newsfirstkannada.com

ರಾಜ್ಯದಲ್ಲಿ 6 ಮಂದಿ ಮಹಿಳೆಯರಿಗೆ ಟಿಕೆಟ್​ ನೀಡಿದ ಕಾಂಗ್ರೆಸ್​​; ಇದಕ್ಕೆ ಅಸಲಿ ಕಾರಣವೇನು?

Share :

Published March 23, 2024 at 6:15am

    ಲೋಕಸಭಾ ಅಖಾಡಕ್ಕೆ ಧುಮುಕಿದ 8 ನಾರಿಯರು

    ಕಣದಲ್ಲಿ ನಾರಿಯರ ದರ್ಬಾರ್​​ ಸ್ತ್ರಿ ಶಕ್ತಿಗೆ ಜೈಕಾರ

    ಲೋಕ ಕದನ ಕಣದಲ್ಲಿ ಶಕ್ತಿಯ ಅವತಾರ ಪಣಕ್ಕೆ

ಈ ಬಾರಿಯ ಲೋಕಸಭಾ ಚುನಾವಣೆ ಕಲರ್​ಫುಲ್​ ಆಗಿರಲಿದೆ. ಕಾರಣಗಳು ಏನೇ ಇರಲಿ ಕರ್ನಾಟಕದಲ್ಲಿ ನಾರಿಯರಿಗೆ ಟಿಕೆಟ್​​ ಬಲ ಸಿಕ್ಕಿದೆ. ಕಾಂಗ್ರೆಸ್​​ನಿಂದ 6 ಮಹಿಳೆಯರು ಟಿಕೆಟ್ ಗಿಟ್ಟಿಸಿದ್ರೆ, ಬಿಜೆಪಿ ಸಹ ಇಬ್ಬರನ್ನ ಅಖಾಡಕ್ಕೆ ಇಳಿಸಿದೆ. ಈ ಮೂಲಕ ಕದನ ಕಣದಲ್ಲಿ ಶಕ್ತಿಯ ಅವತಾರ ಪಣಕ್ಕೆ ಇಡಲಾಗಿದೆ.

ಲೋಕಸಭಾ ಅಖಾಡಕ್ಕೆ ಧುಮುಕಿದ ಎಂಟು ನಾರಿಯರು!

ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎರಡು ರಾಷ್ಟ್ರೀಯ ಪಕ್ಷಗಳು ಮಹಿಳಾ ಮಣಿಗಳಿಗೆ ಹೆಚ್ಚಿನ ಟಿಕೆಟ್ ನೀಡಿವೆ. 1999ರ ಲೋಕಸಭೆ ಚುನಾಣೆಯಲ್ಲಿ ರಾಜ್ಯದಿಂದ ಇಬ್ಬರು ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದು ಹೊರತುಪಡಿಸಿದ್ರೆ, ಸುಮಾರು 24 ವರ್ಷಗಳ ನಂತರ ರಾಜ್ಯದಿಂದ ಪ್ರತಿ ಚುನಾವಣೆಯಲ್ಲಿ ಓರ್ವ ಮಹಿಳೆ ಮಾತ್ರ ಆಯ್ಕೆಯಾಗಿದ್ದಾರೆ. ಈ ಬಾರಿಯ ಮಹಿಳೆಯರಿಗೆ ಲಾಟರಿ ಹೊಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಹಿಳೆಯರಿಗೆ ಪ್ರಾಮುಖ್ಯತೆ ಕೊಟ್ಟಿದೆ. ಅದರಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಇದೆ. 6 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿ ನಾವು ಮಹಿಳೆಯರ ಪರ ಅಂತ ಶಕ್ತಿಯನ್ನ ಗುಣಗಾನ ಮಾಡಿದ್ದಾರೆ. ಇತ್ತ, ಬಿಜೆಪಿ ಸಹ 2 ಕ್ಷೇತ್ರಗಳಲ್ಲಿ ಅದೃಷ್ಟ ಪಣಕ್ಕಿಟ್ಟಿದೆ.

ಲೋಕ ಅಖಾಡದಲ್ಲಿ ನಾರಿ ಶಕ್ತಿ

  • ಶಿವಮೊಗ್ಗ:  ಗೀತಾ ಶಿವರಾಜ್‍ಕುಮಾರ್ (ಕಾಂಗ್ರೆಸ್​)
  • ಬೆಂಗಳೂರು ದಕ್ಷಿಣ: ಸೌಮ್ಯ ರೆಡ್ಡಿ (ಕಾಂಗ್ರೆಸ್​)
  • ಉತ್ತರ ಕನ್ನಡ: ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್​)
  • ಚಿಕ್ಕೋಡಿ: ಪ್ರಿಯಾಂಕ ಜಾರಕಿಹೋಳಿ (ಕಾಂಗ್ರೆಸ್​)
  • ಬಾಗಲಕೋಟೆ:ಸಂಯುಕ್ತ ಪಾಟೀಲ್ (ಕಾಂಗ್ರೆಸ್​)
  • ದಾವಣಗೆರೆ: ಪ್ರಭಾ ಮಲ್ಲಿಕಾರ್ಜುನ (ಕಾಂಗ್ರೆಸ್​)
  • ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್ (ಬಿಜೆಪಿ)
  • ಬೆಂಗಳೂರು ಉತ್ತರ:  ಶೋಭಾ ಕರಂದ್ಲಾಜೆ (ಬಿಜೆಪಿ)

ಮೊದಲ ಪಟ್ಟಿಯಲ್ಲಿ ಶಿವಮೊಗ್ಗ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‍ಕುಮಾರ್ ಹೆಸರು ಘೋಷಣೆ ಆಗಿತ್ತು.. ಇದೀಗ ಎರಡನೇ ಕಾಂಗ್ರೆಸ್ ಲಿಸ್ಟ್​​ನಲ್ಲಿ ಬೆಂಗಳೂರು ದಕ್ಷಿಣಕ್ಕೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿಯನ್ನ ಕಾಂಗ್ರೆಸ್​ ಕಣಕ್ಕಿಳಿಸಿದೆ. ಉತ್ತರ ಕನ್ನಡದಲ್ಲಿ 1999ರಲ್ಲಿ ಸ್ತ್ರಿ ದಾಳ ಉರುಳಿಸಿ ಗೆದ್ದಿದ್ದ ಕಾಂಗ್ರೆಸ್​​​, ಈ ಸಲ ಮಾರಾಠ ಅಸ್ತ್ರ ಪ್ಲಸ್​​​ ಮಾಜಿ ಶಾಸಕಿ ಅಂಜಲಿ ಲಿಂಬಾಳ್ಕರ್​ ಕೈಗೆ ಟಿಕೆಟ್​ ಕೊಟ್ಟಿದೆ. ಪಕ್ಕದ ಚಿಕ್ಕೋಡಿಯಲ್ಲಿ ಮೊದಲ ಬಾರಿಗೆ ಕೈಪಡೆ ಮಹಿಳೆಗೆ ಟಿಕೆಟ್​ ನೀಡಿದೆ. ಸಚಿವ ಸತೀಶ್​​ ಜಾರಕಿಹೊಳಿ ಪುತ್ರಿ ಪ್ರಿಯಾಂಕರನ್ನ ಅದೃಷ್ಟ ಪರೀಕ್ಷೆಗೆ ಇಳಿಸಿದೆ. ಸ್ವಲ್ಪ ಬಲಕ್ಕೆ ಬಂದ್ರೆ ಬಾಗಲಕೋಟೆ. ಈ ಬಾಗಲಕೋಟೆ ಕ್ಷೇತ್ರದಲ್ಲಿ ನೆರೆ ಜಿಲ್ಲೆ ವಿಜಯಪುರದ ಪ್ರಭಾವಿ ಸಚಿವ ಶಿವಾನಂದ ಪಾಟೀಲ್​ ಪುತ್ರಿ ಸಂಯುಕ್ತಾ ಪಾಟೀಲ್​​ರನ್ನ ಅಖಾಡಕ್ಕೆ ಇಳಿಯಲಿದ್ದಾರೆ. ಇನ್ನು, ಮಧ್ಯ ಕರ್ನಾಟಕಕ್ಕೆ ಬಂದ್ರೆ ದಾವಣಗೆರೆ ಕ್ಷೇತ್ರ ತೀವ್ರ ಕುತೂಹಲ ಕೆರಳಿಸ್ತಿದೆ. ದಾವಣಗೆರೆಯಲ್ಲಿ ಸಚಿವ ಮಲ್ಲಿಕಾರ್ಜುನ್​​ ಪತ್ನಿ ಪ್ರಭಾ ಮಲ್ಲಿಕಾರ್ಜುನ್​ ಕೈಗೆ ಟಿಕೆಟ್​​ ಕೊಟ್ಟಿದೆ. ಅದೇ ಕ್ಷೇತ್ರದಲ್ಲಿ ಬಿಜೆಪಿ ಸಹ ಸಂಸದ ಜಿಎಂ ಸಿದ್ದೇಶ್ವರ್​ ಪತ್ನಿ ಗಾಯಿತ್ರಿ ಸಿದ್ದೇಶ್ವರ್​​ರನ್ನ ಕಣಕ್ಕಿಳಿಸಿದೆ. ಇನ್ನು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯಲ್ಲಿ ಚಿಕ್ಕಮಗಳೂರು ಉಡುಪಿಯಿಂದ ಎತ್ತಂಗಡಿ ಮಾಡಿ ಬೆಂಗಳೂರು ಉತ್ತರಕ್ಕೆ ಬಿಜೆಪಿ ಡಂಪ್​ ಮಾಡಿ ಟಿಕೆಟ್​ ಕೊಟ್ಟಿದೆ.

ಒಟ್ಟಾರೆ, 1996 ಮತ್ತು 1998ರ ಲೋಕಸಭಾ ಚುನಾವಣೆ ವೇಳೆ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್, ಬಿಜೆಪಿ, ಜೆಡಿಯು ಮಹಿಳೆಯರಿಗೆ ಟಿಕೆಟ್ ನೀಡಿರಲಿಲ್ಲ. 1999ರಲ್ಲಿ ಕಾಂಗ್ರೆಸ್ ಇಬ್ಬರಿಗೆ ಹಾಗೂ ಬಿಜೆಪಿ ಓರ್ವ ಮಹಿಳೆಗೆ ಟಿಕೆಟ್ ಕೊಟ್ಟಿತ್ತು. ದೇಶದ ಗಮನಸೆಳೆದಿದ್ದ ಬಳ್ಳಾರಿ ಕಣ ಕೂಡ ಸೇರಿದೆ. 2009ರಲ್ಲಿ ಶ್ರೀರಾಮುಲು ಸಹೋದರಿ ಜೆ.ಶಾಂತ ಗೆದ್ದು ಬೀಗಿದ್ದರು. 2014 ಮತ್ತು 2019ರಲ್ಲಿ ಶೋಭಾ ಕರಂದ್ಲಾಜೆ ರಾಜ್ಯವನ್ನ ಪ್ರತಿನಿಧಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ನಾರಿ ಶಕ್ತಿಯ ಖದರ್‌ ಜೋರಾಗಿರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ 6 ಮಂದಿ ಮಹಿಳೆಯರಿಗೆ ಟಿಕೆಟ್​ ನೀಡಿದ ಕಾಂಗ್ರೆಸ್​​; ಇದಕ್ಕೆ ಅಸಲಿ ಕಾರಣವೇನು?

https://newsfirstlive.com/wp-content/uploads/2024/03/2024-ladies.jpg

Load More