/newsfirstlive-kannada/media/post_attachments/wp-content/uploads/2025/01/ROCK-HILL-GREEN-FOREST.jpg)
ಕಾಶ್ಮೀರದ ಕೇಸರಿ ಗಿಡ ಮತ್ತು ಗಿಡ, ನೇಪಾಳದ ರುದ್ರಾಕ್ಷಿ ಮರ, ಥೈಲ್ಯಾಂಡ್ನ ಡ್ರಾಗನ್ ಹಣ್ಣು, ಅಮೆರಿಕಾದ ಬಟರ್ಫ್ರೂಟ್ ಹಣ್ಣು, ಇಟಲಿಯ ಒಲಿವ್ಸ್ ಹಾಗೂ ಮೆಕ್ಸಿಕೋದ ಖರ್ಜೂರ ಇವೆಲ್ಲವೂ ಒಂದೇ ಜಾಗದಲ್ಲಿ ಒಂದ ಸಮಯದಲ್ಲಿ ದೊರೆಯುತ್ತವೆ. ಅದು ಕೂಡ ಇಂದೋರ್ನಲ್ಲಿ ಒಂದು ಕಾಲದಲ್ಲಿ ಬೋಳು ಬೋಳು ಬೆಟ್ಟವಾಗಿದ್ದ ಹಿಲ್ಲಾಕ್ ಬೆಟ್ಟದಲ್ಲಿ. ಇಡೀ ಬೆಟ್ಟವನ್ನೇ ಕೇವಲ 8 ವರ್ಷಗಳಲ್ಲಿ ನಿತ್ಯ ಹರಿದ್ವರ್ಣದ ಕಾಡನ್ನಾಗಿ ಪರಿವರ್ತಿಸಿದ್ದಾರೆ ಡಾ. ಶಂಕರ್ ಲಾಲ್ ಜಾರ್ಜ. ಇಂದೋರ್ನಲ್ಲಿದ್ದ ಬಂಜರು ಭೂಮಿಯಂತಹ ಬೆಟ್ಟವನ್ನೇ ಸುಮಾರು 40 ಸಾವಿರ ಗಿಡಗಳನ್ನು ಬೆಳಸಿ ಈಗ ಅದ್ಭುತವಾದ ಒಂದು ಕಾಡನ್ನಾಗಿಯೇ ಮಾಡಿದ್ದಾರೆ. ವರ್ಲ್ಡ್ ರಿಸರ್ಚ್ ಅಸೋಸಿಯೇಷನ್ನ ನಿರ್ದೇಶಕ ಹಾಗೂ ಸಂಸ್ಥಾಪಕ ಡಾ ಶಂಕರ್ ಲಾಲ್ ಜಾರ್ಜ್.
ಇದನ್ನೂ ಓದಿ:ವೈಭವದ ಮದುವೆಗೆ ಹೇಳಿ ಮಾಡಿಸಿದ ಜಾಗ ಈ ಪ್ಯಾಲೇಸ್.. 347 ರೂಮ್ಗಳಿರುವ ಈ ಭವ್ಯ ಬಂಗಲೆ ಇರುವುದೆಲ್ಲಿ?
2015ರಲ್ಲಿ ಡಾ. ಜಾರ್ಜ್ ತಮ್ಮ ಪ್ರಾಂಶುಪಾಲ ವೃತ್ತಿಯಿಂದ ನಿವೃತ್ತಗೊಂಡರು. ಆರಂಭದಲ್ಲಿಯೇ ಪರಿಸರ ಪ್ರೇಮಿಯಾಗಿದ್ದ ಜಾರ್ಜ್ ಬಂಜರು ಬಿಟ್ಟವನ್ನು ಹಸಿರು ಕ್ಷೇತ್ರವನ್ನಾಗಿ ಪರಿವರ್ತಿಸಲು ಪಣತೊಟ್ಟರು. ಇಂದೋರ್ನ ಮಹೋದಲ್ಲಿ ಜಾಗವೊಂದನ್ನು ಖರೀದಿ ಮಾಡಿ ಸ್ಕೂಲ್ ಮತ್ತು ಕಾಲೇಜ್ನ್ನು ಶುರು ಮಾಡಿದರು ಆದ್ರೆ ಅದು ಕೈ ಹಿಡಿಯಲಿಲ್ಲ. ಆಗ ಕಾಡನ್ನು ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಿದರು ಜಾರ್ಜ್.
74 ವರ್ಷದ ಜಾರ್ಜ್ ಬೇವು, ನಿಂಬೆ, ಆಶ್ವತ್ಥಮರಗಳನ್ನು ನೆಟ್ಟರು, ದಿನ ಕಳೆದಂತೆ ಗಿಡಗಳನ್ನು ನೆಡುವ ಸಂಖ್ಯೆ ಹೆಚ್ಚಾಯ್ತು ಹಾಗೂ ಅನೇಕ ರೀತಿಯ ತಳಿಯ ಮರಗಳನ್ನು ಕೂಡ ಡಾ ಜಾರ್ಜ್ ಬೆಳೆದರು 2016 ರಿಂದ 2024ರವರೆಗೆ ಅಂದ್ರೆ ಎಂಟು ವರ್ಷದೊಳಗೆ ಜಾರ್ಜ್ ಒಟ್ಟು 40 ಸಾವಿರ ಗಿಡಿಗಳನ್ನು ನೆಟ್ಟರು ಅವುಗಳಲ್ಲಿ ಒಟ್ಟು 500 ವಿಶೇಷ ತಳಿಗಳ ಮರಗಳು ಇವೆ. ಕಲ್ಲು, ಬಂಡೆಗಳಿಂದಲೇ ಕೂಡಿದ್ದ ಬಂಜರು ಬೆಟ್ಟವನ್ನು ಹಚ್ಚ ಹಸಿರನ್ನಾಗಿಸಿ ಅಲ್ಲಿ ಕಲ್ಪವೃಕ್ಷವನ್ನು ಕೂಡ ಬೆಳೆದಿದ್ದಾರೆ. ಕೇಸರಿಯ ಸಸ್ಯಗಳಿವೆ. ರುದ್ರಾಕ್ಷಿಯ ಗಿಡಗಳಿವೆ. ಸೇಬು, ಡ್ರ್ಯಾಗನ್, ಆಲೀವ್ಸ್ ಲಿಚಿ, ಆಫ್ರಿಕನ್ ಟುಲಿಪ್ಸ್ ಹೂವಿನ ಸಸ್ಯಗಳು ಹಾಗೂ ಏಲಕ್ಕಿಯನ್ನು ಕೂಡ ಬೆಳೆದಿದ್ದಾರೆ.
ಇದನ್ನೂ ಓದಿ: ಭಾರತದ ಶ್ರೀಮಂತೆ ಮಹಾರಾಣಿ ಯಾರು? ಸ್ಯಾರಿ ಕಲೆಕ್ಷನ್ನಲ್ಲಿ ನೀತಾ ಅಂಬಾನಿಯಂತೆ ಈಕೆ ಫೇಮಸ್
ಕೇಶಾರ ಪರ್ವತದಲ್ಲಿ ಕಟ್ಟಿಗೆ ಒದಗಿಸುವ ಮರಗಳನ್ನು ಕೂಡ ಬೆಳೆದಿದ್ದಾರೆ ತೇಗದ ಮರ, ರೋಸ್ವುಡ್, ಗಂಧದ ಮರ, ಮಹೋಗಾನಿ, ಆಳದ ಮರ, ಸೇರಿ ಹಲವು ರೀತಿಯ ಬೃಹತ್ ಮರಗಳನ್ನು ಕೂಡ ಜಾರ್ಜ್ ಬೆಳೆದಿದ್ದಾರೆ. ಸುಮಾರು 15 ಸಾವಿರ ಮರಗಳು ಸುಮಾರು 12 ಅಡಿ ಎತ್ತರದಲ್ಲಿ ಬೆಳೆದಿವೆ. ಕಾಶ್ಮೀರವನ್ನು ಹೊರತುಪಡಿಸಿದರೆ ನಮಗೆ ಕೇಶವಾರ ಪರ್ವತದಲ್ಲಿಯೇ ಕೇಸರಿಯ ಹೂವುಗಳು ಕಾಣಸಿಗುವುದು. 2021ರಲ್ಲಿ 25 ಗಿಡಗಳು ಕೇಸರಿ ಹೂವುಗಳನ್ನು ಬಿಟ್ಟಿದ್ದು ಜಾರ್ಜ್ ಅವರ ದೊಡ್ಡ ಸಾಧನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ