ಮತ್ತೊಂದು ಘೋರ ದುರಂತ.. 3ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ; ಭಯಾನಕ ವಿಡಿಯೋ ಸೆರೆ!

author-image
Veena Gangani
Updated On
ಮತ್ತೊಂದು ಘೋರ ದುರಂತ.. 3ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ; ಭಯಾನಕ ವಿಡಿಯೋ ಸೆರೆ!
Advertisment
  • ಬೆಳಗ್ಗೆ ಶಾಲೆಯಲ್ಲಿ ಇದ್ದಾಗಲೇ ಏಕಾಏಕಿ ಕುಸಿದು ಬಿದ್ದಿದ್ದಾಳೆ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಸಿಸಿಟಿವಿ ದೃಶ್ಯ
  • ಶಾಲೆಯ ಪ್ರಾಂಶುಪಾಲೆ ಶರ್ಮಿಷ್ಠ ಸಿನ್ಹಾ ವಿದ್ಯಾರ್ಥಿ ಬಗ್ಗೆ ಏನಂದ್ರು?

ಮನುಷ್ಯನಿಗೆ ಸಾವು ಯಾವ ಸಮಯದಲ್ಲಿ ಬರುತ್ತೆ ಅಂತ ಹೇಳೋದಕ್ಕೆ ಆಗೋದಿಲ್ಲ. ವಯಸ್ಸಾಗಿದ್ದ ಸಾವು ಬರೋದು ಸಾಮಾನ್ಯ. ಆದ್ರೆ, ಇನ್ನೂ ಏನೂ ಅರಿಯದ ಕಂದಮ್ಮ ಅರ್ಧಕ್ಕೆ ತನ್ನ ಜೀವನ ಪಯಣವನ್ನು ಮುಗಿಸೋದು ಅಂದ್ರೆ ಎಂಥವರಿಗಾದರೂ ಕರುಳು ಚುರ್ ಅನೀಸುತ್ತೆ.

ಇದನ್ನೂ ಓದಿ:ಅಯ್ಯೋ ಕಂದಮ್ಮ.. ರಾಜ್ಯದ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ!

ಮೊನ್ನೆಯಷ್ಟೇ ಚಾಮರಾಜನಗರದ ಸೆಂಟ್​​ ಫ್ರಾನ್ಸಿಸ್​​​ ಶಾಲೆಯಲ್ಲಿ ಓದುತ್ತಿದ್ದ 9 ವರ್ಷದ ತೇಜಸ್ವಿನಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಳು. ಶಾಲೆಯಲ್ಲಿ ಕುಸಿದು ಬಿದ್ದಿದ್ದ ವಿದ್ಯಾರ್ಥಿನಿ ತೇಜಸ್ವಿನಿಗೆ ಕಾರ್ಡಿಯಾಕ್ ಅರೆಸ್ಟ್​ ಆಗಿತ್ತು. ಇದೀಗ ಇಂತಹದ್ದೆ ಮತ್ತೊಂದು ಘೋರ ದುರಂತ ಸಂಭವಿಸಿದೆ. ವಿದ್ಯಾರ್ಥಿನಿ ಕುಸಿದು ಬಿಳುತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

publive-image

ಅಹಮದಾಬಾದ್‌ನ ಝೆಬಾರ್ ಶಾಲೆಯ 3 ನೇ ತರಗತಿಯ ವಿದ್ಯಾರ್ಥಿನಿಯು ಶಾಲೆಯ ಲಾಬಿಯಲ್ಲಿ ಅಸ್ವಸ್ಥತೆಗೊಂಡು ಬೆಂಚ್ ಮೇಲೆ ಕುಳಿತುಕೊಂಡಿದ್ದಾಕೆ ಏಕಾಏಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದಾದ ಕೆಲವು ಸೆಕೆಂಡುಗಳ ನಂತರ ಹತ್ತಿರದಲ್ಲೇ ನಿಂತುಕೊಂಡಿದ್ದ ಶಿಕ್ಷಕರು ಅವಳ ಸಹಾಯಕ್ಕೆ ಧಾವಿಸುತ್ತಾರೆ. ಕೂಡಲೇ ಶಿಕ್ಷಕರು ಬಾಲಕಿಗೆ ಸಿಪಿಆರ್ ನೀಡಲು ಪ್ರಯತ್ನಿಸಿದ್ದಾರೆ. ಬಳಿಕ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವಿದ್ಯಾರ್ಥಿ ಅಷ್ಟೋತ್ತಿಗೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.


">January 10, 2025

ಶಾಲೆಯ ಪ್ರಾಂಶುಪಾಲೆ ಶರ್ಮಿಷ್ಠ ಸಿನ್ಹಾ ಪ್ರಕಾರ, ಬಾಲಕಿಗೆ ಈ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆದರೆ, ಶುಕ್ರವಾರ ಅಸ್ವಸ್ಥಳಾಗಿದ್ದ ಆಕೆ ಶಾಲೆಯ ಲಾಬಿಯಲ್ಲಿ ಬೆಂಚ್ ಮೇಲೆ ಕುಳಿತು ಕುಸಿದು ಬಿದ್ದಿದ್ದಾಳೆ. ಬಾಲಕಿಗೆ ಉಸಿರಾಟದ ತೊಂದರೆ ಇದೆ ಎಂದು ಸಿನ್ಹಾ ಹೇಳಿದ್ದಾರೆ. ನಂತರ ಆಕೆಯನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟೋತ್ತಿಗೆ ಅವಳು ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ಸಂಶೋಧನೆಗಳ ಪ್ರಕಾರ ವಿದ್ಯಾರ್ಥಿಗೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇನ್ನೂ ಮೃತ ವಿದ್ಯಾರ್ಥಿನಿಯ ಪೋಷಕರು ಮುಂಬೈನಲ್ಲಿ ವಾಸಿಸುತ್ತಿದ್ದರು. ಆದರೆ ವಿದ್ಯಾರ್ಥಿನಿ ಅಹಮದಾಬಾದ್‌ನಲ್ಲಿ ತನ್ನ ಅಜ್ಜಿಯರೊಂದಿಗೆ ಇದ್ದಳಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment