newsfirstkannada.com

ಶಿವಕಾಶಿಯ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಭೀಕರ ಸ್ಫೋಟ! 8 ಮಂದಿ ಸುಟ್ಟು ಕರಕಲು, ಹಲವರಿಗೆ ಗಾಯ!

Share :

Published May 10, 2024 at 7:28am

    ಇದ್ದಕ್ಕಿದ್ದಂತೆಯೇ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ

    ಸ್ಫೋಟದಲ್ಲಿ ಎಂಟು ಮಂದಿ ದಾರುಣವಾಗಿ ಸಾವು

    ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ

ಪಟಾಕಿ ಸಿಡಿಸುವಾಗ ಎಷ್ಟು ಎಚ್ಚರಿಕೆಯಿಂದ ಇರಬೇಕೋ. ಅಷ್ಟೇ ಎಚ್ಚರಿಕೆಯಿಂದ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲೂ ಪಟಾಕಿ ತಯಾರಿಸುವ ಸಮಯದಲ್ಲಿ ಇರಬೇಕು. ಏಕೆಂದರೆ ಕಾರ್ಖಾನೆಯೊಂದರಲ್ಲಿ ಪಟಾಕಿ ಸಿಡಿದು 8 ಜನರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ಮುನ್ನೆಲೆಗೆ ಬಂದಿದೆ.

ತಮಿಳುನಾಡಿನ ಶಿವಕಾಶಿ ಬಳಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಎಂಟು ಮಂದಿ ದಾರುಣ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಕನಿಷ್ಠ 12 ಮಂದಿಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಖಾನೆ ಪರವಾನಗಿ ಪಡೆದ ಘಟಕವಾಗಿದ್ದು, ಸ್ಫೋಟಕ್ಕೆ ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದೆ. ಮೃತಪಟ್ಟ ಎಂಟು ಮಂದಿ ಪಟಾಕಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಗುರುತಿಸಲಾಗಿದೆ. ಸ್ಫೋಟದ ನಂತರ ಇಡೀ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸದ್ಯ ಬೆಂಕಿಗೆ ಕಾರಣ ಸ್ಪಷ್ಟವಾಗಿಲ್ಲ. ಗಂಭೀರವಾಗಿ ಗಾಯಗೊಂಡ ಕಾರ್ಮಿಕರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ: SSLC ಪಾಸ್​ ಆದ ವಿದ್ಯಾರ್ಥಿನಿಯ ತಲೆ ಕಡಿದ ದುಷ್ಕರ್ಮಿ.. ಕೊಲೆಗಾರ ಬೇರೆ ಯಾರೂ ಅಲ್ಲ.. ಈತನೇ

ಶಿವಕಾಶಿಯಿಂದ ಪಟಾಕಿ, ಸುರಕ್ಷತಾ ಬೆಂಕಿಕಡ್ಡಿ, ಸ್ಟೇಷನರಿ ವಸ್ತುಗಳು ಇಡೀ ದೇಶ್ಕಕೆ ಸಪ್ಲೈ ಮಾಡಲಾಗುತ್ತೆ. ಆದರೆ ಬಿಸಿಲು ಹೆಚ್ಚಿರುವ ಸಮಯದಲ್ಲಿ ತಯಾರಿಗೆಯನ್ನ ಸ್ವಲ್ಪ ಕಡಿಮೆ ಮಾಡಿ ಜನರ ಜೀವ ಉಳಿಸ ಬೇಕು ಎಂಬು ಮೃತ ಕುಟುಂಬಸ್ಥರ ಆಕ್ರಂದನವಾಗಿದೆ.

ಒಟ್ಟಾರೆ, ಪಟಾಕಿ ಸಿಡಿಸುವಾಗ ಎಷ್ಟು ಎಚ್ಚರಿಕೆಯಿಂದ ಇರಬೇಕೋ. ಅಷ್ಟೇ ಮುನ್ನೆಚ್ಚರಿಕೆ ಪಟಾಕಿ ತಯಾರಿಸುವಾಗಲೂ ಇರಬೇಕು ಅನ್ನೋದು ಈ ಘಟನೆಯಿಂದ ತಿಳಿದುಕೊಳ್ಳಬೇಕಾಗಿರೋ  ಸಂಗತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವಕಾಶಿಯ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಭೀಕರ ಸ್ಫೋಟ! 8 ಮಂದಿ ಸುಟ್ಟು ಕರಕಲು, ಹಲವರಿಗೆ ಗಾಯ!

https://newsfirstlive.com/wp-content/uploads/2024/05/Shivakashi.jpg

Load More