newsfirstkannada.com

ಉತ್ತರಕಾಶಿಯಲ್ಲಿ ಭಾರೀ ದುರಂತ.. ಕರ್ನಾಟಕದ 8 ಪ್ರವಾಸಿಗರು ದಾರುಣ ಸಾವು

Share :

Published June 5, 2024 at 2:21pm

Update June 5, 2024 at 2:22pm

    ಉತ್ತರಾಖಂಡ್ ರಾಜ್ಯಕ್ಕೆ ಚಾರಣಕ್ಕೆ ಹೋಗಿದ್ದ ಕರ್ನಾಟಕದ ಮಂದಿ

    ಕರ್ನಾಟಕದ 18 ಮಂದಿ ಉತ್ತರಕಾಶಿ ಜಿಲ್ಲೆಗೆ ಟ್ರೆಕ್ಕಿಂಗ್ ಹೋಗಿದ್ದರು

    ಘಟನೆ ಬಗ್ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಟ್ವೀಟ್​; ಏನಂದ್ರು?

ಉತ್ತರಾಖಂಡ್ ರಾಜ್ಯಕ್ಕೆ ಚಾರಣಕ್ಕೆ ಹೋಗಿದ್ದ ಕರ್ನಾಟಕದ 8 ಮಂದಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಉತ್ತರಕಾಶಿ ಜಿಲ್ಲೆಗೆ ಟ್ರೆಕ್ಕಿಂಗ್​ ಹೋಗಿದ್ದ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದ ಈ ಸಾವು ಸಂಭವಿಸಿದೆ.

ಒಟ್ಟು 22 ಮಂದಿಯ ತಂಡ ಉತ್ತರಕಾಶಿ ಜಿಲ್ಲೆಗೆ ಟ್ರೆಕ್ಕಿಂಗ್​ ಹೋಗಿತ್ತು. 22 ಮಂದಿಯ ಪೈಕಿ 8 ಮಂದಿ ಸಾವನ್ನಪ್ಪಿದ್ದು, ಉಳಿದವರ ಪೈಕಿ 6 ಮಂದಿ ರಕ್ಷಣೆ ಮಾಡಲಾಗಿದೆ.

ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಬಳಸಿ 6 ಮಂದಿಯ ರಕ್ಷಣೆ ಮಾಡಲಾಗಿದೆ. 22 ಮಂದಿಯ ಪೈಕಿ ಕರ್ನಾಟಕದ 18 ಮಂದಿ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿಗರೇ.. ಈ ಎರಡು ದಿನ ಕಾವೇರಿ ನೀರಿನಲ್ಲಿ ವ್ಯತ್ಯಯ! ಯಾಕೆ ಗೊತ್ತಾ?

ಮೇ, 29 ರಂದು ಉತ್ತರಕಾಶಿಯ ಸಹಸ್ರಾಲ್ ನಿಂದ ಟ್ರೆಕ್ಕಿಂಗ್ ಗೆ ಹೊರಟಿದ್ದರು. ನಿನ್ನೆ ಪ್ರತಿಕೂಲ ಹಮಾಮಾನ ಪರಿಸ್ಥಿತಿಯಿಂದ 8 ಮಂದಿ ಮೃತರಾಗಿದ್ದಾರೆ.

ಕಂದಾಯ ಸಚಿವ ಕೃಷ್ಣಭೈರೇಗೌಡ ಘಟನೆ ಬಗ್ಗೆ ಉಲ್ಲೇಖಿಸಿ ಟ್ವೀಟ್​ ಮಾಡಿದ್ದಾರೆ. ‘ಉತ್ತರಾಖಂಡ ಸರ್ಕಾರ, ಭಾರತೀಯ ಪರ್ವತಾರೋಹಣ ಒಕ್ಕೂಟ ಮತ್ತು ಭಾರತ ಸರ್ಕಾರದ ಗೃಹ ಇಲಾಖೆಯ ಸಹಾಯದಿಂದ ರಕ್ಷಣಾ ಪ್ರಯತ್ನಗಳು ಮುಂದುವರಿದಿವೆ. ರಕ್ಷಿಸಲ್ಪಟ್ಟ ಚಾರಣಿಗರು ಡೆಹ್ರಾಡೂನ್ ತಲುಪುತ್ತಿದ್ದಾರೆ. ನಾವು ಜೀವಹಾನಿಗೊಳಗಾದ ವರದಿಗಳನ್ನು ಸಹ ಪಡೆಯುತ್ತಿದ್ದೇವೆ. ಸ್ಥಳೀಯ ಅಧಿಕಾರಿಗಳು ಮತ್ತು ಖಾಸಗಿ ಏಜೆನ್ಸಿಗಳೊಂದಿಗೆ ಮಾಹಿತಿಯನ್ನು ಪಡೆಯುತ್ತಿದ್ದೇವೆ’ ಎಂದು ಟ್ವೀಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರಕಾಶಿಯಲ್ಲಿ ಭಾರೀ ದುರಂತ.. ಕರ್ನಾಟಕದ 8 ಪ್ರವಾಸಿಗರು ದಾರುಣ ಸಾವು

https://newsfirstlive.com/wp-content/uploads/2024/06/Uttarkhand.jpg

Load More