ಇದು ಸಿನಿಮಾ ಅಲ್ಲ.. ಕಿರುಚಿತ್ರವೂ ಅಲ್ಲ.. ರಿಯಲ್ ಸ್ಟೋರಿ
ರೈಲು, ಕತ್ತಲು, ಅಪ್ಪ-ಮಗಳ ಮನಮಿಡಿಯುವ ಕಥೆ ಇದೆ
ದುರ್ಘಟನೆಯಲ್ಲಿ ಮೆಗಾ ಸಿರಿಯಲ್ ಥ್ರಿಲ್ಲಿಂಗ್ ಇದೆ
ಹಾಲುಗಲ್ಲ.. ಪುಟ್ಟ ಕೈಗಳಲ್ಲಿ ಅಪ್ಪ ಹಾಕಿದ್ದ ಮೆಹಂದಿ ಬಣ್ಣ ಕೆಂಪಾಗಿ ಕಾಣ್ತಿತ್ತು. ಶ್ವೇತ ವಸ್ತ್ರದಲ್ಲಿ ಮಗಳೊಂದಿಗೆ ಅಪ್ಪ ರೈಲು ಹತ್ತಿದ್ದ. ಅಪ್ಪನ ಭುಜವೇರಿ ಕುಳಿತಿದ್ದ 8 ವರ್ಷದ ಮಗಳಿಗೆ ರೈಲು ಅಂದ್ರೆ ಏನೋ ಖುಷಿ. ಪ್ರಯಾಣ ಸಾಗ್ತಿದ್ದಂತೆ ಮುದ್ದಿನ ಕೂಸು ನಿದ್ದೆಗೆ ಜಾರಿತ್ತು. ಅದಕ್ಕೊಂದು ಜಾಗಬೇಕು. ಪಕ್ಕ ಕಿಟಕಿ ಇತ್ತು. ಸೋಕಿ ಸೋಕಿ ಬರ್ತಿದ್ದ ತಂಗಾಳಿಗೆ ಕಂದ ನಿದ್ರೆಗೆ ಜಾರಿತ್ತು.
ಅಪ್ಪನೂ ಅಷ್ಟೇ! ಕಿಟಕಿ ಪಕ್ಕ ಮಗಳನ್ನ ಮಲಗಿಸಿ ಜೋಪಾನ ಮಾಡ್ತಿದ್ದ. ಅವನಿಗೂ ಆಗಲೇ ನಿದ್ದೆ ಮಂಪರು. ರೈಲು ಮುಂದಿನ ನಿಲ್ದಾಣಕ್ಕೆ ಬಂದಿತ್ತು. ಅಲ್ಲಿ ಹತ್ತಿಕೊಂಡ ಪ್ರಯಾಣಿಕರು, ಆ ಕಿಟಕಿಯನ್ನ ಓಪನ್ ಮಾಡಿದ್ದರು. ಅದು ಎಮರ್ಜೆನ್ಸಿ ಕಿಟಕಿ. ಆದ್ರೆ ನಿದ್ರೆಯಲ್ಲಿದ್ದವನಿಗೆ ಯಾಕೋ ಎಚ್ಚರ. ಎದ್ದವನಿಗೆ ಕಂಡ ದೃಶ್ಯದಿಂದ ಎದೆ ಬಡಿದ್ಕೊಂಡ. ಇಲ್ಲೇ ಇದ್ದ ತನ್ನ ಕಂದಮ್ಮ ಕಿಟಕಿಯಿಂದ ಜಾರಿ ಹೋಗಿತ್ತು.
ಇದನ್ನೂ ಓದಿ:ಚನ್ನಪಟ್ಟಣದಿಂದ ಸ್ಪರ್ಧೆಗೆ ನಿಖಿಲ್ ಹಿಂದೇಟು; ಪ್ಲಾನ್ ಬಿ ಸಿದ್ಧ ಮಾಡ್ಕೊಂಡ ದಳಪತಿ..!
ಇದು ಉತ್ತರ ಪ್ರದೇಶದ ಲಲಿತ್ಪುರ ರೈಲು ನಿಲ್ದಾಣದಲ್ಲಿ ನಡೆದ ಕರುಣಾಜನಕ ಘಟನೆ. ಮಥುರಾದ ಅರವಿಂದ ತನ್ನ ಮಗಳು ಗೌರಿಯೊಂದಿಗೆ ಕುರುಕ್ಷೇತ್ರದಿಂದ ಮಥುರಾಕ್ಕೆ ಬರುವಾಗ ನಡೆದ ಘಟನೆ. ಕೂಡಲೇ ರೈಲಿನ ಚೈನ್ ಹಿಡಿದು ಎಳೆದವನೇ ಬಿಕ್ಕಳಿಸಿ ಅತ್ತಿದ್ದ. 112ಗೆ ಕರೆ ಮಾಡಿ ಪೊಲೀಸರ ಸಹಾಯ ಕೋರಿದ್ದ.. ಬಳಿಕ ಕಂದಮ್ಮನನ್ನ ರಕ್ಷಿಸೋ ಕಾರ್ಯ ಶುರುವಾಗಿತ್ತು.
16 ಕಿ.ಮೀ ಓಡುತ್ತಲೇ ಮಗಳನ್ನ ಉಳಿಸಿಕೊಂಡ ಅಪ್ಪ
ಪೊಲೀಸರು ಮೂರು ಟೀಮ್ಗಳಾಗಿ ಕಂದಮ್ಮನನ್ನ ರಕ್ಷಿಸೋ ಕಾರ್ಯಾಚರಣೆ ಆರಂಭಿಸಿದ್ದರು. ಅರವಿಂದ್ ಮಾತ್ರ ಮಗಳನ್ನ ಉಳಿಸಿಕೊಳ್ಳಲು ಓಡ್ತಾನೆ ಇದ್ದ. ಪೊಲೀಸರಿಗಿಂತ ಮುಂಚೆ ವಿರಾರಿ ಸ್ಟೇಷನ್ಗೆ ಬಂದಿದ್ದ. ಅಲ್ಲಿ ಕಾರ್ಗತ್ತಲು. ತಡಕಾಡಿದಾಗ ಸಿಕ್ಕಿದ್ದು ಪೊದೆಗಳು. ಮಗಳು ಗೌರಿ ಅಲ್ಲೇ ಇದ್ಲು. ರೈಲಿನಿಂದ ಬಿದ್ದ ಗೌರಿ ಪ್ರಜ್ಞೆ ತಪ್ಪಿದ್ಲು. ಕೂಡ್ಲೇ ಲಲಿತ್ಪುರ ಆಸ್ಪತ್ರೆಗೆ ದಾಖಲಿಸಿದ್ರು. ಇದೀಗ ಗೌರಿಗೆ ಎಚ್ಚರವಾಗಿದ್ದು, ಆರೋಗ್ಯವಾಗಿದ್ದಾಳೆ.
ಇದನ್ನೂ ಓದಿ:ಫ್ಯಾನ್ಸ್ಗೆ ಗುಡ್ನ್ಯೂಸ್; ಹೊಸ ದಾಖಲೆ ಬರೆಯಲು ಸಜ್ಜಾದ ಜನ ಮೆಚ್ಚಿದ ಸೀರಿಯಲ್ ರಾಮಾಚಾರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ