆ ಬಂದಿಗೆ ಎಂದು ವೈದ್ಯರು ಹೇಳಿದ್ದಾರೆ.
ಅಸ್ವಸ್ಥಗೊಂಡ ಮಕ್ಕಳು: ಸೃಜನ್ (11), ಜ್ಞಾನವಿ (9) , ಸಿಂಚನಾ (5), ಆಷಿಕಾ (6), ಭುವನೇಶ್ವರಿ (7), ಚರಣ (9), ಧ್ರುವಚರಣ್ (9), ಚಂದ್ರ (7)
ಇದನ್ನೂ ಓದಿ:47 ಬಾಲ್ನಲ್ಲಿ 100 ರನ್; ಶತಕದ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ಅಭಿಶೇಕ್ ಶರ್ಮಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ