/newsfirstlive-kannada/media/post_attachments/wp-content/uploads/2025/05/boy-donate-money-Army.jpg)
ಆಪರೇಷನ್ ಸಿಂಧೂರ ಕಾರ್ಯಾಚರಣೆಯೇ ಒಂದು ಅದ್ಭುತ. ಉಗ್ರರು, ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಭಾರತೀಯ ಸೇನೆಯ ಪರಾಕ್ರಮ ಅಮೋಘವಾದದ್ದು. ಕೋಟ್ಯಾನುಕೋಟಿ ಭಾರತೀಯರ ಸುರಕ್ಷತೆಗಾಗಿ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಇಂದಿಗೂ ದೇಶಕ್ಕಾಗಿ ತಮ್ಮ ಕರ್ತವ್ಯವನ್ನು ಮೆರೆಯುತ್ತಿದ್ದಾರೆ.
ಭಾರತೀಯ ಸೇನೆಯ ಸಿಂಧೂರ ಕಾರ್ಯಾಚರಣೆ ಬಳಿಕ 8 ವರ್ಷದ ಬಾಲಕನ ರಾಷ್ಟ್ರ ಪ್ರೇಮ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ತಮಿಳುನಾಡಿನ ಈ ಪುಟ್ಟ ಪೋರ ನಮ್ಮನ್ನು ರಕ್ಷಣೆ ಮಾಡಿದ ಯೋಧರಿಗೆ ನಾನು ಸಹಾಯ ಮಾಡುತ್ತೇನೆ ಎಂದು ಹೇಳುತ್ತಿದ್ದಾನೆ.
/newsfirstlive-kannada/media/post_attachments/wp-content/uploads/2025/05/boy-donate-money-Army-2-1.jpg)
8 ವರ್ಷದ ಈ ಬಾಲಕ ತಾನು 10 ತಿಂಗಳಿಂದ ಉಳಿತಾಯ ಮಾಡಿದ ಹಣವನ್ನು ಭಾರತೀಯ ಸೇನೆಗೆ ದೇಣಿಗೆ ಆಗಿ ನೀಡಿದ್ದಾನೆ. ಈ ಹುಡುಗನ ಹೃದಯ ವೈಶಾಲ್ಯತೆ ಇಡೀ ದೇಶದ ಜನರ ಗಮನ ಸೆಳೆದಿದೆ.
ಇದನ್ನೂ ಓದಿ: Breaking: ಪಾಕ್​ಗೆ ಗಾಯದ ಮೇಲೆ ಮತ್ತೊಂದು ದೊಡ್ಡ ಬರೆ.. ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ
2ನೇ ತರಗತಿ ಓದುತ್ತಿರುವ ಈ ಬಾಲಕ ಪೋಷಕರು ಕೊಟ್ಟ ಹಣವನ್ನು ಒಂದು ಡಬ್ಬಿಯಲ್ಲಿ ಜೋಪಾನವಾಗಿ ಇಟ್ಟು ಕಾಪಾಡುತ್ತಿದ್ದ. ಇದು ಅವನ ಪಾಕೆಟ್ ಮನಿ ಕೂಡ ಆಗಿತ್ತು. ಕಳೆದ 10 ತಿಂಗಳಲ್ಲಿ ಇವನು ಕೂಡಿಟ್ಟ ಹಣವನ್ನು ಜೋಡಿಸಿ ಭಾರತೀಯ ಸೇನೆಯ ನಿಧಿಗಾಗಿ ತ್ಯಾಗ ಮಾಡಿದ್ದಾನೆ.
/newsfirstlive-kannada/media/post_attachments/wp-content/uploads/2025/05/boy-donate-money-Army-1-1.jpg)
ತಮಿಳುನಾಡಿನ ಕರೂರ್ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 8 ವರ್ಷದ ಬಾಲಕ ಜಿಲ್ಲಾಧಿಕಾರಿಯ ಕಚೇರಿಗೆ ಬಂದು ತಾನು ಕೂಡಿಟ್ಟ ಹಣದ ಡಬ್ಬಿಯಲ್ಲಿದ್ದ ಹಣವನ್ನು ಸೇನೆಗೆ ಅರ್ಪಿಸಿದ್ದಾನೆ. ಜಿಲ್ಲಾಧಿಕಾರಿಗಳು ಬಾಲಕ ದೇಶ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತನಾಡಿದ ಈ ಬಾಲಕ ನಾನು ಉಳಿತಾಯ ಮಾಡಿದ ಎಲ್ಲಾ ಹಣವನ್ನು ಸೇನೆಗೆ ನೀಡುತ್ತಿದ್ದೇನೆ. ಯಾಕಂದ್ರೆ ಅವರು ನಮ್ಮನ್ನು ಕಾಪಾಡಿದ್ದಾರೆ ಎಂದು ಹೇಳಿದ್ದಾನೆ.
ಭಾರತೀಯ ಸೇನೆಗೆ ಸಹಾಯ ಮಾಡಿದ ಈ ಪುಟ್ಟ ಬಾಲಕ ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹುಡುಗನ ನೋಡಿಯಾದ್ರು ಎಲ್ಲರೂ ದೇಶ ಹಾಗೂ ಸೇನೆಯ ಮೇಲಿರುವ ಗೌರವ ಹೆಚ್ಚಿಸಿಕೊಳ್ಳಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ. ಇವನ ವಿಡಿಯೋ ನೋಡಿದ ನೆಟ್ಟಿಗರು ಈ ಹುಡುಗನ ಉತ್ತಮ ಭವಿಷ್ಯವಿದೆ ಎಂದು ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us