Advertisment

ಭಾರೀ ಮಳೆ.. ಪ್ರವಾಹ.. 24 ಗಂಟೆಯಲ್ಲಿ 8 ಮಂದಿ ದಾರುಣ ಸಾವು

author-image
Ganesh
Updated On
ಭಾರೀ ಮಳೆ.. ಪ್ರವಾಹ.. 24 ಗಂಟೆಯಲ್ಲಿ 8 ಮಂದಿ ದಾರುಣ ಸಾವು
Advertisment
  • ದೇಶದ ಕೆಲವು ರಾಜ್ಯಗಳಲ್ಲಿ ಭರ್ಜರಿ ಮಳೆ ಆಗುತ್ತಿದೆ
  • ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ಗುಜರಾತ್​ನಲ್ಲೂ ಮಳೆ
  • ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ

ನಿನ್ನೆ ಗುಜರಾತ್​​ನಲ್ಲಿ ಸುರಿದ ಭಯಂಕರ ಮಳೆಗೆ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ದ್ವಾರಕ, ಬನಸ್ಕಂಠ, ಕುಚ್, ರಾಜ್​ಕೋಟ್​​ ಜಿಲ್ಲೆಗಳಲ್ಲಿ ಜನರು ಮಹಿಳೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಕಮಿಷನರ್ ಅಶೋಕ್ ಪಾಂಡೆ ಮಾಹಿತಿ ನೀಡಿದ್ದಾರೆ.

Advertisment

ಕಳೆದ 24 ಗಂಟೆಯ ಅವಧಿಯಲ್ಲಿ ಒಟ್ಟು 8 ಜನ ಮಳೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಗುಜರಾತ್​​ನಲ್ಲಿ ಮಳೆಗೆ ಸಾವನ್ನಪ್ಪಿದವರ ಸಂಖ್ಯೆ 61ಕ್ಕೆ ಏರಿಕೆ ಆಗಿದೆ. ಪ್ರವಾಹದ ಪರಿಸ್ಥಿತಿ ಮೇಲೆ ಗುಜರಾತ್ ಸರ್ಕಾರ ನಿಗಾ ಇಟ್ಟಿದೆ. ತುರ್ತು ಸಹಾಯಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:‘ವಿರಾಟ್ ಪಾಕಿಸ್ತಾನಕ್ಕೆ ಬರಲಿ.. ಅಲ್ಲಿ ತಾಕತ್ತು ತೋರಿಸಲಿ’ -ಕೊಹ್ಲಿಗೆ ಚಾಲೆಂಜ್

ನವಸರಿ, ದ್ವಾರಕಾ ಮತ್ತು ಬರೂಚ್​​ನಲ್ಲಿ ಪ್ರವಾಹಕ್ಕೆ ಸಿಲುಕಿದ್ದ 215 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 826 ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ರಾಜ್ಯದಲ್ಲಿ ಸಿಗುವ 17 ರಾಜ್ಯ ಹೆದ್ದಾರಿಗಳು, 42 ರಸ್ತೆಗಳು ಹಾಗೂ 607 ಪಂಚಾಯತ್ ರಸ್ತೆಗಳು ಸೇರಿ ಒಟ್ಟು 666 ರಸ್ತೆಗಳಲ್ಲಿ ವಾಹನಗಳ ಸಂಚಾರ ಬಂದ್ ಆಗಿದೆ ಎಂದು ತಿಳಿಸಿದ್ದಾರೆ.

Advertisment

ಇದನ್ನೂ ಓದಿ:ಮಾಜಿ ಪತ್ನಿ ಫೋಟೋಗೆ ಕಾಮೆಂಟ್ ಮಾಡಿದ ಹಾರ್ದಿಕ್ ಪಾಂಡ್ಯ.. ಮತ್ತೆ ಒಂದಾಗ್ತಾರಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment