/newsfirstlive-kannada/media/post_attachments/wp-content/uploads/2025/02/TELANGANA-TUNNEL.jpg)
ತೆಲಂಗಾಣದ ಶ್ರೀಶೈಲಂ ಮತ್ತು ದೇವರಕೊಂಡ ಎಡದಂಡೆ ಕಾಲುವೆಗೆ ನಿರ್ಮಿಸಲಾಗಿದ್ದ ಸುರಂಗ ಮಾರ್ಗ ಕುಸಿದು 8 ಜನರು ಸಿಲುಕಿ ಸುಮಾರು 48 ಗಂಟೆಗಳೇ ಕಳೆದು ಹೋಗಿವೆ. ಇನ್ನೂ ಕೂಡ 8 ಜನರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ.ಸೇನೆ, ರಾಷ್ಟ್ರೀಯ ವಿಪತ್ತು ದಳ ಸೇರಿ ಹಲವಾರು ರಕ್ಷಣಾ ಪಡೆಗಳು ಈಗ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ನೌಕಾದಳದ ಟೀಮ್ ಕೂಡ ಬಂದಿದೆ. ಈಗ ಅದರ ಜೊತೆಗೆ 2023ರಲ್ಲಿ ಉತ್ತರಾಖಂಡ್ನಲ್ಲಿ ನಡೆದಿದ್ದ ಸಿಕ್ಯಾರ ಸುರಂಗ ಮಾರ್ಗ ಕುಸಿತದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಿದ್ದ ಟೀಮ್ ಕೂಡ ಸೇರಿಕೊಂಡಿದೆ.
ಒಂದು ಅಂದಾಜಿನ ಪ್ರಕಾರ ಸುಮಾರು 13 ಕಿಲೋ ಮೀಟರ್ನಷ್ಟು ಸುರಂಗ ಮಾರ್ಗ ಕುಸಿದು ಬಿದ್ದಿದೆ. ರಕ್ಷಣಾ ಪಡೆಗಳು ಎಲ್ಲ ಹರಸಾಹಸಪಟ್ಟು ಅಂತಿಮ ನೂರು ಮೀಟರ್ ಹತ್ತಿರದಷ್ಟು ತಲುಪಿವೆ ಎಂದು ವರದಿಗಳು ಹೇಳುತ್ತಿವೆ. ಆದರೆ ರಕ್ಷಣಾ ಪಡೆಗೆ ನೀರು ಮತ್ತು ಸುರಂಗದಲ್ಲಿ ತುಂಬಿರುವ ಕೆಸರು ಕಾರ್ಯಾಚರಣೆಗೆ ದೊಡ್ಡ ಅಡ್ಡಿಯಾಗಿ ನಿಂತಿವೆ ಎಂದು ತೆಲಂಗಾಣದ ಸಚಿವ ಹೇಳಿದ್ದಾರೆ.
ಇಡೀ ಸುರಂಗದ ಒಳಗಡೆ ಅತಿ ಎತ್ತರದಲ್ಲಿ ಕೆಸರು ತುಂಬಿಕೊಂಡಿದ್ದು ನಡೆಯಲು ಕೂಡ ಕಷ್ಟ ಸಾಧ್ಯವಾಗುವಂತೆ ಮಾಡಿದೆ. ರಕ್ಷಣಾ ಪಡೆ ರಬ್ಬರ್ ಟ್ಯೂಬ್ ಹಾಗೂ ಮರದ ಹಲಗೆಗಳನ್ನು ಬಳಸಿ ಅವುಗಳನ್ನು ಒಡೆದು ಮುಂದೆ ಸಾಗುತ್ತಿದೆ. ಒಳಗೆ ಸಿಲುಕಿರುವವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಇದೆ, ಆದ್ರೆ ನಾವು ನಮ್ಮ ಎಲ್ಲ ಪ್ರಯತ್ನಗಳನ್ನೂ ಬಿಡದೆ ಅವರ ರಕ್ಷಣೆ ಮೀಸಲು ಇಟ್ಟಿದ್ದೇವೆ ಎಂದು ಸಚಿವ ರಾವ್ ಹೇಳಿದ್ದಾರೆ.
ಇದನ್ನೂ ಓದಿ:ದೇಶದಲ್ಲಿ ಮತ್ತೊಂದು ಕರಾಳ ಅಧ್ಯಾಯ.. 14 ಕಿ.ಮೀ ಸುರಂಗದಲ್ಲಿ ಸಿಲುಕಿರುವ 8 ಕಾರ್ಮಿಕರು; ರಕ್ಷಣೆಗೆ ಹಲವು ಸವಾಲು!
ರಕ್ಷಣಾ ಪಡೆಗೆ ಒಳಗೆ ಸಿಲುಕಿರುವವರನ್ನು ರಕ್ಷಿಸಲು ಇನ್ನೂ ಹೆಚ್ಚಿನ ಸಲಕರಣೆಗಳು ಬೇಕಾಗಿವೆ. ನಿನ್ನೆ ಬಂದ ವರದಿಯ ಪ್ರಕಾರ ಸುರಂಗದಿಂದ ಸೋರುತ್ತಿರುವ ನೀರನ್ನು ತಡೆಯಲು ಹೆಚ್ಚಿನ ಸಲಕರಣೆಗಳು ಈಗ ರಕ್ಷಣಾ ಪಡೆಗೆ ಬೇಕಾಗಿವೆ. ಮತ್ತೊಂದು ಆತಂಕವೆಂದರೆ ಸದ್ಯ ಶಿಫ್ಟ್ ಮಾಡಲಾಗುತ್ತಿರುವ ಬಂಡೆಗಳ ಶಬ್ದ ಉಳಿದ ಸುರಂಗ ಮಾರ್ಗದ ಮೇಲ್ಛಾವಣಿಯನ್ನು ಕುಸಿಯುವಂತೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪರಿಸ್ಥಿತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ತುಂಬಾ ಗಂಭೀರವಾಗಿ ಪರಿಗಣಿಸಿದ್ದು ಪರಸ್ಥಿತಿಯನ್ನು ಎರಡು ಕಡೆಯಿಂದ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ:ಭೀಕರ ಭೂಕಂಪದಿಂದಾಗಿ ಕಾಲ್ಕಿತ್ತ ಬ್ರಿಟಿಷರು; ಈ ಕೋಟೆಯ ಗರ್ಭದಲ್ಲಿ ಇಂದಿಗೂ ಇದೆ ಎಂದಿಗೂ ಮುಗಿಯದ ಸಂಪತ್ತು!
ಇನ್ನು ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಸಿಎಂ ರೇವಂತ್ ರೆಡ್ಡಿಗೆ ಕರೆ ಮಾಡಿ ಪರಿಸ್ಥಿತಿಯನ್ನು ತಿಳಿದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಕೂಡ ರೇವಂತ್ ರೆಡ್ಡಿಯವರಿಗೆ ನಿನ್ನೆಯೇ ಕರೆಮಾಡಿ ಕೇಂದ್ರದ ಬೇಕಾದ ಎಲ್ಲಾ ಸಹಾಯವನ್ನು ಒದಗಿಸಲಾಗುವುದು ಎಂದು ಭರವಸೆಯನ್ನು ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ