/newsfirstlive-kannada/media/post_attachments/wp-content/uploads/2025/05/klb-car-accidet1.jpg)
ರಾಜ್ಯದಲ್ಲಿ ಇಂದು ಘೋರ ದುರಂತಗಳು ಸಂಭವಿಸಿವೆ. ಮಳೆಯ ಆರ್ಭಟದಿಂದ ಮಂಗಳೂರಲ್ಲಿ ಎರಡು ಪ್ರತ್ಯೇಕ ಗುಡ್ಡ ಕುಸಿತವಾಗಿದೆ. ಈ ಮಧ್ಯೆ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು ನಡೆದಿದ್ದು, ಅದರಲ್ಲಿ ಒಟ್ಟು 8 ಮಂದಿ ಜೀವ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಮಂಗಳೂರಲ್ಲಿ ಕರುಳು ಚುರ್ ಅನ್ನೋ ದೃಶ್ಯ.. ಗುಡ್ಡ ಕುಸಿತದಲ್ಲಿ ಸಿಲುಕಿ ಕೈ ಅಲ್ಲಾಡಿಸ್ತಿದೆ ಪುಟ್ಟ ಕಂದಮ್ಮ..
ಚಿಕ್ಕಬಳ್ಳಾಪುರ:ನೀರಿನ ಹೊಂಡಕ್ಕೆ ಕಾರು ಬಿದ್ದು ಓರ್ವ ಜೀವಬಿಟ್ಟಿರೋ ಘಟನೆ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಸಮೀಪ ನಡೆದಿದೆ. ಕಳೆದ ರಾತ್ರಿ ಯನಮಲಪಾಡಿಯಿಂದ ಬಟ್ಲಹಳ್ಳಿ ಕಡೆಗೆ ಬರುತ್ತಿದ್ದ ಕಾರು 11:30ಕ್ಕೆ ಚಾಲಕನ ನಿಯಂತ್ರಣ ತಪ್ಪಿ ನೀರಿನ ಹೊಂಡಕ್ಕೆ ಬಿದ್ದಿದೆ. ಪರಿಣಾಮ ಆದರ್ಶ (21) ಯುವಕ ಉಸಿರು ಚೆಲ್ಲಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುಬ್ಬಳ್ಳಿ:ಭೀಕರ ರಸ್ತೆ ಅಪಘಾತದಲ್ಲಿ ಮೂವರ ಸ್ಥಳದಲ್ಲೇ ಜೀವಬಿಟ್ಟಿರೋ ಘಟನೆ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪೂರ ಬಳಿ ನಡೆದಿದೆ. ನಿಂತ ಲಾರಿಗೆ ತವೇರಾ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಅಸುನೀಗಿದ್ದಾರೆ. ಘಟನಾ ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರ ಭೇಟಿ ನೀಡಿ ಮೃತರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ:ಭಾರೀ ಮಳೆ.. ಕರ್ನಾಟಕದ ಈ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ..
ಕಲಬುರಗಿ: ಹಿಟ್ ಆ್ಯಂಡ್ ರನ್‌ಗೆ ವೃದ್ದ ಬಲಿಯಾಗಿರೋ ಘಟನೆ ನಗರದ ಹೈಕೋರ್ಟ್ ರಿಂಗ್ ಸರ್ವಿಸ್ ರಸ್ತೆಯಲ್ಲಿ ನಡೆದಿದೆ. ಬಲಭೀಮ ಬಿರಾದಾರ (62) ಹಿಟ್ ಆ್ಯಂಡ್ ರನ್‌ಗೆ ಬಲಿಯಾದವರು. ಬಲಭೀಮ್ ಬಿರಾದಾರ ಯುವಕನ ಬೈಕ್ ಮೇಲೆ ಹೋಗುತ್ತಿದ್ದರು. ಯುವಕನಿಗೆ ಡ್ರಾಪ್ ಕೇಳಿ ಹೊರಟಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಲಾಗುತ್ತಿದೆ.
ದಾವಣಗೆರೆ: ಎರಡು ಕಾರಿನ ನಡುವೆ ಡಿಕ್ಕಿಯಾಗಿ ಇಬ್ಬರು ಬಲಿಯಾಗಿರೋ ಘಟನೆ ನ್ಯಾಮತಿ ತಾಲೂಕಿನ ಸವಳಂಗ ಶಿಕಾರಿಪುರ ರಸ್ತೆಯಲ್ಲಿ ನಡೆದಿದೆ. ಶಿಕಾರಿಪುರ ನಗರದ ರುದ್ರಮ್ಮ(79) ಶಿವಮೊಗ್ಗದ ಅನ್ಸರ್ ಅಹ್ಮದ್ ಮೃತ ದುರ್ದೈವಿಗಳು. ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಶಿಕಾರಿಪುರಕ್ಕೆ ಬರುವಾಗ ಘಟನೆ ನಡೆದಿದ್ದು, ರುದ್ರಮ್ಮ ಎಂಬುವರ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಎರಡು ಕಾರಿನಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ರಾತ್ರಿಯಿಡೀ ಸುರಿದ ಮಳೆಗೆ ಕಾಂಪೌಂಡ್ ಗೋಡೆ ಮನೆ ಬಿದ್ದು 7 ವರ್ಷದ ಬಾಲಕಿ ಜೀವಬಿಟ್ಟಿರೋ ಘಟನೆ ದೇರಳಕಟ್ಟೆ ಸಮೀಪದ ಮೊಂಟೆಪದವು ಕೋಡಿ ಎಂಬಲ್ಲಿ ನಡೆದಿದೆ.
ಇನ್ನೂ, ಮಂಗಳೂರಿನ ಉಳ್ಳಾಲದ ದೇರಳಕಟ್ಟೆ ಮೊಂಟೆದ ಪಂಬದ ಹಿತ್ಲುವಿನಲ್ಲಿ ಘೋರ ದುರಂತ ಸಂಭವಿಸಿದ್ದು, ಮನೆ ಮೇಲೆ ಗುಡ್ಡ ಕುಸಿದು 5 ಮಂದಿ ಸಿಲುಕಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ NDRF, SDRF ನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮಾಹಿತಿ ಪ್ರಕಾರ ಓರ್ವ ಮಹಿಳೆ ಜೀವ ಬಿಟ್ಟಿದ್ದಾರೆ ಎನ್ನಲಾಗಿದೆ. ಇನ್ನೂಳಿದ 4 ಮಂದಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ