Advertisment

EXCLUSIVE: ಒಂದಲ್ಲ.. ಎರಡಲ್ಲ.. 8 ಮಂದಿ ಐ ವಿಟ್ನೆಸ್; ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌!

author-image
admin
Updated On
ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಬಹಳ ದೊಡ್ಡ ಸಂಚು ನಡೆಯಿತಾ.. ಕೋರ್ಟ್​ಗೆ ಹೇಳಿದ್ದೇನು?
Advertisment
  • ಕೊಲೆ ಕೇಸ್‌ನ ಯಾವುದೇ ಸಣ್ಣ ಸಾಕ್ಷ್ಯ ಬಿಡದೇ ಜಾಲಾಡಿರುವ ಪೊಲೀಸರು
  • ದರ್ಶನ್ ಧರಿಸಿದ್ದ ಬೆಲ್ಟ್ ಅನ್ನು ಬಿಡದೆ ಪತ್ತೆ ಮಾಡಿ ಸೀಜ್ ಮಾಡಿದ ಖಾಕಿ ಪಡೆ
  • ಪಟ್ಟಣಗೆರೆ ಶೆಡ್‌ನಲ್ಲೇ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸಾಕ್ಷ್ಯ ಪತ್ತೆ

ಬೆಂಗಳೂರು: ನಟ ದರ್ಶನ್ ಅವರನ್ನು ಬಂಧಿಸಿರುವ ಹೈಪ್ರೊಫೈಲ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತಾರ್ಕಿಕ ಅಂತ್ಯದ ಹಾದಿಯಲ್ಲಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ಕೊಲೆ ಪ್ರಕರಣದ ಯಾವೊಂದು ಸಾಕ್ಷ್ಯವನ್ನು ಬಿಡದೆ ಕಲೆ ಹಾಕಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಕ್ಸ್‌ಕ್ಲೂಸಿವ್ ಮಾಹಿತಿ ನ್ಯೂಸ್ ಫಸ್ಟ್‌ಗೆ ಲಭ್ಯವಾಗಿದೆ.

Advertisment

ಇದನ್ನೂ ಓದಿ: ‘ತಪ್ಪಾಗಿದೆ ಕ್ಷಮಿಸಿಬಿಡಿ..’ ಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ..!

ದರ್ಶನ್ ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಹತ್ಯೆ ಮಾಡಿದ್ದರು. ಕೊಲೆಯಾದ ಸ್ಥಳ & ಘಟನೆಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯವನ್ನು ಬಿಡದ ಪೊಲೀಸರು ಬರೋಬ್ಬರಿ 180 ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದಾರೆ.

publive-image

ರೇಣುಕಾ ಕೊಲೆ ಕೇಸ್‌ಗೆ 180 ಸಾಕ್ಷ್ಯಗಳು!
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪ್ರತ್ಯಕ್ಷ, ಪರೋಕ್ಷವಾಗಿ ಕಂಡು ಬಂದ ಪ್ರತಿಯೊಂದು ವಸ್ತುಗಳನ್ನು ಸೀಜ್ ಮಾಡಿದ್ದಾರೆ. ಸ್ಥಳ ಮಹಜರು ನಡೆಸಿರುವ ಪೊಲೀಸ್ರು ಕೃತ್ಯಕ್ಕೆ ಬಳಸಿದ ವಸ್ತು, ಕೃತ್ಯದ ವೇಳೆ ಆರೋಪಿಗಳು ಧರಿಸಿದ್ದ ಬಟ್ಟೆ, ಶೂ, ಚಪ್ಪಲಿಗಳು, ಕೃತ್ಯದ ವೇಳೆ ಬಳಕೆಯಾದ ವಾಹನಗಳನ್ನು ಸೀಜ್​ ಮಾಡಿದ್ದಾರೆ. ನಟ ದರ್ಶನ್ ಧರಿಸಿದ್ದ ಬೆಲ್ಟ್ ಅನ್ನು ಬಿಡದೆ ಪೊಲೀಸರು ಪತ್ತೆ ಮಾಡಿದ್ದಾರೆ.

Advertisment

ಡಿ ಗ್ಯಾಂಗ್ ಕ್ರೌರ್ಯಕ್ಕೆ 8 ಮಂದಿ ಐ ವಿಟ್ನೆಸ್!
ದರ್ಶನ್‌ ಗ್ಯಾಂಗ್​​ನಿಂದ ನಡೆದ ಕೊಲೆ ಕೇಸ್​ಗೆ ಒಂದಲ್ಲ, ಎರಡಲ್ಲ 8 ಮಂದಿ ಐ ವಿಟ್ನೆಸ್ ಇದ್ದಾರೆ ಅನ್ನೋ ರೋಚಕ ಮಾಹಿತಿ ಲಭ್ಯವಾಗಿದೆ. ಪಟ್ಟಣಗೆರೆ ಶೆಡ್​ ಸೆಕ್ಯೂರಿಟಿ ಸೇರಿ 8 ಮಂದಿಯ ಸಾಕ್ಷಿಧಾರರನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಈಗಾಗಲೇ ಪಟ್ಟಣಗೆರೆ ಶೆಡ್ ಸೆಕ್ಯೂರಿಟಿಯಿಂದ ಜಡ್ಜ್​​ ಮುಂದೆ ಸಿಆರ್​ಪಿಸಿ 164 ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಇದೀಗ ಉಳಿದ 7 ಮಂದಿಯ 164 ಹೇಳಿಕೆ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

publive-image

ಏನಿದು 164 ಹೇಳಿಕೆ?
ಯಾವುದೇ ಅಪರಾಧ ಪ್ರಕರಣದಲ್ಲಿ 164 ಹೇಳಿಕೆ ಮಹತ್ವದ ಪಾತ್ರವಹಿಸುತ್ತೆ. ಪೊಲೀಸರ ವಿಚಾರಣೆ ವೇಳೆ ಸಾಕ್ಷಿಧಾರರು, ಆರೋಪಿಗಳ ಹೇಳಿಕೆಯನ್ನು ದಾಖಲು ಮಾಡಲಾಗುತ್ತೆ. ಆದರೆ ಇದು ತನಿಖೆಯಲ್ಲಿ ಪ್ರಮುಖವಾದರೂ ಇದೇ ಅಧಿಕೃತ ಸಾಕ್ಷಿಯಾಗುವುದಿಲ್ಲ. ಆದರೆ ಜಡ್ಜ್‌ ಮುಂದೆ ನೀಡುವ ಸಿಆರ್‌ಪಿಸಿ 164 ಹೇಳಿಕೆಯನ್ನು ಅಧಿಕೃತ ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಇವರ ಭೇಟಿಯಿಂದ ಜೈಲಿನಲ್ಲಿ ಕೊಂಚ ರಿಲೀಫ್.. ದರ್ಶನ್ ಜೈಲ್ ಡೈರಿ..! 

ಒಂದು ಬಾರಿ 164 ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಆರೋಪಿಗಳು ಸಾಕ್ಷ್ಯಧಾರರು ನೀಡಿದ್ರೆ ಮತ್ತೆ ಅದನ್ನು ಬದಲಿಸಲು ಅವಕಾಶವೇ ಇಲ್ಲ. ಹೀಗಾಗಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪಟ್ಟಣಗೆರೆ ಶೆಡ್ ಸೆಕ್ಯೂರಿಟಿ ನೀಡಿರುವ 164 ಹೇಳಿಕೆ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಸಹಾಯಕವಾಗುತ್ತದೆ. ಉಳಿದ 7 ಮಂದಿಯಿಂದ ಪೊಲೀಸರು 164 ಹೇಳಿಕೆ ದಾಖಲು ಮಾಡಿದರೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬಹುದು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment