/newsfirstlive-kannada/media/post_attachments/wp-content/uploads/2024/08/80-STUDENTS-HOSPITALIZED.jpg)
ಮುಂಬೈ: ಬಿಸ್ಕೆಟ್ ತಿಂದ ಕಾರಣಕ್ಕೆ ಸುಮಾರು 80 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ಘಟನೆ ಮಹಾರಾಷ್ಟ್ರದ ಛತ್ರಪತಿ ಶಂಭಾಜಿನಗರ ಜಿಲ್ಲೆಯಲ್ಲಿ ನಡೆದಿದೆ. ಪೌಷ್ಟಿಕಾಂಶ ಆಹಾರ ವಿತರಣೆ ಕಾರ್ಯಕ್ರಮಲ್ಲಿ ನೀಡಲಾದ ಬಿಸ್ಕೆಟ್ ತಿಂದ ಕೆಕೆಟ್ ಜಲಗಾಂವ್​ ಗ್ರಾಮದ 80 ವಿದ್ಯಾರ್ಥಿಗಳು ವಾಂತಿ ಬೇಧಿಯಿಂದ ನರಳಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ:VIDEO: ಕ್ಯಾಮರಾದಲ್ಲಿ ಸೆರೆಯಾಯ್ತು ಲಂಚಾವತಾರ; ಬಂದ ಹಣ ಹಂಚಿಕೊಂಡು ಸಿಕ್ಕಿಬಿದ್ದ ಪೊಲೀಸ್ರು..!
ಬಿಸ್ಕೆಟ್ ತಿಂದ ಮೇಲೆ ವಾಂತಿ ಬೇಧಿಯಿಂದ ಮಕ್ಕಳು ಬಳಲುತ್ತಿರುವುದು ಗಮನಕ್ಕೆ ಬಂದ ಮೇಲೆ ಸ್ಥಳೀಯ ಆಡಳಿತ ಹಾಗೂ ಗ್ರಾಮದ ಹಿರಿಯರೆಲ್ಲರೂ ಸೇರಿ ವಾಹನಗಳ ವ್ಯವಸ್ಥೆ ಮಾಡಿ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಇದನ್ನೂ ಓದಿ:ಕೋಲ್ಕತ್ತಾ ವೈದ್ಯೆ ಸಾವಿಗೆ ಮನಮಿಡಿದ IMA ಅಧ್ಯಕ್ಷ; ಕಣ್ಣೀರು ತರಿಸುತ್ತೆ ಅಶೋಕನ್ ಭಾವುಕ​ ಪತ್ರ
ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಎಲ್ಲಾ ಮಕ್ಕಳನ್ನು ದಾಖಲಿಸಲಾಗಿದ್ದು, ಸದ್ಯ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಾಬಾ ಸಾಹೇಬ್ ಘುಗೇ ಮಾತನಾಡಿ ಬೆಳಗ್ಗೆ ಸುಮಾರು 8.30ಕ್ಕೆ ಒಟ್ಟು 257 ವಿದ್ಯಾರ್ಥಿಗಳು ಬಿಸ್ಕೆಟ್​ನ್ನು ತಿಂದಿದ್ದಾರೆ. 257 ಮಕ್ಕಳಲ್ಲಿ ಫುಡ್ ಪಾಯ್ಸನಿಂಗ್​ ಲಕ್ಷಣಗಳು ಕಂಡು ಬಂದಿವೆ. ಅವರಲ್ಲಿ 153 ಮಕ್ಕಳನ್ನ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಅವರಲ್ಲಿ ಕೆಲವರಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದ್ದು, ಉಳಿದ 80 ಮಕ್ಕಳನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಾಗಿದೆ. ಅವರ ಆರೋಗ್ಯವು ಸದ್ಯ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಉಳಿದ ಕೆಲವು ಮಕ್ಕಳ ಪರಿಸ್ಥಿತಿ ಗಂಭೀರವಾದ ಕಾರಣ ಅವರನ್ನು ಛತ್ರಪತಿ ಶಂಭಾಜಿನಗರ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವೈದ್ಯಾಧಿಕಾರಿ ಹೇಳಿದ್ದಾರೆ. ಗ್ರಾಮದ ಶಾಲೆಯಲ್ಲಿ ಒಟ್ಟು 296 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದ್ಯ ಘಟನೆ ಕುರಿತು ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ