/newsfirstlive-kannada/media/post_attachments/wp-content/uploads/2024/07/Kashmir-Accident.jpg)
ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಖಾಸಗಿ ವಾಹನವೊಂದು ಕಂದಕಕ್ಕೆ ಉರುಳಿ ಬಿದ್ದು 5 ಮಕ್ಕಳು ಸೇರಿ 8 ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮೆಟ್ರೋ ಪಿಲ್ಲರ್ಗೆ ಡಿಕ್ಕಿ ಹೊಡೆದ ಬಸ್ಗೆ ಅಪಘಾತ.. ಸ್ಥಳದಲ್ಲೇ ಮಹಿಳೆ ಸಾವು; ಹಲವರ ಸ್ಥಿತಿ ಗಂಭೀರ
ಕಾಶ್ಮೀರದ ದಕ್ಸಮ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಖಾಸಗಿ ವಾಹನ ಪ್ರಪಾತಕ್ಕೆ ಜಾರಿದ್ದು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳದಲ್ಲಿ ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: KSRTC, ಟ್ಯಾಂಕರ್ ಮಧ್ಯೆ ಅಪಘಾತ.. ಬಸ್ ನಜ್ಜುಗುಜ್ಜು; ಹಲವರಿಗೆ ಗಂಭೀರ ಗಾಯ
ಭೀಕರ ಅಪಘಾತದಲ್ಲಿ 8 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 8 ಮಂದಿ ಮೃತರಲ್ಲಿ 5 ಮಕ್ಕಳು ಸೇರಿದ್ದು, ಮೃತದೇಹಗಳನ್ನು ಪ್ರಪಾತದಿಂದ ಮೇಲೆತ್ತುವ ಸಾಹಸ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ